Advertisement

ಕನ್ನಡ ಹಬ್ಬಕ್ಕೆ ಎಲೆಬೇತೂರು ಸಜ್ಜು

05:45 PM Mar 26, 2022 | Team Udayavani |

ದಾವಣಗೆರೆ: ಚಾಲುಕ್ಯರ ರಾಜಧಾನಿಯ ಗರಿಮೆ,ಹೊಯ್ಸಳರು, ಚಿತ್ರದುರ್ಗ ಪಾಳೆಯಗಾರರನೆಲೆವೀಡು, ಪ್ರಾಚೀನ ಕಾಲದ ಶಿಲಾ ಶಾಸನ,ವೀರಗಲ್ಲನ್ನು ಒಡಲಲ್ಲಿ ಹೊಂದಿರುವ, ಜೈನ ಮತದಧಾರ್ಮಿಕ ಶ್ರದ್ಧಾ ಕೇಂದ್ರ, ಐತಿಹಾಸಿಕ ಮಹತ್ವದದಾವಣಗೆರೆ ತಾಲೂಕಿನ ಎಲೆಬೇತೂರು ಮಾ. 26ಮತ್ತು 27ರಂದು ನಡೆಯಲಿರುವ ಜಿಲ್ಲಾ 11ನೇಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜಾಗಿದೆ.

Advertisement

ಚಾಲುಕ್ಯರು, ಹೊಯ್ಸಳರು, ಚಿತ್ರದುರ್ಗದಪಾಳೆಯಗಾರರು ಆಳ್ವಿಕೆ ನಡೆಸಿದ ಬೇತೂರು,ಹಿಂದೊಮ್ಮೆ ದಾವಣಗೆರೆಯ ಒಂದು ಭಾಗವೇ ಆಗಿತ್ತು.ಬೇತೂರಿನಲ್ಲಿದ್ದ ದೇವಿ ಶೆಟ್ಟಿ ಎಂಬ ವರ್ತಕನಿಂದದಾವಣಿಕಟ್ಟೆ ಕಾಲಾನುಕ್ರಮೇಣ ದಾವಣಗೆರೆಆಯಿತು ಎಂಬ ಐತಿಹ್ಯವೂ ಇದೆ. ವೀಳ್ಯದೆಲೆ ಮತ್ತುಬದನೆಕಾಯಿಗೆ ಹೆಸರುವಾಸಿ ಯಾಗಿರುವ ನಗರಮತ್ತು ಗ್ರಾಮೀಣತೆಯ ಸಮ್ಮಿಶ್ರಣದ ಎಲೆಬೇತೂರುಸಾಹಿತ್ಯೋತ್ಸವಕ್ಕೆ ಮದುವಣಗಿತ್ತಿಯಂತೆಶೃಂಗಾರಗೊಂಡಿದೆ.

18 ಎಕರೆ ವಿಸ್ತೀರ್ಣದಮಾಗಾನಹಳ್ಳಿ ಅಂಬಾಸಪ್ಪನವರಮೈದಾನದಲ್ಲಿ ಎರಡು ದಿನನಡೆಯುವ ಸಾಹಿತ್ಯಸಮ್ಮೇಳನಕ್ಕೆ ಸುಂದರ,ಸುಸಜ್ಜಿತ ವೇದಿಕೆ,1500 ಜನರುಕೂರಬಹುದಾದ ಸಿರಿಗೆರೆ ಶ್ರೀ ಶಿವಕುಮಾರಶಿವಾಚಾರ್ಯ ಮಹಾಸ್ವಾಮೀಜಿ ಮಹಾಮಂಟಪ,ಬಸವನಾಳ್‌ ಬಸವರಾಜಪ್ಪ ವೇದಿಕೆ, ಸವಗದ್ದಿಗೆಸಂಗಮೇಶ್ವರಸ್ವಾಮಿ, ಯುವರತ್ನ ಪುನೀತ್‌ರಾಜ್‌ಕುಮಾರ್‌, ಶ್ರೀ ದುರ್ಗಾಂಬಿಕಾದೇವಿಮಹಾದ್ವಾರಗಳು ಸಿದ್ಧವಾಗಿವೆ. ಜಿಲ್ಲೆಯ ಹಿರಿಯಸಾಹಿತಿ ಜಿ.ಎಸ್‌. ಸುಶೀಲಾದೇವಿ ಆರ್‌. ರಾವ್‌ಸಮ್ಮೇಳನಾಧ್ಯಕ್ಷರಾಗಿದ್ದಾರೆ.

ಜಿಲ್ಲೆಯ ಮತ್ತೂಬ್ಬಹಿರಿಯ ಸಾಹಿತಿ ಟಿ. ಗಿರಿಜಾ ಹರಪನಹಳ್ಳಿಯಲ್ಲಿನಡೆದಿದ್ದ ಸಮ್ಮೇಳನದಅಧ್ಯಕ್ಷರಾದ ನಂತರ ಮತ್ತೂಮ್ಮೆ ಮಹಿಳೆಯರಿಗೆಸಮ್ಮೇಳನ ಅಧ್ಯಕ್ಷತೆ ಒಲಿದು ಬಂದಿದೆ. ಈಮೂಲಕವೂ ಎಲೆಬೇತೂರು ಮ ತ್ತೂಂದು ಇತಿಹಾಸಕ್ಕೆಮುನ್ನುಡಿ ಬರೆದಿದೆ. ಬಾಡ, ಸಂತೇಬೆನ್ನೂರು ನಂತರಕನ್ನಡಮ್ಮ ತೇರು ಎಳೆಯುವ ಕಾರ್ಯಕ್ಕೆ ಗ್ರಾಮೀಣಭಾಗದ ಬೇತೂರು ಸಿದ್ಧಗೊಂಡಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಜಿಲ್ಲಾ ಮಟ್ಟದ ಸಾಹಿತ್ಯಸಮ್ಮೇಳನ ನಡೆಸುವುದು ಸುಲಭದ ಮಾತಲ್ಲ.ಬೇತೂರು ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರಕನ್ನಡಾಭಿಮಾನ, ಸಾಹಿತ್ಯಾಸಕ್ತಿ, ಅಭಿರುಚಿ ಸಾಹಿತ್ಯಸಮ್ಮೇಳನ ನಡೆಸುವ ಉಮೇದನ್ನು ಇಮ್ಮಡಿಗೊಳಿಸಿದೆ.ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯಬಯಸಿದವರಿಗೆ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನನಡೆಸಲು ದೊರೆತಿರುವ ಅವಕಾಶವನ್ನು ಸ್ವೀಕರಿಸಿರುವಎಲೆಬೇತೂರು ಜನರು ಸಮ್ಮೇಳನದ ಯಶಸ್ಸಿಗೆಟೊಂಕ ಕಟ್ಟಿ ನಿಂತಿದ್ದಾರೆ.

Advertisement

ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next