Advertisement

ಆರೋಗ್ಯಪೂರ್ಣ ಸಮಾಜ ನಿರ್ಮಾಣಕೆ ಯತ್ನ : ಶಾಮನೂರು

04:00 PM Feb 12, 2022 | Team Udayavani |

ದಾವಣಗೆರೆ: ಆರೋಗ್ಯಪೂರ್ಣ ಸಮಾಜನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದಎಸ್‌.ಎಸ್‌. ಕೇರ್‌ ಟ್ರಸ್ಟ್‌ ಸ್ಥಾಪಿಸಿ ಮಕ್ಕಳುಮತ್ತು ಮಹಿಳೆಯರಿಗೆ ಆರೋಗ್ಯ ತಪಾಸಣೆಮತ್ತು ಚಿಕಿತ್ಸೆ ನೀಡಲಾಗುತ್ತಿದೆ ಎಂದುಬಾಪೂಜಿ ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ,ಶಾಸಕ ಡಾ| ಶಾಮನೂರು ಶಿವಶಂಕರಪ್ಪಹೇಳಿದರು.

Advertisement

ತಾಲೂಕಿನ ಕಕ್ಕರಗೊಳ್ಳ ಗ್ರಾಮದಲ್ಲಿ ಎಸ್‌.ಎಸ್‌. ಕೇರ್‌ ಟ್ರಸ್ಟ್‌ ವತಿಯಿಂದ ಮಕ್ಕಳಿಗಾಗಿಹಮ್ಮಿಕೊಂಡಿದ್ದ ರಕ್ತಹೀನತೆ ಹಾಗೂಅಪೌಷ್ಟಿಕತೆ ತಪಾಸಣೆ ಶಿಬಿರ ಉದ್ಘಾಟಿಸಿಅವರು ಮಾತನಾಡಿದರು. ಎಸ್‌.ಎಸ್‌.ಕೇರ್‌ ಟ್ರಸ್ಟ್‌ಗೆ 10 ಕೋಟಿ ರೂ. ಠೇವಣಿಇಟ್ಟು ಅದರ ಬಡ್ಡಿಯಲ್ಲಿ ಉಚಿತ ಚಿಕಿತ್ಸೆಗೆಮುಂದಾಗಿದ್ದೇವೆ.

ಮೊದಲ ಹಂತವಾಗಿಮಕ್ಕಳು ಮತ್ತು ಮಹಿಳೆಯರಿಗೆ ತಪಾಸಣೆಮತ್ತು ಚಿಕಿತ್ಸೆ ನೀಡಲಾಗುವುದು. ಜೊತೆಗೆ ಕಿಡ್ನಿವೈಫಲ್ಯ ಹೊಂದಿರುವವರಿಗೆ ಉಚಿತ ಡಯಾಲಿಸಿಸ್‌ ಹಾಗೂ ಕಣ್ಣು ಮತ್ತು ಹಲ್ಲಿನ ಚಿಕಿತ್ಸೆಉಚಿತವಾಗಿ ನೀಡಲಾಗುತ್ತಿದೆ ಎಂದರು.ಬಾಪೂಜಿ ವಿದ್ಯಾಸಂಸ್ಥೆಯ ಸದಸ್ಯೆ ಪ್ರಭಾಎಸ್‌.ಎಸ್‌. ಮಲ್ಲಿಕಾರ್ಜುನ್‌ ಮಾತನಾಡಿ,ಮಕ್ಕಳು ಮತ್ತು ಮಹಿಳೆಯರಲ್ಲಿ ಅತಿ ಹೆಚ್ಚುಆರೋಗ್ಯ ಸಮಸ್ಯೆಗಳು ಕಂಡು ಬರುತ್ತಿದೆ.ಮಕ್ಕಳು ಮತ್ತು ಮಹಿಳೆಯರಿಗೆ ಉಚಿತತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುವುದು.ಮಕ್ಕಳು ಮತ್ತು ಮಹಿಳೆಯರ ವಿವಿಧ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲಾಗುವುದೆಂದರು.

Advertisement

Udayavani is now on Telegram. Click here to join our channel and stay updated with the latest news.

Next