Advertisement

30 ರಿಂದ ರಾಜ್ಯ ಮಟ್ಟದ ವಿವಿಧ ಪ್ರಶಸ್ತಿ ವಿತರಣೆ: ಶೆಣೈ

07:52 PM Oct 28, 2021 | Team Udayavani |

ದಾವಣಗೆರೆ: ಎಸ್ಸೆಸ್ಸೆಲ್ಸಿ ಪ್ರಥಮ ಭಾಷೆಕನ್ನಡದಲ್ಲಿ ಅತಿ ಹೆಚ್ಚು ಅಂಕ ಪಡೆದಮಕ್ಕಳಿಗೆ ಜಿಲ್ಲಾ, ರಾಜ್ಯ ಮಟ್ಟದ ವಿವಿಧಪ್ರಶಸ್ತಿ ವಿತರಣಾ ಸಮಾರಂಭ ಅ. 30,31ಹಾಗೂ ನ. 1 ರಂದು ಶ್ರೀ ಸಿದ್ಧಗಂಗಾವಿದ್ಯಾಸಂಸ್ಥೆಯಲ್ಲಿ ನಡೆಯಲಿದೆ ಎಂದು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಸಂಸ್ಥಾಪಕ ಅಧ್ಯಕ್ಷ ಸಾಲಿಗ್ರಾಮ ಗಣೇಶ್‌ಶೆಣೈ ತಿಳಿಸಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಶಾಲಾ ಹಂತದಲ್ಲೇಮಕ್ಕಳಿಗೆ ಕನ್ನಡದ ಬಗ್ಗೆ ಅಭಿಮಾನ,ಅಭಿರುಚಿ ಬೆಳೆಸುವ ಉದ್ದೇಶದಿಂದಜಿಲ್ಲಾ ಮಟ್ಟದ ಕನ್ನಡ ಕುವರ, ಕುವರಿ,ರಾಜ್ಯ ಮಟ್ಟದ ಸರಸ್ವತಿ ಪುರಸ್ಕಾರ, ಕನ್ನಡಕೌಸ್ತುಭ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆಎಂದರು.ಶನಿವಾರ ಬೆಳಗ್ಗೆ 10:35ಕ್ಕೆ ಖ್ಯಾತಗಾಯಕ ಪುತ್ತೂರು ನರಸಿಂಹ ನಾಯಕ್‌ಸಮಾರಂಭ ಉದ್ಘಾಟಿಸುವರು.

ಕರ್ನಾಟಕಸುಗಮ ಸಂಗೀತ ಪರಿಷತ್ತಿನ ರಾಜ್ಯಾಧ್ಯಕ್ಷವೈ.ಕೆ. ಮುದ್ದುಕೃಷ್ಣ ಅಧ್ಯಕ್ಷತೆ ವಹಿಸುವರು.ನಗರ ಶ್ರೀನಿವಾಸ್‌ ಉಡುಪ, ಶ್ರೀ ಸಿದ್ಧಗಂಗಾವಿದ್ಯಾಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್‌ ಡಿಸೌಜಭಾಗವಹಿಸುವರು. ಕನ್ನಡದಲ್ಲಿ 125ಕ್ಕೆ120 ರಿಂದ 124 ರವರೆಗೆ ಅಂಕ ಪಡೆದ375 ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಕನ್ನಡ ಕುವರ-ಕುವರಿ ಪ್ರಶಸ್ತಿ ನೀಡಿಗೌರವಿಸಲಾಗುವುದು ಎಂದರು.

ಭಾನುವಾರ ಬೆಳಗ್ಗೆ 10:35ಕ್ಕೆಎರಡನೇ ದಿನದ ಕಾರ್ಯಕ್ರಮವನ್ನುಕಾಸರಗೋಡಿನ ಯಕ್ಷಗಾನ ಕಲಾವಿದೆಜಯಲಕ್ಷ್ಮೀ ಕಾರಂತ್‌ ಉದ್ಘಾಟಿಸುವರು.ಉತ್ಛ ನ್ಯಾಯಾಲಯದ ವಿಶ್ರಾಂತನ್ಯಾಯಮೂರ್ತಿ ಅರಳಿ ನಾಗರಾಜ್‌ಅಧ್ಯಕ್ಷತೆ ವಹಿಸುವರು. ದಾವಣಗೆರೆತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಕಟಪೂರ್ವ ಅಧ್ಯಕ್ಷ ಬಿ. ವಾಮದೇವಪ್ಪ,ಮಲ್ಯಾಡಿ ಪ್ರಭಾಕರ ಶೆಟ್ಟಿ, ಸಿದ್ಧಗಂಗಾಪದವಿಪೂರ್ವ ಕಾಲೇಜಿನ ನಿರ್ದೇಶಕ ಡಾ|ಡಿ.ಎಸ್‌. ಜಯಂತ್‌ ಭಾಗವಹಿಸುವರು.625 ಕ್ಕೆ 600ಕ್ಕೂ ಹೆಚ್ಚು ಅಂಕ ಪಡೆದಂತಹ215 ವಿದ್ಯಾರ್ಥಿಗಳಿಗೆ ಶ್ರೀಮತಿ ಸರಸ್ವತಿದಾಸಪ್ಪ ಶೆಣೈ ಪ್ರತಿಷ್ಠಾನದಿಂದ ರಾಜ್ಯಮಟ್ಟದ ಸರಸ್ವತಿ ಪುರಸ್ಕಾರ ಪ್ರಶಸ್ತಿವಿತರಿಸಲಾಗುವುದು ಎಂದು ಮಾಹಿತಿನೀಡಿದರು.ನ. 1 ರಂದು ಬೆಳಗ್ಗೆ 10:35ಕ್ಕೆ ಡಾ|ರೋಹಿಣಿ ಮೋಹನ್‌ ಮೂರನೇ ದಿನದಕಾರ್ಯಕ್ರಮ ಉದ್ಘಾಟಿಸುವರು.

ಪ್ರಥಮಮಹಿಳಾ ಸಂಗೀತ ನಿರ್ದೇಶಕಿ ಇಂದೂವಿಶ್ವನಾಥ್‌ ಅಧ್ಯಕ್ಷತೆ ವಹಿಸುವರು.ಕೆ.ಎಚ್‌. ಮಂಜುನಾಥ್‌, ಹೇಮಾಶಾಂತಪ್ಪ ಪೂಜಾರಿ, ಶ್ರೀ ಸಿದ್ಧಗಂಗಾವಿದ್ಯಾಸಂಸ್ಥೆ ಅಧ್ಯಕ್ಷ ಡಿ.ಎಸ್‌. ಪ್ರಶಾಂತ್‌,ಕಾರ್ಯದರ್ಶಿ ಡಿ.ಎಸ್‌. ಹೇಮಂತ್‌ ಇತರರುಭಾಗವಹಿಸುವರು. ಕನ್ನಡದಲ್ಲಿ 125ಕ್ಕೆ125 ಪರಿಪೂರ್ಣ ಅಂಕ ಪಡೆದ 265ಮಕ್ಕಳಿಗೆ ಕನ್ನಡ ಕೌಸ್ತುಭ ರಾಜ್ಯ ಪ್ರಶಸ್ತಿಪ್ರದಾನ ಮಾಡಲಾಗುವುದು.

Advertisement

ಕನ್ನಡರಾಜ್ಯೋತ್ಸವದ ಅಂಗವಾಗಿ ಅಂದು ಬೆಳಗ್ಗೆ8ಕ್ಕೆ ಕಲಾಕುಂಚ ಮಹಿಳಾ ವಿಭಾಗದಿಂದಸಾಂಕೇತಿಕವಾಗಿ ಸರಳವಾಗಿ ಕನ್ನಡದಪೇಟ, ಸಮವಸ್ತ್ರದೊಂದಿಗೆ ಮಹಿಳೆಯರುದ್ವಿಚಕ್ರ ವಾಹನಯಾನ (ಬೈಕ್‌ ರ್ಯಾಲಿ)ನಡೆಸುವರು.

ಮೂರು ದಿನಗಳಕಾಲ ಒಟ್ಟು 855 ಮಕ್ಕಳಿಗೆ ಅವರದ್ದೇಭಾವಚಿತ್ರವಿರುವ ಸನ್ಮಾನ ಪತ್ರದೊಂದಿಗೆ ಗೌರವಿಸಲಾಗುವುದು ಎಂದು ತಿಳಿಸಿದರು.ಸಂಸ್ಥೆ ಅಧ್ಯಕ್ಷ ಕೆ.ಎಚ್‌. ಮಂಜುನಾಥ್‌,ಜೆ.ಬಿ. ಲೋಕೇಶ್‌, ಬೇಳೂರು ಸಂತೋಷ್‌ಕುಮಾರ್‌ಶೆಟ್ಟಿ, ಹೇಮಾ ಶಾಂತಪ್ಪಪೂಜಾರಿ, ಜ್ಯೋತಿ ಗಣೇಶ್‌ ಶೆಣೈ,ಶಾಂತಪ್ಪ ಪೂಜಾರಿ, ವಸಂತಿ ಮಂಜುನಾಥ್‌ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next