Advertisement

ಆಸ್ತಿ ವಿವಾದ: ಸುಪಾರಿ ಕೊಟ್ಟು ಚಿಕ್ಕಪ್ಪನ ಕೊಲೆ… ಪ್ರಕರಣ ಭೇದಿಸಿದ ಚೆನ್ನಗಿರಿ ಪೊಲೀಸರು

02:58 PM Dec 02, 2024 | Team Udayavani |

ದಾವಣಗೆರೆ: ಆಸ್ತಿ ಹಾಗೂ ಜಾಗದ ವಿಚಾರವಾಗಿ ಸಂಚು ರೂಪಿಸಿ ಸುಪಾರಿ ನೀಡಿ ಚಿಕ್ಕಪ್ಪನನ್ನೇ ಕೊಲೆ ಮಾಡಿಸಿದ್ದ ಸುಪಾರಿ ಕೊಲೆಗಾರರನ್ನು ಚನ್ನಗಿರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ದಾವಣಗೆರೆ ತಾಲೂಕಿನ ಗೋಪನಾಳ್ ಗ್ರಾಮದ ಸಿದ್ದಲಿಂಗಪ್ಪ ಕೊಲೆಯಾದವರು. ಮೃತ ಸಿದ್ದಲಿಂಗಪ್ಪ ವೃತ್ತಿಯಲ್ಲಿ ಬೋರ್ ಪಾಯಿಂಟ್ ಗುರುತಿಸುವ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು ಅದನ್ನೇ ಅಸ್ತ್ರವನ್ನಾಗಿಸಿಕೊಂಡು ಬೋರ್ ಪಾಯಿಂಟ್ ಮಾಡುವುದಿದೆ ಎಂದು ಕರೆದೊಯ್ದು ಕೊಲೆ ಮಾಡಿರುವುದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ಮೃತ ಸಿದ್ದಲಿಂಗಪ್ಪ ಮತ್ತು ಪ್ರಕರಣದ ಪ್ರಮುಖ ಆರೋಪಿ, ಸಿದ್ದಲಿಂಗಪ್ಪ ಅವರ ಅಣ್ಣನ ಮಗ ಸತೀಶ್ ನಡುವೆ ಆಸ್ತಿ ಮತ್ತು ಜಾಗದ ಸಂಬಂಧ ವ್ಯಾಜ್ಯವಿತ್ತು. ಇದೇ ಕಾರಣಕ್ಕೆ ಸತೀಶ್ ಒಂದು ಲಕ್ಷ ರೂಪಾಯಿ ಸುಪಾರಿ ಕೊಟ್ಟು ಚಿಕ್ಕಪ್ಪನನ್ನೆ ಕೊಲೆ ಮಾಡಿ ಸಿರುವುದು ಬೆಳಕಿಗೆ ಬಂದಿದೆ.

ಕೊಲೆಗೆ ಸಂಬಂಧಿಸಿದಂತೆ ದಾವಣಗೆರೆ ತಾಲೂಕಿನ ಗೋಪನಾಳ್ ಗ್ರಾಮದ ಸತೀಶ, ಪ್ರಭು ಅಲಿಯಾಸ್ ಮಾಸ್ತಿ, ಲಿಂಗದಹಳ್ಳಿ ಗ್ರಾಮದ ರಾಜಪ್ಪ, ದಾವಣಗೆರೆಯ ನಿಟುವಳ್ಳಿಯ ಪ್ರಶಾಂತ್ ನಾಯ್ಕ ಅಲಿಯಾಸ್ ಪಿಲ್ಲಿ ಸುಜಾತ ಸತೀಶ್ ಶಿವಮೂರ್ತೆಪ್ಪ ಎಂಬುವವರನ್ನು ಬಂಧಿಸಲಾಗಿದೆ.

ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ನಲ್ಲೂರು ಭದ್ರಾ ಉಪ ನಾಲೆಯಲ್ಲಿ ಅ. 22 ರಂದು ಅಪರಿಚಿತ ವ್ಯಕ್ತಿಯ ಶವ ಅನುಮಾನಸ್ಪಾದ ರೀತಿಯಲ್ಲಿ ದೊರೆತಿತ್ತು. ಮೃತ ವ್ಯಕ್ತಿ ದಾವಣಗೆರೆ ತಾಲೂಕಿನ ಸಿದ್ದಲಿಂಗಪ್ಪ( 55 ) ಎಂಬುದು ಬೆಳಕಿಗೆ ಬಂದಿತು.

Advertisement

ಸೊಸೆ ದೊಡ್ಡಮ್ಮ ಮಾವ ಸಿದ್ದಲಿಂಗಪ್ಪನ ಸಾವು ಕೊಲೆಯಾಗಿರುವ ಬಗ್ಗೆ ಅನುಮಾನವನ್ನು ವ್ಯಕ್ತ ಪಡಿಸಿ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪ್ರಕರಣವನ್ನು ಭೇದಿಸಲು ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ತಂಡಗಳನ್ನು ರಚನೆ ಮಾಡಿದ್ದು, ಅದರಂತೆ ಪ್ರಕರಣದ ಮೊದಲ ಆರೋಪಿ ಸತೀಶನನ್ನು, ಅ.‌24 ರಂದು ಎರಡನೇ ಆರೋಪಿ ಪ್ರಭು ಅಲಿಯಾಸ್ ಮಾಸ್ತಿ, ಮೂರನೇ ಆರೋಪಿ ಪ್ರಶಾಂತ್ ನಾಯ್ಕ ಮತ್ತು ಅ. 30 ರಂದು ನಾಲ್ಕನೇ ಆರೋಪಿ ಸುಜಾತ, ಐದನೇ ಆರೋಪಿ ಶಿವಮೂರ್ತೆಪ್ಪನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾಗ ಸತೀಶ್, ಸುಜಾತ ಮತ್ತು ಶಿವಮೂರ್ತಪ್ಪ ಆಸ್ತಿ ಹಾಗೂ ಜಾಗದ ವಿಚಾರವಾಗಿ ಸಿದ್ದಲಿಂಗಪ್ಪನನ್ನು ಕೊಲೆ ಮಾಡಿಸಲು ಸಂಚು ರೂಪಿಸಿ, ಕೊಲೆ ಮಾಡಲು ಪ್ರಭು, ಪ್ರಶಾಂತ್ ನಾಯ್ಕಗೆ 1 ಲಕ್ಷ ರೂಪಾಯಿಗೆ ಸುಪಾರಿ ನೀಡಿರುವುದು ಒಪ್ಪಿಕೊಂಡಿದ್ದಾರೆ.

ಅ. 21 ರಂದು ಸಂಜೆ ಸಮಯದಲ್ಲಿ ಸಿದ್ದಲಿಂಗಪ್ಪನ್ನು ಬೋರ್ ಪಾಯಿಂಟ್ ಮಾಡಿಸಬೇಕಾಗಿದೆ ಎಂದು ತೊಗಲೇರಿ ಕ್ರಾಸ್ ನಿಂದ ಆಟೋದಲ್ಲಿ ಚನ್ನಗಿರಿ ತಾಲೂಕು ಹೊನ್ನೆಬಾಗಿ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಪೂರ್ವ ನಿಯೋಜನೆಯಂತೆ ಸಿದ್ದಲಿಂಗಪ್ಪನನ್ನು ಟವೆಲ್ ನಿಂದ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ, ಬಳಿಕ ಶವವನ್ನು ನಲ್ಲೂರು ಸಮೀಪದ ಭದ್ರಾ ಚಾನಲ್ ಗೆ ತಂದು ಶವಕ್ಕೆ ಕಲ್ಲು ಕಟ್ಟಿ ನೀರಿಗೆ ಹಾಕಿರುವುದು ತನಿಖೆಯಲ್ಲಿ ಗೊತ್ತಾಗಿದೆ.

ಇದನ್ನೂ ಓದಿ: Pushpa 2: ಬಹುಕೋಟಿ ʼಪುಷ್ಪ-2ʼನಲ್ಲಿ ಅಭಿನಯಿಸಲು ಕಲಾವಿದರು ಪಡೆದ ಸಂಭಾವನೆ ಎಷ್ಟು?

Advertisement

Udayavani is now on Telegram. Click here to join our channel and stay updated with the latest news.

Next