Advertisement

ಬೆಳಕಿನ ಹಬ್ಬದಲ್ಲಿ ಹಸಿರು ಪಟಾಕಿ ಬಳಸಿ

01:41 PM Oct 26, 2021 | Team Udayavani |

ದಾವಣಗೆರೆ: ದೀಪಾವಳಿ ಹಬ್ಬದಲ್ಲಿ ಹಸಿರು ಪಟಾಕಿಮಾತ್ರ ಮಾರಾಟ ಮಾಡಲು ಅವಕಾಶ ಇದ್ದು,ಸಾರ್ವಜನಿಕರು ಹಸಿರು ಪಟಾಕಿ ಬಳಸಬೇಕು.ಕಟ್ಟುನಿಟ್ಟಾಗಿ ಕೊರೊನಾ ಮಾರ್ಗಸೂಚಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮನವಿ ಮಾಡಿದರು.

Advertisement

ಸೋಮವಾರ ಜಿಲ್ಲಾಧಿಕಾರಿ ಕಚೇರಿಸಭಾಂಗಣದಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿಅವರು ಮಾತನಾಡಿದರು. ಕೊರೊನಾ ಸೋಂಕುತಡೆಗಟ್ಟುವ ನಿಟ್ಟಿನಲ್ಲಿ ದೀಪಾವಳಿ ಹಬ್ಬದ ಆಚರಣೆಗೆರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಹಾಗೂ ಸುಪ್ರೀಂ ಕೋರ್ಟ್‌ ಆದೇಶಗಳನ್ನುಪಾಲಿಸಬೇಕು.

ಸಾರ್ವಜನಿಕರು ಬೆಳಕಿನಹಬ್ಬವಾಗಿರುವ ದೀಪಾವಳಿಯನ್ನು ಸರಳ, ಶ್ರದ್ಧಾ ಭಕ್ತಿಹಾಗೂ ಸುರಕ್ಷಿತವಾಗಿ ಆಚರಿಸಬೇಕು ಎಂದರು.

ಸುಪ್ರೀಂ ಕೋರ್ಟ್‌ ಆದೇಶದಂತೆ ಹಸಿರುಪಟಾಕಿಗಳನ್ನು ಹೊರತುಪಡಿಸಿ ಉಳಿದ ಯಾವುದೇಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ ಹಾಗೂಬಳಸುವಂತಿಲ್ಲ. ಪಟಾಕಿಗಳ ಮಾರಾಟ ಹಾಗೂ ಬಳಕೆಕುರಿತಂತೆ ಕೇಂದ್ರ ಸರ್ಕಾರದ ಸ್ಫೋಟಕ ವಸ್ತುಗಳಉಪ ಮುಖ್ಯ ನಿಯಂತ್ರಕರು ಕಳೆದ ಅ. 12 ರಂದುಮಾರ್ಗಸೂಚಿ ಹೊರಡಿಸಿದ್ದಾರೆ.

ಇದರ ಅನ್ವಯಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಹಸಿರುಪಟಾಕಿ ಹೊರತುಪಡಿಸಿ ಬೇರೆ ಯಾವುದೇ ಪಟಾಕಿಮಾರಾಟ ಮಾಡುವಂತಿಲ್ಲ ಎಂದು ಮಾರಾಟಗಾರರಿಗೆ ಸೂಚಿಸಿದರು.

Advertisement

ಸಂಬಂಧಪಟ್ಟ ಇಲಾಖೆ, ಪ್ರಾ ಧಿಕಾರಗಳಿಂದಅಧಿಕೃತ ಪರವಾನಗಿ ಪಡೆದವರು ಮಾತ್ರ ಪಟಾಕಿಮಾರಾಟ ಮಾಡಬೇಕು. ಪಟಾಕಿ ಮಾರಾಟದಮಳಿಗೆಗಳನ್ನು ನಿಗದಿತ ಸ್ಥಳದಲ್ಲಿ ಮಾತ್ರ ನ. 2 ರಿಂದ6 ರವರೆಗೆ ಮಾತ್ರ ತೆರೆದಿರಬೇಕು. ಬೇರೆ ಸ್ಥಳದಲ್ಲಿಮತ್ತು ದಿನಾಂಕಗಳಲ್ಲಿ ಅಂಗಡಿ ತೆರೆಯಬಾರದು.

ಹಸಿರು ಪಟಾಕಿ ಹೊರತುಪಡಿಸಿ ಯಾವುದೇ ಬಗೆಯಪಟಾಕಿ ಮತ್ತು ಅನಧಿಕೃತವಾಗಿ ಪಟಾಕಿ ಮಾರಾಟಕಂಡುಬಂದಲ್ಲಿ ಪಟಾಕಿಗಳನ್ನು ಜಪ್ತಿ ಮಾಡಿ ಕಾನೂನುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ದಾವಣಗೆರೆಯಲ್ಲಿ 70, ಹರಿಹರದಲ್ಲಿ 15,ಮಲೆಬೆನ್ನೂರಿನಲ್ಲಿ 7, ನ್ಯಾಮತಿಯಲ್ಲಿ 4,ಚನ್ನಗಿರಿಯಲ್ಲಿ 7, ಜಗಳೂರಿನಲ್ಲಿ 2 ಸೇರಿದಂತೆ ಒಟ್ಟು105 ಅರ್ಜಿಗಳು ಸ್ವೀಕೃತಗೊಂಡಿವೆ. ದಾವಣಗೆರೆಹೈಸ್ಕೂಲ್‌ ಮೈದಾನದಲ್ಲಿ ಪಟಾಕಿ ಮಳಿಗೆ ಇಡಲುಅವಕಾಶ ಕಲ್ಪಿಸಲಾಗಿದೆ. ಮಳಿಗೆಗಳಲ್ಲಿ ಸುರಕ್ಷತಾಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ. ರಿಷ್ಯಂತ್‌ ಮಾತನಾಡಿ,ಹಬ್ಬ ಆಚರಣೆ ಭರದಲ್ಲಿ ಸುರಕ್ಷತೆ ಮರೆಯಬಾರದು.

ದಾವಣಗೆರೆಯ ಹೈಸ್ಕೂಲ್‌ ಮೈದಾನದಲ್ಲಿ ಪಟಾಕಿಮಳಿಗೆಗೆ ಅವಕಾಶ ನೀಡಲಾಗಿದೆ.ಮಾರಾಟಗಾರರುಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು.ಸಾರ್ವಜನಿಕರು ಹಸಿರು ಪಟಾಕಿ ಬಗ್ಗೆ ಪರಿಶೀಲಿಸಿಯೇಖರೀದಿಸಬೇಕು ಎಂದರು.ಪಟಾಕಿ ಮಾರಾಟಗಾರರ ಸಂಘದ ಪ್ರತಿನಿ ಧಿಗಳುಮಾತನಾಡಿ, ಕಾನೂನಿಗೆ ಅನುಗುಣವಾಗಿ ಹಾಗೂಮಾರ್ಗಸೂಚಿ ಪಾಲಿಸುವ ಮೂಲಕ ಪಟಾಕಿಮಾರಾಟಕ್ಕೆ ಬದ್ಧರಿದ್ದೇವೆ.

ಪಟಾಕಿ ಮಾರಾಟಮಳಿಗೆಗಳಿರುವ ಆವರಣದಲ್ಲಿ ಹೂವು, ಹಣ್ಣು,ಜ್ಯೂಸ್‌ ಮುಂತಾದ ಮಾರಾಟಗಾರರು ವ್ಯಾಪಾರಮಾಡಲು ಅಂಗಡಿ ಹಾಕುವುದರಿಂದ ಸುರಕ್ಷತೆಹಾಗೂ ಜನಸಂದಣಿ ನಿಯಂತ್ರಣ ಕಾಯ್ದುಕೊಳ್ಳಲುತೊಂದರೆ ಆಗುತ್ತದೆ. ಪರವಾನಗಿ ಇಲ್ಲದವರೂ ತಳ್ಳುಗಾಡಿಗಳಲ್ಲಿ, ಬೀದಿಬದಿಯಲ್ಲಿ ಪಟಾಕಿ ಮಾರಾಟಮಾಡುವುದನ್ನು ತಡೆಗಟ್ಟಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next