Advertisement

Davanagere; ಬೆಲೆ ಏರಿಕೆ ಖಂಡಿಸಿ ಬಿಜೆಪಿ ಜಿಲ್ಲಾ ರೈತಮೋರ್ಚಾದಿಂದ ಪ್ರತಿಭಟನೆ

01:16 PM Jul 01, 2024 | Team Udayavani |

ದಾವಣಗೆರೆ: ಪೆಟ್ರೋಲ್, ಡಿಸೇಲ್, ಹಾಲು ಸೇರಿದಂತೆ ಇನ್ನಿತರ ವಸ್ತುಗಳ ದರ ಏರಿಕೆ ಖಂಡಿಸಿ, ಬಿಜೆಪಿ ಜಿಲ್ಲಾ ರೈತಮೋರ್ಚಾ ನೇತೃತ್ವದಲ್ಲಿ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ಹಸು, ಟಿಸಿಯೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಫೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

ಇತ್ತೀಚೆಗಷ್ಟೇ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದ್ದ ರಾಜ್ಯ ಸರ್ಕಾರ, ಈಗ ಹಾಲಿನ ದರ ಹೆಚ್ಚಳದ ಬರೆ ಎಳೆದಿದೆ. ಹಾಲಿನ ದರ ಏರಿಕೆ ಹಿಂಪಡೆದು ಹಿಂದಿನ ದರದಲ್ಲಿಯೇ 1 ಲೀಟರ್ ಹಾಲಿನ ಪ್ಯಾಕೆಟ್ ನಲ್ಲಿ 100 ಎಂ.ಎಲ್ ಹೆಚ್ಚಿಸಿ ಮಾರಾಟ ಮಾಡಬೇಕು. ಬಿತ್ತನೆ ಬೀಜಗಳ ದರ ಏರಿಕೆ ಹಿಂಪಡೆಯಬೇಕು. ಏರಿಕೆ ಮಾಡಿರುವ ಪೆಟ್ರೋಲ್ ಡೀಸೆಲ್ ದರ ಹಿಂಪಡೆಯಬೇಕು ಮತ್ತು ರೈತರಿಗೆ ಡೀಸೆಲ್ ದರ ಸಹಾಯಧನ ನೀಡುವ ರೈತಶಕ್ತಿ ಯೋಜನೆಯನ್ನು ಮರು ಜಾರಿಗೊಳಿಸಬೇಕು. ನೀರಾವರಿ ಪಂಪ್ ಸೆಟ್ ಗಳ ವಿದ್ಯುತ್ ಸಂಪರ್ಕಕ್ಕೆ ತಗಲುವ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ರೈತ ವಿದ್ಯಾನಿಧಿ, ಭೂಸಿರಿ ಯೋಜನೆಗಳನ್ನು ಮರು ಜಾರಿಗೊಳಿಸಿ, ರೈತ ಸ್ನೇಹಿ ಆಡಳಿತ ನೀಡಬೇಕು ಎಂದು ಮುಖಂಡರು, ಕಾರ್ಯಕರ್ತರು ಈ ಸಂದರ್ಭದಲ್ಲಿ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next