Advertisement

ಭಾರತ ವಿರುದ್ಧದ ಸೆಮಿ ಕದನಕ್ಕೂ ಮೊದಲು ಇಂಗ್ಲೆಂಡ್ ಗೆ ಗಾಯದ ಸಮಸ್ಯೆ!

05:44 PM Nov 07, 2022 | Team Udayavani |

ಅಡಿಲೇಡ್: ಐಸಿಸಿ ಟಿ20 ವಿಶ್ವಕಪ್ ನ ಸೂಪರ್ 12 ಹಂತದ ಪಂದ್ಯಗಳು ಮುಗಿದು ಸೆಮಿ ಫೈನಲ್ ಗೆ ಸಜ್ಜಾಗಿದೆ. ನ್ಯೂಜಿಲ್ಯಾಂಡ್- ಪಾಕಿಸ್ಥಾನ, ಭಾರತ – ಇಂಗ್ಲೆಂಡ್ ನಡುವೆ ಸೆಮಿ ಕದನ ನಡೆಯಲಿದೆ.  ಆದರೆ ಇದಕ್ಕೂ ಮೊದಲು ಇಂಗ್ಲೆಂಡ್ ಗೆ ಗಾಯಾಳುಗಳ ಸಮಸ್ಯೆ ಎದುರಾಗಿದೆ.

Advertisement

ಅಂತಿಮ ಸೂಪರ್ 12 ಪಂದ್ಯದ ವೇಳೆ ಗಾಯಗೊಂಡ ಇಂಗ್ಲೆಂಡ್ ಬ್ಯಾಟರ್ ಡೇವಿಡ್ ಮಲಾನ್ ಗುರುವಾರ ಭಾರತ ವಿರುದ್ಧದ ವಿಶ್ವಕಪ್ ಸೆಮಿಫೈನಲ್‌ ಗೆ ಅಲಭ್ಯರಾಗುವ ಸಾಧ್ಯತೆಯಿದೆ.

ಕಳೆದ ಶನಿವಾರ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ಮಲಾನ್‌ ಗೆ ತೊಡೆಸಂದು ಗಾಯವಾಗಿತ್ತು. ಈ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಮಲಾನ್ ಗಾಯಗೊಂಡಿದ್ದರು. ಹೀಗಾಗಿ ಅವರು ಬ್ಯಾಟಿಂಗ್ ಮಾಡಲು ಆಗಮಿಸಲಿಲ್ಲ.

ಇದನ್ನೂ ಓದಿ:29 ವಿಷಕಾರಿ ಹಾವುಗಳೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಬಂಧನ !

ಮಲಾನ್ ಅವರ ಗಾಯದ ಬಗ್ಗೆ ಉಪನಾಯಕ ಮೊಯಿನ್ ಅಲಿ ಮಾಹಿತಿ ನೀಡಿದ್ದು, “ಅವರು ನಮ್ಮ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ನನಗೆ ಗೊತ್ತಿಲ್ಲ ಆದರೆ ಮಲಾನ್ ಅವರ ಗಾಯ ಉತ್ತಮವಾಗಿ ಕಾಣುತ್ತಿಲ್ಲ.” ಎಂದಿದ್ದಾರೆ.

Advertisement

ತನ್ನ ಸೂಪರ್ 12 ಗ್ರೂಪ್ 1 ರಲ್ಲಿ ಎರಡನೇ ಸ್ಥಾನ ಪಡೆದ ಇಂಗ್ಲೆಂಡ್ ಗುರುವಾರ ಗ್ರೂಪ್ 2ರ ಅಗ್ರಸ್ಥಾನದಲ್ಲಿರುವ ಭಾರತದೊಂದಿಗೆ ಸೆಣಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next