Advertisement

ಆಡಂಬರದ ಭಕ್ತಿಯಿಂದ ಪ್ರಯೋಜನ ಶೂನ್ಯ

07:34 PM Mar 30, 2022 | Team Udayavani |

ದಾವಣಗೆರೆ: ನಿಸ್ವಾರ್ಥತೆಯಿಂದ ಸಲ್ಲಿಸುವಸಾಮಾಜಿಕ, ಧಾರ್ಮಿಕ ಸೇವೆಯೇ ಜೀವನದಸಾರ್ಥಕತೆಯ ಸುಗಮ ದಾರಿ ಎಂದು ಗೋವಾದರೇವಣದ ಸಂಸ್ಕೃತ ಪಂಡಿತ ದೇವದತ್ತ ಶಾಸ್ತ್ರಿಗುರೂಜಿ ಹೇಳಿದರು.ಗೋವಾದ ರೇವಣದ ಶ್ರೀ ವಿಮಲೇಶ್ವರದೇವಾಲಯದಲ್ಲಿ ವಿಮಲೇಶ್ವರ ಸಂಸ್ಥಾನ,ದಾವಣಗೆರೆಯ ದೈವಜ್ಞ ಬ್ರಾಹ್ಮಣ ರೇವಣಕರಪರಿವಾರ, ವಿಮಲೇಶ್ವರ ಅನ್ನದಾನ ಯೋಜನೆಯನಿ ಧಿ ಸಂಗ್ರಹ ಸಮಿತಿ ಸಂಯುಕ್ತಾಶ್ರಯದಲ್ಲಿನಡೆದ ಅನ್ನದಾನಿಗಳ ನಾಮಫಲಕ ಅನಾವರಣಸಮಾರಂಭದಲ್ಲಿ ಅವರು ಮಾತನಾಡಿದರು.

Advertisement

ಜೀವನದಲ್ಲಿ ಸ್ವಾರ್ಥ, ನಾನು ಎಂಬಅಹಂಕಾರ ಬಿಟ್ಟು ವಿಶಾಲ ಮನೋಭಾವ,ಸೇವಾ ಸಂಕಲ್ಪದೊಂದಿಗೆ ನಿಸ್ವಾರ್ಥ ಕಾಯಕಮಾಡಿದರೆ ಜೀವನದ ಸಾರ್ಥಕತೆಯ ದಾರಿಸುಗಮವಾಗುತ್ತದೆ ಎಂದರು.ದೇವರ ಮೇಲಿನ ಭಕ್ತಿ ಭಾವ ಅಂತರಾಳದಿಂದಬರಬೇಕಾಗಿದೆ. ಕೇವಲ ತೋರಿಕೆಗೆ, ಅಡಂಬರಕ್ಕೆಪ್ರಚಾರಕ್ಕೆ ಸೀಮಿತವಾದ ಪೂಜಾ ಕೈಂಕರ್ಯದೇವರಿಗೆ ತಲುಪುವುದಿಲ್ಲ. ಒಳ್ಳೆಯ ನಡೆ,ನುಡಿ, ದಾರಿ, ಆಲೋಚನೆ, ದೃಷ್ಟಿ, ಹೃದಯ,ಆಲೋಚನೆ, ಸನ್ಮಾರ್ಗಗಳಿಂದ ಮಾನವನ ಜನ್ಮಪಾವನವಾಗುತ್ತದೆ ಎಂದು ತಿಳಿಸಿದರು.

ದಾವಣಗೆರೆಯ ದೈವಜ್ಞ ಬ್ರಾಹ್ಮಣ ರೇವಣಕರಪರಿವಾರದ ಅಧ್ಯಕ್ಷ ನಲ್ಲೂರು ಅರುಣಾಚಲಎನ್‌. ರೇವಣಕರ್‌ ಮಾತನಾಡಿ, ಅನ್ನದಾನ ನಿಧಿಸಂಗ್ರಹಕ್ಕೆ ಸ್ವಯಂಪ್ರೇರಣೆಯಿಂದ ದೇಣಿಗೆ ಸರ್ವಸಮಾಜ ಬಾಂಧವರು ಅಭಿನಂದನಾರ್ಹರುಎಂದರು.

Advertisement

Udayavani is now on Telegram. Click here to join our channel and stay updated with the latest news.

Next