Advertisement

ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆ ರೂಢಿಸಿಕೊಳ್ಳಲಿ

04:28 PM Mar 10, 2022 | Team Udayavani |

ದಾವಣಗೆರೆ: ಪರೀಕ್ಷೆ ಬರೆಯುವಮಕ್ಕಳು ನಕಾರಾತ್ಮಕ ಚಿಂತೆ ಬಿಟ್ಟುಸಕಾರಾತ್ಮಕ ಚಿಂತನೆ ಮಾಡಬೇಕುಎಂದು ಕಲಾಕುಂಚ ಸಾಂಸ್ಕೃತಿಕಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮಗಣೇಶ ಶೆಣೈ ಹೇಳಿದರು.ಕಲಾಕುಂಚ ಸಿದ್ದವೀರಪ್ಪ ಬಡಾವಣೆಶಾಖೆಯ ಆಶ್ರಯದಲ್ಲಿ ತಾಲೂಕಿನನಾಗನೂರು ಸರ್ಕಾರಿ ಪ್ರೌಢಶಾಲೆಯಲ್ಲಿನಡೆದ ಎಸ್ಸೆಸ್ಸೆಲ್ಸಿ ಪರೀûಾ ಪೂರ್ವಸಿದ್ಧತಾಕಾರ್ಯಾಗಾರ ಉದ್ಘಾಟಿಸಿ ಅವರುಮಾತನಾಡಿದರು.

Advertisement

ಕಠಿಣ ಪರಿಶ್ರಮ,ಬದ್ಧತೆ, ಸಮಯ ಸ್ಫೂರ್ತಿ, ಸಮಯ‌Åಜ್ಞೆಯೊಂದಿಗೆ ಉತ್ತಮ ಫಲಿತಾಂಶಪಡೆಯುವ ಛಲಗಾರಿಕೆ ಬೇಕು.ಪರೀಕ್ಷೆ ಎಂದರೆ ಯಶಸ್ಸಿನ ನಿರಂತರಪಯಣ ಹಾಗೂ ನಿರೀಕ್ಷೆಗಳ ಗುತ್ಛ.ಎಸ್‌ಎಸ್‌ಎಲ್‌ಸಿ ಜೀವನದ ಮತ್ತುಶಿಕ್ಷಣದ ಒಂದು ಮಹತ್ವದ ತಿರುವು.

ಈಹಂತದಲ್ಲಿ ಉತ್ತಮ ಫಲಿತಾಂಶದೊಂದಿಗೆಉತ್ತೀರ್ಣರಾದರೆ, ವ್ಯಾಸಂಗ ಮಾಡಿದವಿದ್ಯಾಸಂಸ್ಥೆಗೆ ಹಾಗೂ ಶಿಕ್ಷಣ ನೀಡಿದಗುರುಗಳಿಗೆ ಮಕ್ಕಳು ಕೊಡುವಗುರುಕಾಣಿಕೆಯಾಗುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಲೆಯಮುಖ್ಯೋಪಾಧ್ಯಾಯ ಕೆ. ಸೋಮಶೇಖರಪ್ಪ ಮಾತನಾಡಿ, ಪರೀಕ್ಷೆಯನ್ನುಮಕ್ಕಳು ಹಬ್ಬದಂತೆ ಸಂಭ್ರಮಿಸಿಎದುರಿಸಬೇಕು. ಕಲಾಕುಂಚದಶೈಕ್ಷಣಿಕ ಕಾಳಜಿಯ ಕಾಯಕ ನಿಜಕ್ಕೂಶ್ಲಾಘನೀಯ ಎಂದರು.

ಕಲಾಕುಂಚ ಸಿದ್ಧವೀರಪ್ಪ ಬಡಾವಣೆಶಾಖೆಯ ಅಧ್ಯಕ್ಷೆ ಲಲಿತಾ ಕಲ್ಲೇಶ್‌,ಖಜಾಂಚಿ ಲತಾ ವಸಂತ್‌, ಕಲಾಕುಂಚಡಿಸಿಎಂ. ಶಾಖೆ ಅಧ್ಯಕ್ಷೆ ಶಾರದಮ್ಮಶಿವನಪ್ಪ, ಸಮಿತಿ ಸದಸ್ಯರಾದಎಸ್‌. ಶಿವನಪ್ಪ ಇತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next