Advertisement

ರಾಷ್ಟ್ರೀಯ ಶಿಕ್ಷಣ ನೀತಿ ಕೈಬಿಡಲು ವಿದ್ಯಾರ್ಥಿಗಳ ಒತ್ತಾಯ

04:58 PM Nov 12, 2021 | Team Udayavani |

ದಾವಣಗೆರೆ: ನೂತನ ರಾಷ್ಟ್ರೀಯ ಶಿಕ್ಷಣ ನೀತಿಹಿಂಪಡೆಯುವುದು, ಉಚಿತವಾಗಿ ವಿದ್ಯಾರ್ಥಿ ಬಸ್‌ಪಾಸ್‌ ನೀಡಬೇಕು ಎಂದು ಒತ್ತಾಯಿಸಿ ಗುರುವಾರಆಲ್‌ ಇಂಡಿಯಾ ಡೆಮಾಕ್ರಟಿಕ್‌ ಸ್ಟೂಡೆಂಟ್ಸ್‌ಆರ್ಗನೈಜೇಷನ್‌ (ಎಐಡಿಎಸ್‌ಒ) ನೇತೃತ್ವದಲ್ಲಿವಿದ್ಯಾರ್ಥಿಗಳು ನಗರದ ಜಯದೇವ ವೃತ್ತದಲ್ಲಿಪ್ರತಿಭಟನೆ ನಡೆಸಿದರು.

Advertisement

ಕೇಂದ್ರ ಸರ್ಕಾರ ಪ್ರಸಕ್ತ ಶೈಕ್ಷಣಿಕ ವರ್ಷದಿಂದರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಿದ್ಧವಾಗಿದೆ.ನೀತಿಯು ಪ್ರಸ್ತಾವನೆಯಾದಾಗನಿಂದಲೂ ಶಿಕ್ಷಣತಜ್ಞರು, ಉಪನ್ಯಾಸಕರು, ಸಾಹಿತಿಗಳು, ವಿದ್ಯಾರ್ಥಿಗಳು,ಪೋಷಕರು ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಶಿಕ್ಷಣ ಕ್ಷೇತ್ರದಲ್ಲಿತರಲು ಪ್ರಸ್ತಾಪಿಸಿದ್ದ ಹಲವಾರು ಬದಲಾವಣೆಗಳುಅಥವಾ ಸೇರ್ಪಡೆಗಳು, ಹಲವಾರು ಅಂಶಗಳುದೊಡ್ಡ ಮಟ್ಟದ ಚರ್ಚೆ ಮತ್ತು ಭಿನ್ನಾಭಿಪ್ರಾಯಕ್ಕೂಕಾರಣವಾಗಿವೆ. ಶಿಕ್ಷಕರು, ವಿದ್ಯಾರ್ಥಿ ಸಮುದಾಯದಭವಿಷ್ಯ ಮತ್ತು ಶಿಕ್ಷಣದ ಗುಣಮಟ್ಟ ಕಾಪಾಡುವಸದುದ್ದೇಶದಿಂದ ಕೂಡಲೇ ರಾಷ್ಟ್ರೀಯ ಶಿಕ್ಷಣನೀತಿಯನ್ನು ಹಿಂಪಡೆಯಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.

ರಾಜ್ಯ ಸರ್ಕಾರ ಯಾವುದೇ ಪೂರ್ವ ತಯಾರಿಇಲ್ಲದೆ ಅತ್ಯಂತ ತರಾತುರಿಯಲ್ಲಿ ಏಕಾಏಕಿ ರಾಷ್ಟ್ರೀಯಶಿಕ್ಷಣ ನೀತಿ ಭಾಗವಾಗಿರುವ ನಾಲ್ಕು ವರ್ಷದ ಪದವಿಕೋರ್ಸ್‌ ಅನುಷ್ಠಾನಕ್ಕೆ ತರಲಾಗಿದೆ. ಈಗಾಗಲೇಪ್ರಥಮ ವರ್ಷದ ತರಗತಿ ಪ್ರಾರಂಭವೇನೋ ಆಗಿವೆ.ಆದರೆ ರಾಷ್ಟ್ರೀಯ ಶಿಕ್ಷಣ ನೀತಿ ಆಧಾರಿತ ಪಠ್ಯಕ್ರಮವೇತಯಾರಾಗಿಲ್ಲ ಮತ್ತು ಯಾರಿಗೂ ಪಠ್ಯಪುಸ್ತಕಗಳೇಲಭ್ಯವಾಗಿಲ್ಲ.

ಉಪನ್ಯಾಸಕರು, ಅಧ್ಯಾಪಕರಿಗೆ ಸೂಕ್ತತರಬೇತಿಯನ್ನೂ ನೀಡಲಾಗಿಲ್ಲ. ಇಂತಹ ರಾಷ್ಟ್ರೀಯಶಿಕ್ಷಣ ನೀತಿ ವಿದ್ಯಾರ್ಥಿ ಸಮುದಾಯದ ಭವಿಷ್ಯಕ್ಕೆಹಾನಿ ಉಂಟು ಮಾಡುತ್ತಿದೆ. ಇನ್ನೊಂದು ಕಡೆ ಶಿಕ್ಷಣದಗುಣಮಟ್ಟಕ್ಕೆ ಮಾರಕವಾಗುತ್ತಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.ರಾಜ್ಯ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆಜನತೆ, ಶಿಕ್ಷಕರು, ವಿದ್ಯಾರ್ಥಿಗಳು, ಸಂಘಟನೆಗಳ ಅಭಿಪ್ರಾಯಗಳನ್ನು ಪ್ರಜಾತಾಂತ್ರಿಕವಾಗಿಕೂಲಂಕುಷವಾಗಿ ಗಣನೆಗೆ ತೆಗೆದುಕೊಳ್ಳಬೇಕು.

Advertisement

ನೀತಿಯ ಬಗ್ಗೆ ಪರಾಮರ್ಶೆ ಮಾಡಬೇಕು. ನಾಲ್ಕುವರ್ಷದ ಪದವಿ ಕೋರ್ಸ್‌ ತೆಗೆದುಹಾಕಬೇಕು ಎಂದುಆಗ್ರಹಿಸಿದರು. ಸಂಘಟನೆಯ ಜಿಲ್ಲಾ ಕಾರ್ಯದರ್ಶಿಪೂಜಾ ನಂದಿಹಳ್ಳಿ, ಕಾವ್ಯ, ಪುಷ್ಪಾ, ಅಣಬೇರುತಿಪ್ಪೇಸ್ವಾಮಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next