Advertisement

ವಿದೇಶ ಪ್ರವಾಸ ಆಸೆಗೆ ರೈತರಿಗೆ ಮೋಸ ಮಾಡದಿರಿ

06:42 PM Feb 20, 2022 | Team Udayavani |

ದಾವಣಗೆರೆ: ರಸಗೊಬ್ಬರ-ಕೀಟನಾಶಕ ವ್ಯಾಪಾರಸ್ಥರುವಿದೇಶ ಪ್ರವಾಸದ ಆಸೆಯಾಗಿ ರಸಗೊಬ್ಬರ, ಕೀಟನಾಶಕಕಂಪನಿಗಳನ್ನು ಉದ್ಧಾರ ಮಾಡುವ ಬದಲು, ಕೃಷಿಕರಜಮೀನಿಗೆ ಬೇಕಾಗುವ ಸೂಕ್ತ ಗೊಬ್ಬರ, ಔಷಧ ನೀಡುವಮೂಲಕ ರೈತರಿಗೆ ಉಪಕಾರ ಮಾಡಬೇಕು ಎಂದು ಕೃಷಿಸಚಿವ ಬಿ.ಸಿ. ಪಾಟೀಲ್‌ ಹೇಳಿದರು.

Advertisement

ನಗರದ ಕೃಷಿ ತಂತ್ರಜ್ಞರ ಸಂಸ್ಥೆ ಕಚೇರಿ ಆವರಣದಲ್ಲಿಶನಿವಾರ ಕೃಷಿ ತಂತ್ರಜ್ಞರ ಸಂಸ್ಥೆ ಬೆಂಗಳೂರುಹಾಗೂ ದಾವಣಗೆರೆ ಘಟಕ, ಬೆಂಗಳೂರು ಕೃಷಿವಿಶ್ವವಿದ್ಯಾನಿಲಯ, ಶಿವಮೊಗ್ಗದ ಕೆಳದಿ ಶಿವಪ್ಪನಾಯಕಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯಆಶ್ರಯದಲ್ಲಿ ಏರ್ಪಡಿಸಿದ್ದ ಕಚೇರಿ ಕಟ್ಟಡದ ಮೇಲ್ಛಾವಣಿಕಾಮಗಾರಿ ಉದ್ಘಾಟನೆ ಮತ್ತು 5, 6ನೇ ತಂಡದ ದೇಸಿವಿದ್ಯಾರ್ಥಿಗಳಿಗೆ ಕೃಷಿ ವಿಸ್ತರಣಾ ಸೇವಾ ಡಿಪ್ಲೊಮಾ ಪದವಿಪ್ರಮಾಣಪತ್ರ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಗೊಬ್ಬರ, ಕೀಟ ನಾಶಕ ಕಂಪನಿಗಳುಹೆಚ್ಚು ಮಾರಾಟ ಮಾಡಿದ ವ್ಯಾಪಾರಸ್ಥರಿಗೆ ವಿದೇಶ ಪ್ರವಾಸಸೇರಿದಂತೆ ಇನ್ನಿತರ ಆಮಿಷಯೊಡ್ಡುತ್ತವೆ. ಕಂಪನಿಗಳಆಮಿಷಕ್ಕೊಳಗಾಗಿ ರೈತರಿಗೆ ಅನಗತ್ಯ ರಸಗೊಬ್ಬರ, ಕೀಟನಾಶಕಗಳನ್ನು ಮಾರಾಟ ಮಾಡಬಾರದು. ಇದರಿಂದಕಂಪನಿಗಳು ಉದ್ಧಾರವಾಗಬಹುದು. ಆದರೆ, ರೈತರಿಗೆಅನ್ಯಾಯವಾಗುತ್ತದೆ. ವ್ಯಾಪಾರಸ್ಥರು ಹಾಗೇನಾದರೂಮಾಡಿದರೆ ಅದು ರೈತರಿಗೆ ಮಾಡುವ ದೊಡ್ಡ ದ್ರೋಹಎಂದರು

Advertisement

Udayavani is now on Telegram. Click here to join our channel and stay updated with the latest news.

Next