ದಾವಣಗೆರೆ: ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 12 ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು, ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 50 ವರ್ಷದ ವೃದ್ಧೆ (ರೋಗಿ ನಂಬರ್ 14411)ಯನ್ನು ಸೋಮವಾರ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಮಂಗಳವಾರ ಮೃತಪಟ್ಟಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 8ಕ್ಕೇರಿದೆ.
ರೋಗಿ ನಂಬರ್ 9890ರ ಸಂಪರ್ಕದಿಂದ 40 ವರ್ಷದ ಮಹಿಳೆ (ರೋಗಿ ನಂಬರ್ 14400), 16 ವರ್ಷದ ಬಾಲಕಿಗೆ (ರೋಗಿ ನಂಬರ್ 14401) ಸೋಂಕು ಕಾಣಿಸಿಕೊಂಡಿದೆ. ರೋಗಿ ನಂಬರ್ 10387ರ ಸಂಪರ್ಕದಿಂದ 50 ವರ್ಷದ ಮಹಿಳೆ (ರೋಗಿ ನಂಬರ್ 14406), 27 ವರ್ಷದ ವ್ಯಕ್ತಿ (ರೋಗಿ ನಂಬರ್ 14407), 26 ವರ್ಷದ ಮಹಿಳೆ (ರೋಗಿ ನಂಬರ್ 14408), 76 ವರ್ಷದ ವೃದ್ಧೆ (ರೋಗಿ ನಂಬರ್ 14409) ಸೋಂಕಿಗೆ ಒಳಗಾಗಿದ್ದಾರೆ. 75 ವರ್ಷದ ವೃದ್ಧ (ರೋಗಿ ನಂಬರ್ 14402), 35 ವರ್ಷದ ಮಹಿಳೆ (ರೋಗಿ ನಂಬರ್ 14403), 43 ವರ್ಷದ ವ್ಯಕ್ತಿ (ರೋಗಿ ನಂಬರ್ 14404), 9 ವರ್ಷದ ಬಾಲಕಿ (ರೋಗಿ ನಂಬರ್ 14405) ಸೋಂಕು ಕಾಣಿಸಿಕೊಂಡಿದೆ.
ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ 34 ವರ್ಷದ ವ್ಯಕ್ತಿ (ರೋಗಿ ನಂಬರ್ 14410) ಸೋಂಕು ಕಾಣಿಸಿಕೊಂಡಿದೆ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 50 ವರ್ಷದ ವೃದ್ಧೆ (ರೋಗಿ ನಂಬರ್ 14411) ಸೋಂಕಿಗೆ ತುತ್ತಾಗಿ, ಪ್ರಾಣ ಕಳೆದುಕೊಂಡಿದ್ದಾರೆ. ಮಂಗಳವಾರ ಮೃತ ವೃದ್ಧೆಯಲ್ಲಿ ಸೋಂಕು ಇದ್ದಿದ್ದು ಖಚಿತವಾಗಿದೆ.
ಕೋವಿಡ್ ನಿಂದ ಗುಣಮುಖರಾದ ರೋಗಿ ನಂಬರ್ 9889, 9894,9893, 9892, 10385, 10388, 10387, 10389 ಮಂಗಳವಾರ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಡಿಸಾcರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 309 ಜನರಿಗೆ ಸೋಂಕು ತಗುಲಿದ್ದು, ಮಂಗಳವಾರ 8 ಜನರು ಒಳಗೊಂಡಂತೆ 265 ಜನರು ಗುಣಮುಖರಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಎಂಟು ಜನರು ಮೃತಪಟ್ಟಿದ್ದು, 36 ಸಕ್ರಿಯ ಪ್ರಕರಣಗಳಿವೆ.