Advertisement

ಐಸಿಸಿ ಅಧ್ಯಕ್ಷರ ರೇಸ್‌ನಲ್ಲಿ ವಿಂಡೀಸಿನ ಡೇವ್‌ ಕ್ಯಾಮರಾನ್‌

02:21 AM Jun 30, 2020 | Team Udayavani |

ಕಿಂಗ್‌ಸ್ಟನ್‌ (ಜಮೈಕಾ): ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿಯ ಮಾಜಿ ಅಧ್ಯಕ್ಷ ಡೇವ್‌ ಕ್ಯಾಮರಾನ್‌ ಐಸಿಸಿ ಅಧ್ಯಕ್ಷರ ರೇಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

ಭಾರತದ ಶಶಾಂಕ್‌ ಮನೋಹರ್‌ ಅವರ ಐಸಿಸಿ ಅಧ್ಯಕ್ಷ ಅವಧಿ ಈ ತಿಂಗಳ ಅಂತ್ಯಕ್ಕೆ ಕೊನೆಗೊಳ್ಳಲಿದ್ದು, ಇವರ ಉತ್ತರಾಧಿಕಾರಿಯಾಗಲು ದೊಡ್ಡ ಕ್ರಿಕೆಟ್‌ ದೇಶಗಳ ಅಭ್ಯರ್ಥಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ, ಇಸಿಬಿ ಅಧ್ಯಕ್ಷ ಕಾಲಿನ್‌ ಗ್ರೇವ್‌ ಇವರಲ್ಲಿ ಪ್ರಮುಖರು.

“ಕ್ರಿಕೆಟ್‌ ವೇಳಾಪಟ್ಟಿಯ ಸ್ವರೂಪವನ್ನು ಬದಲಿಸುವುದು, ಸೀಮಿತ ಸಂಖ್ಯೆಯ ಪಂದ್ಯಾವಳಿಗಳಿಂದ ಹೆಚ್ಚು ಆದಾಯ ಬರುವಂತೆ ಮಾಡುವುದು, ಅಮೆರಿಕದಲ್ಲಿ ಕ್ರಿಕೆಟನ್ನು ಹೆಚ್ಚು ಜನಪ್ರಿಯಗೊಳಿಸುವುದು ನನ್ನ ಯೋಜನೆಗಳಾಗಿವೆ’ ಎಂಬುದಾಗಿ ಡೇವ್‌ ಕ್ಯಾಮರಾನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next