ದಾವಣಗೆರೆ: ಅತಿ ಶೀಘ್ರವೇ ಹೊನ್ನಾಳಿ,ನ್ಯಾಮತಿ, ಚನ್ನಗಿರಿ ತಾಲೂಕು ವ್ಯಾಪ್ತಿಒಳಗೊಂಡ ಉಪವಿಭಾಗಾಧಿಕಾರಿ ಕಚೇರಿಯನ್ನುಹೊನ್ನಾಳಿಯಲ್ಲಿ ಪ್ರಾರಂಭಿಸಲಾಗುವುದು ಎಂದುಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ಶನಿವಾರ ಹೊನ್ನಾಳಿ ತಾಲೂಕಿನ ಕುಂದೂರುಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯಕಡೆಗೆ, ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊನ್ನಾಳಿಯಲ್ಲಿಉಪವಿಭಾಗಾಧಿಕಾರಿ ಕಚೇರಿ ಪ್ರಾರಂಭಿಸಬೇಕುಎಂಬ ಬಹು ದಿನಗಳ ಬೇಡಿಕೆಯನ್ನಈಡೇರಿಸಲಾಗುವುದು ಎಂದರು.ಅರ್ಹ ಫಲಾನುಭವಿಗಳು ನೇರವಾಗಿ ವಿವಿಧ ಸಾಮಾಜಿಕ ಸವಲತ್ತು ಪಡೆಯುವಂತಾಗಬೇಕು.
ಮಧ್ಯವರ್ತಿಗಳ ಕಾಟ ತಪ್ಪಿಸಬೇಕು ಎಂಬಉದ್ದೇಶದಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯಕಡೆಗೆ, ಗ್ರಾಮ ವಾಸ್ತವ್ಯಕಾರ್ಯಕ್ರಮವನ್ನುಸರ್ಕಾರಪ್ರಾರಂಭಿಸಿದೆ. ಕೊರೊನಾಕಾರಣಕ್ಕೆ ಸ್ಥಗಿತಗೊಂಡಿದ್ದಕಾರ್ಯಕ್ರಮಕ್ಕೆ ಮತ್ತೆ ಚಾಲನೆನೀಡಲಾಗಿದೆ. ಪ್ರತಿ ತಿಂಗಳಮೂರನೇ ಶನಿವಾರ ಜಿಲ್ಲಾಧಿಕಾರಿಗಳ ನಡೆಹಳ್ಳಿಯ ಕಡೆಗೆ, ಗ್ರಾಮ ವಾಸ್ತವ್ಯ ಕಾರ್ಯಕ್ರಮನಡೆಯಲಿದೆ.
ನವಂಬರ್ ತಿಂಗಳಿನ ಮೂರನೇಶನಿವಾರ ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರದಗ್ರಾಮದಲ್ಲಿ ನಡೆಯುವ ಜಿಲ್ಲಾಧಿಕಾರಿಗಳ ನಡೆಹಳ್ಳಿಯ ಕಡೆಗೆ, ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿತಾವು ಭಾಗವಹಿಸುವುದಾಗಿ ಹೇಳಿದರು.ದಾವಣಗೆರೆ ಜಿಲ್ಲೆಯ ಸುರಹೊನ್ನೆ,ಕುಂದೂರು ಗ್ರಾಮದಲ್ಲಿ ಕೊರೊನಾದಿಂದಮೃತಪಟ್ಟಿರುವಂತಹವರ ಕುಟುಂಬಗಳಿಗೆ ಪರಿಹಾರಕ್ಕಾಗಿ ಅಗತ್ಯ ಅನುದಾನ ನೀಡಲಾಗಿದೆ
.ಕುಂದೂರು ಗ್ರಾಮದಲ್ಲಿ ಶೀಘ್ರದಲ್ಲೇವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಮಾಡುವುದಾಗಿ ಸಚಿವರು ತಿಳಿಸಿದರು.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆಗೆ, ಗ್ರಾಮವಾಸ್ತವ್ಯ ಕಾರ್ಯಕ್ರಮಕ್ಕೆ ಮರು ಚಾಲನೆ ನೀಡಿಬೆಂಗಳೂರಿಗೆ ತೆರಳಿದ ನಂತರ ಸಚಿವ ಆರ್.ಅಶೋಕ್ ಗ್ರಾಮ ವಾಸ್ತವ್ಯ ಮುಂದುವರೆಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು.ತಡರಾತ್ರಿಯವರೆಗೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಅವರು ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದರು.ಗ್ರಾಮದ ಒಳಭಾಗದಲ್ಲಿರುವ ಕಸ್ತೂರಿಬಾ ವಸತಿಶಾಲೆಯಲ್ಲಿ ವಾಸ್ತವ್ಯ ಮಾಡಿದರು. ಭಾನುವಾರಬೆಳಗ್ಗೆ ಗ್ರಾಮದ ಹರಿಜನ ಕೇರಿಗೆ ತೆರಳಿ ಅಹವಾಲುಆಲಿಸಿ ಉಪಹಾರ ಸೇವಿಸುವರು.