Advertisement

Box office: ʼಏಜೆಂಟ್‌ʼ,ʼಪೊನ್ನಿಯಿನ್ ಸೆಲ್ವನ್ʼ -2: ಮೊದಲ ದಿನ ಕಮಾಲ್‌ ಮಾಡಿದ್ಯಾರು?

11:02 AM Apr 29, 2023 | Team Udayavani |

ಚೆನ್ನೈ/ ಹೈದರಾಬಾದ್: ಸೌತ್‌ ಸಿನಿಮಾ ಪ್ರಿಯರಿಗೆ ಈ ವಾರ ಭರ್ಜರಿ ಮನರಂಜನೆ ಔತಣಯೇ ಸಿಕ್ಕಿದೆ. ಟಾಲಿವುಡ್‌ ಹಾಗೂ ಕಾಲಿವುಡ್‌ ನಲ್ಲಿ ಎರಡು ಬಿಗ್‌ ಬಜೆಟ್‌ ಮೂವಿಗಳು ರಿಲೀಸ್‌ ಆಗಿವೆ.

Advertisement

ಅಖಿಲ್‌ ಅಕ್ಕಿನೇನಿ ಅವರ ʼಏಜೆಂಟ್‌ʼ ಹಾಗೂ ಮಣಿರತ್ನಂ ಅವರ ʼಪೊನ್ನಿಯಿನ್ ಸೆಲ್ವನ್ʼ -2 ಸಿನಿಮಾ ರಿಲೀಸ್‌ ಆಗಿದೆ. ಎರಡೂ ಸಿನಿಮಾಗಳು ಆರಂಭಿಕವಾಗಿ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್‌ ಪಡೆದುಕೊಂಡಿದೆ.

ಅಖಿಲ್‌ ಅಕ್ಕಿನೇನಿ ವರ್ಷಾನುಗಟ್ಟಲೆ ಪರಿಶ್ರಮಪಟ್ಟು ಮಾಸ್‌ ಅವತಾರದಲ್ಲಿ ಕಾಣಿಸಿಕೊಂಡ ʼಏಜೆಂಟ್‌ʼ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸುರೇಂದ್ರ ರೆಡ್ಡಿ ಅವರ ಸಿನಿಮಾದಲ್ಲಿ ಅಖಿಲ್ ಅಕ್ಕಿನೇನಿ ಪರಿಶ್ರಮ ಎದ್ದು ಕಾಣುತ್ತದೆ. ಆ್ಯಕ್ಷನ್‌ ದೃಶಗಳು ಗಮನ ಸೆಳೆಯುತ್ತದೆ.

ಅಖಿಲ್ ಅಕ್ಕಿನೇನಿ ಅವರಿಗೆ ಫ್ಯಾನ್‌ ಬೇಸ್‌ ದೊಡ್ಡದಿದೆ. ಪ್ಯಾನ್‌ ಇಂಡಿಯಾದಲ್ಲಿ ರಿಲೀಸ್‌ ಆದ ಸಿನಿಮಾ ಮೊದಲ ಎಲ್ಲಾ ಭಾಷೆಯಲ್ಲಿ ಸೇರಿ 7 ಕೋಟಿ ರೂ. ಕಲೆಕ್ಷನ್‌ ಮಾಡಿದೆ. 80 ಕೋಟಿ ರೂ. ಬಜೆಟ್‌ ನಲ್ಲಿ ತಯಾರಾದ ಏಜೆಂಟ್‌ ವೀಕ್‌ ಎಂಡ್‌ ನಲ್ಲಿ ಹೆಚ್ಚಿನ ಕಮಾಯಿ ಮಾಡುವ ನಿರೀಕ್ಷೆಯಿದೆ.

ಅಖಿಲ್ ಅಕ್ಕಿನೇನಿ, ಮಮ್ಮುಟ್ಟಿ, ಡಿನೋ ಮೋರಿಯಾ, ಸಾಕ್ಷಿ ವೈದ್ಯ ಮತ್ತು ವಿಕ್ರಮಜೀತ್ ವಿರ್ಕ್ ಮುಂತಾದ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.

Advertisement

ಇದನ್ನೂ ಓದಿ: 46ನೇ ಸಿನಿಮಾದ ಪ್ರೋಮೋ ಶೂಟ್..‌ ಕಿಚ್ಚನ ಬಿಗ್‌ ಅಪ್ಡೇಟ್‌ಗೆ ಖುಷ್‌ ಆದ ಫ್ಯಾನ್ಸ್

ಇನ್ನು ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾಗಳಲ್ಲಿ ಒಂದಾಗಿರುವ ಮಣಿರತ್ನಂ ಅವರ ʼಪೊನ್ನಿಯಿನ್ ಸೆಲ್ವನ್ʼ -2 ಸಿನಿಮಾ ಮೊದಲ ದಿನವೇ ದೊಡ್ಡಮಟ್ಟದಲ್ಲಿ ಓಪನಿಂಗ್‌ ಪಡೆದುಕೊಂಡಿದೆ. ಬಹು ತಾರಾಂಗಣವುಳ್ಳ ಸಿನಿಮಾಕ್ಕೆ ಅಂದುಕೊಂಡಂತೆ ಪ್ರೇಕ್ಷಕರು ಪಾಸಿಟಿವ್‌ ರೆಸ್ಪಾನ್ಸ್‌ ನೀಡಿದ್ದಾರೆ.

ಕಲ್ಕಿ ಕೃಷ್ಣಮೂರ್ತಿಯವರ ಕಾದಂಬರಿಯನ್ನು ಆಧಾರಿಸಿರುವ ಸಿನಿಮಾ ಅದ್ದೂರಿ ಮೇಕಿಂಗ್‌ , ಮ್ಯೂಸಿಕ್‌ ನಿಂದ ಗಮನ ಸೆಳೆಯುತ್ತದೆ.

ಅಡ್ವಾನ್ಸ್‌ ಬುಕ್‌ ಮೂಲಕ 10 ಕೋಟಿ ರೂ. ಗಳಿಸಿದ್ದ ಸಿನಿಮಾ ಮೊದಲ ದಿನವೇ ಎಲ್ಲಾ ಭಾಷೆಯಲ್ಲಿ ಸೇರಿ 33-35 ಕೋಟಿ ರೂ.ಗಳಿಸಿದೆ.

ಐಶ್ವರ್ಯಾ ರೈ ಬಚ್ಚನ್, ಕಾರ್ತಿ, ಚಿಯಾನ್ ವಿಕ್ರಮ್, ತ್ರಿಶಾ ಮತ್ತು ಜಯಂ ರವಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಪ್ರಕಾಶ್ ರಾಜ್, ಪ್ರಭು, ಐಶ್ವರ್ಯ ಲಕ್ಷ್ಮಿ, ಸೋಭಿತಾ ಧೂಳಿಪಾಲ, ಜಯರಾಮ್, ಅಶ್ವಿನ್ ಕಾಕುಮನು, ಮೋಹನ್ ರಾಮನ್, ಶರತ್ಕುಮಾರ್ ಮತ್ತು ಪಾರ್ತಿಬನ್ ಮುಂತಾದ ಕಲಾವಿದರ ದಂಡೇ ಸಿನಿಮಾದಲ್ಲಿದೆ.

ಮದ್ರಾಸ್ ಟಾಕೀಸ್ ಮತ್ತು ಲೈಕಾ ಪ್ರೊಡಕ್ಷನ್ಸ್ ಸಿನಿಮಾವನ್ನು ನಿರ್ಮಾಣ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next