Advertisement

19ರಂದು ವಿಧಾನಸೌಧ-ಹೈಕೋರ್ಟ್‌ ಚಲೋ

02:26 PM Feb 16, 2022 | Team Udayavani |

ದಾವಣಗೆರೆ: ಗಣರಾಜ್ಯೋತ್ಸವದಸಂದರ್ಭದಲ್ಲಿ ಅಂಬೇಡ್ಕರ್‌ ಅವರಿಗೆಅಪಮಾನ ಮಾಡಿದ್ದಾರೆ ಎಂಬ ಆರೋಪಎದುರಿಸುತ್ತಿರುವ ರಾಯಚೂರು ಜಿಲ್ಲಾನ್ಯಾಯಾಧೀಶರ ವಿರುದ್ಧ ದೇಶದ್ರೋಹಪ್ರಕರಣ ದಾಖಲು, ಕೆಲಸದಿಂದ ವಜಾ,ಬಂಧನ ಒಳಗೊಂಡಂತೆ ವಿವಿಧ ಬೇಡಿಕೆಈಡೇರಿಕೆಗೆ ಒತ್ತಾಯಿಸಿ ಫೆ. 19 ರಂದುವಿಧಾನ ಸೌಧ-ಹೈಕೋರ್ಟ್‌ ಚಲೋಹಮ್ಮಿಕೊಳ್ಳಲಾಗಿದೆ ಎಂದು ಸಂವಿಧಾನಸಂರಕ್ಷಣಾ ಮಹಾ ಒಕ್ಕೂಟದ ಡಾ| ಎ.ಬಿ.ರಾಮಚಂದ್ರಪ್ಪ ತಿಳಿಸಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಅಂದು ಬೆಳಗ್ಗೆ 10ಕ್ಕೆಬೆಂಗಳೂರು ರೈಲ್ವೆ ನಿಲ್ದಾಣದಿಂದ ವಿಧಾನಸೌಧದ ಆವರಣದಲ್ಲಿರುವ ಬಾಬಾ ಸಾಹೇಬ್‌ಅಂಬೇಡ್ಕರ್‌ರವರ ಪ್ರತಿಮೆವರೆಗೆ ಪಾದಯಾತ್ರೆನಡೆಸಲಾಗುವುದು. ಈ ಕಾರ್ಯಕ್ರಮದಲ್ಲಿದಾವಣಗೆರೆ ಜಿಲ್ಲೆಯಿಂದ 2 ಸಾವಿರಕ್ಕೂ ಹೆಚ್ಚುಜನರು ಭಾಗವಹಿಸುವರು ಎಂದರು.ಒಕ್ಕೂಟದ ಮುಖಂಡ ಹೆಗ್ಗೆರೆ ರಂಗಪ್ಪಮಾತನಾಡಿ, ಅಂಬೇಡ್ಕರ್‌ ಅವರಿಗೆ ಅಪಮಾನಮಾಡಿರುವ ಆರೋಪ ಎದುರಿಸುತ್ತಿರುವರಾಯಚೂರು ಜಿಲ್ಲಾ ನ್ಯಾಯಾಧೀಶರವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಹೈಕೋಟ್‌ìನ ಮುಖ್ಯ ನ್ಯಾಯಮೂರ್ತಿಗಳುಕೊಲಿಜಿಯಂಗೆ ಶಿಫಾರಸು ಮಾಡಬೇಕುಎಂದು ಒತ್ತಾಯಿಸಿದರು.

ದಾವಣಗೆರೆಯಅಂಬೇಡ್ಕರ್‌ ವೃತ್ತದಲ್ಲಿ ಫೆ. 13ರಂದು ಅತ್ಯಂತತರಾತುರಿಯಲ್ಲಿ ದಲಿತ ಸಮುದಾಯದಮುಖಂಡರು, ಹೋರಾಟಗಾರರನ್ನಕಡೆಗಣಿಸಿ, ಅಂಬೇಡ್ಕರ್‌ ಪುತ್ಥಳಿಅನಾವರಣಗೊಳಿಸಿರುವುದು ಅತ್ಯಂತಖಂಡನೀಯ ಎಂದು ಆಕ್ಷೇಪಿಸಿದರು.ಪ್ರಜಾ ಪರಿವರ್ತನಾ ವೇದಿಕೆ ರಾಜ್ಯಪ್ರಧಾನ ಕಾರ್ಯದರ್ಶಿ ಎ.ಡಿ. ಈಶ್ವರಪ್ಪಮಾತನಾಡಿ, ಅಂಬೇಡ್ಕರ್‌ರವರುಬರೆದಿರುವ ಸಂವಿಧಾನದಡಿ ಕೆಲಸ ಮಾಡುವನ್ಯಾಯಾಧೀಶರು ಸಂವಿಧಾನ ಜಾರಿಯಾದದಿನವೇ ಅದೇ ಅಂಬೇಡ್ಕರ್‌ರವರಿಗೆ ಮಾಡಿರುವಅಪಮಾನ ಹಾಗೂ ದೇಶದ್ರೋಹದ ಕೆಲಸ.ಇಡೀ ದೇಶವೇ ನಾಚಿಕೆಯಿಂದ ತಲೆ ತಗ್ಗಿಸುವಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

ಒಕ್ಕೂಟದ ಮುಖಂಡರಾದ ಕಬ್ಬಳ್ಳಿ ಮೈಲಪ್ಪ,ಕುಂದುವಾಡ ಮಂಜುನಾಥ್‌, ಅನೀಸ್‌ ಪಾಷ,ಸಿ. ಬಸವರಾಜ್‌, ಟಿ.ಎಸ್‌. ರಾಮಪ್ಪ, ಕತ್ತಲಗೆರೆತಿಪ್ಪಣ್ಣ, ಕಬ್ಬೂರು ಮಂಜುನಾಥ್‌, ಅರಕೆರೆಕೃಷ್ಣಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next