Advertisement

ಅಂಬೇಡ್ಕರರಿಗೆ ಅವಮಾನ ಖಂಡನೀಯ

01:03 PM Jan 30, 2022 | Team Udayavani |

ದಾವಣಗೆರೆ: ಗಣರಾಜ್ಯೋತ್ಸವದಂದುರಾಯಚೂರು ನ್ಯಾಯಾಲಯಆವರಣದಲ್ಲಿ ಡಾ| ಬಿ.ಆರ್‌.ಅಂಬೇಡ್ಕರ್‌ ಭಾವಚಿತ್ರ ತೆಗೆದುಜಿಲ್ಲಾ ನ್ಯಾಯಾಧೀಶರು ಸಂವಿಧಾನಕ್ಕೆಅವಮಾನ ಮಾಡಿದ್ದಾರೆ.

Advertisement

ಅವರ ವಿರುದ್ಧಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿನ್ಯಾಯವಾದಿಗಳು ಶನಿವಾರ ನಗರದಲ್ಲಿಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಯವರಿಗೆಮನವಿ ಸಲ್ಲಿಸಿದರು.

ಅಂಬೇಡ್ಕರ್‌ರವರ ಭಾವಚಿತ್ರ ತೆಗೆಸಿದ ಜಿಲ್ಲಾನ್ಯಾಯಾಧೀಶರ ವಿರುದ್ಧ ರಾಜ್ಯದವಿವಿಧೆಡೆ ವಕೀಲರ ಸಂಘಗಳು, ದಲಿತಸಂಘಟನೆಗಳು ಪ್ರತಿಭಟನೆಗೆ ಇಳಿದಿವೆ.ನ್ಯಾಯಾಂಗ ಹುದ್ದೆಯಲ್ಲಿರುವವರು ಸಂವಿಧಾನ ಶಿಲ್ಪಿಯ ಭಾವಚಿತ್ರಕ್ಕೆ ಅವಮಾನಿಸಿದ್ದಾರೆ.

ದೇಶಕ್ಕೆ ಸಂವಿಧಾನಬರೆದವರ ಬಗ್ಗೆ ಈ ರೀತಿ ಮಾಡಿರುವುದುಅಕ್ಷಮ್ಯ. ತಕ್ಷಣ ನ್ಯಾಯಾಧೀಶರ ಮೇಲೆಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದುಪ್ರತಿಭಟನಾಕಾರರು ಒತ್ತಾಯಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಪಿ.ಬಸವರಾಜು, ಉಪಾಧ್ಯಕ್ಷ ಬಿ.ಬಿ.ರಾಮಪ್ಪ, ಕಾರ್ಯದರ್ಶಿ ಲೋಕಿಕೆರೆಎಲ್‌. ಪ್ರದೀಪ್‌, ಸಹ ಕಾರ್ಯದರ್ಶಿಜಿ.ಕೆ.ಬಸವರಾಜು, ಕಾರ್ಯಕಾರಿಸದಸ್ಯರಾದ ಕೆ. ಅಣ್ಣಪ್ಪ, ಕಿರಣ್‌,ಚಂದ್ರಶೇಖರ್‌ ರಾಥೋಡ್‌, ವಕೀಲರಾದಕೆ.ಎಚ್‌. ಹನುಮಂತರಾಜು, ಎಲ್‌.ಎಚ್‌. ಅರುಣ್‌ಕುಮಾರ್‌ ಮತ್ತಿತರರುಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next