ದಾವಣಗೆರೆ: ಗ್ರಹಿಕೆಯನ್ನು ಆಧರಿಸಿ ಪುಸ್ತಕಗಳನ್ನು ಬರೆಯುವುದಕ್ಕಿಂತ ಓದುಗರಅಥವಾ ನೋಡುಗರ ದೃಷ್ಟಿಕೋನಕ್ಕೆಇನ್ನೊಂದು ಆಯಾಮ ಕೊಡುವ ರೀತಿಯಲ್ಲಿಪುಸ್ತಕಗಳನ್ನು ಬರೆಯಬೇಕು.
ಆಗ ಮಾತ್ರ ಆಲೇಖಕರ ಶ್ರಮ, ಜ್ಞಾನಕ್ಕೆ ನಿಜವಾದ ಅರ್ಥಬರುತ್ತದೆ ಎಂದು ಲೇಖಕ, ವಿಮರ್ಶಕ ಡಾ|ಲೋಕೇಶ್ ಅಗಸನಕಟ್ಟೆ ಅಭಿಪ್ರಾಯಪಟ್ಟರು.ನಗರದ ಕುವೆಂಪು ಕನ್ನಡ ಭವನದಲ್ಲಿಸೃಷ್ಟಿ ಗ್ರಂಥಮಾಲೆ ಚಿತ್ರದುರ್ಗ ಹಾಗೂಎಸ್‌ಆರ್‌ಪಿ ಸಮೂಹ ಸಂಸ್ಥೆಗಳು ಶನಿವಾರಏರ್ಪಡಿಸಿದ್ದ ಹಂಶಿ ಸಂಪಾದಕೀಯ ಕೃತಿ”ಅಂತಃಕರಣದೊಡೆಯ ಅಪ್ಪು-ಗೆ’ ಕವನಸಂಕಲನ, “ಬೇಲಿಯ ಹೂವು’ ಕಾದಂಬರಿಹಾಗೂ ಎಸ್. ಓಂಕಾರಯ್ಯ ತವನಿಧಿ ವಿರಚಿತ”ವೃಷ್ಟಿ ವೃತ್ತಾಂತ’ ವೈಜ್ಞಾನಿಕ ಸಂಶೋಧನಾಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರುಮಾತನಾಡಿದರು.
ಲೇಖಕರಾದವರು ಸದಾಕಾಲಅಧ್ಯಯನಶೀಲರಾಗಿರಬೇಕು. ಯಾವುದೇಕೃತಿ ರಚನೆಗೆ ಮೊದಲು ಹಲವು ಪುಸ್ತಕಗಳನ್ನುಮೊದಲು ಓದಿರಬೇಕು. ಆಗ ಆಯಾ ಕಾಲಕ್ಕೆತಕ್ಕಂತೆ ಕೃತಿಗಳ ರಚನೆಗೆ ಅನುಕೂಲವಾಗುತ್ತದೆ.ಇದು ಓದುಗರ ದೃಷ್ಟಿಕೋನಕ್ಕೆ ಹೊಸಆಯಾಮ ಕೊಡುವ ನಿಟ್ಟಿನಲ್ಲಿ ಸಹಕಾರಿಯೂಆಗುತ್ತದೆ ಎಂದರು.ಪತ್ರಕರ್ತ ಬಿ.ಎನ್. ಮಲ್ಲೇಶ್‌ಮಾತನಾಡಿ, ಬರೆಯುವ ಅಭ್ಯಾಸವನ್ನುಪ್ರತಿಯೊಬ್ಬರು ರೂಢಿಸಿಕೊಳ್ಳಬೇಕು. ಸಣ್ಣ ಕಥೆ,ಕವನಗಳನ್ನಾದರೂ ಬರೆಯಬೇಕು.
ಏಕೆಂದರೆಬರವಣಿಗೆಯಿಂದ ಬದುಕಿನ ವಿಧಾನವೇಬದಲಾಗಲಿದೆ ಎಂದು ತಿಳಿಸಿದರು.ಲಯನ್ಸ್ ಕ್ಲಬ್ ಜಿಲ್ಲಾ ಮುಖ್ಯಸಂಯೋಜನಾಧಿಕಾರಿ ವಾಸುದೇವ್‌ರಾಯ್ಕರ್ ಕಾರ್ಯಕ್ರಮ ಉದ್ಘಾಟಿಸಿದರು.
ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ.ಆರ್. ಆರಾಧ್ಯ ಅಧ್ಯಕ್ಷತೆ ವಹಿಸಿದ್ದರು.ಹವ್ಯಾಸಿ ಖಗೋಳ ವೀಕ್ಷಕ ಎಂ.ಟಿ. ಶರಣಪ್ಪ,ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷಜಿ.ಎಚ್. ರಾಜಶೇಖರ್ ಗುಂಡಗಟ್ಟಿಮತ್ತಿತರರು ಪಾಲ್ಗೊಂಡಿದ್ದರು.
ನಿವೃತ್ತಪ್ರಾಧ್ಯಾಪಕಿ ಡಾ| ಎಸ್.ವಿ. ಕಮಲಮ್ಮಲೇಖಕರನ್ನು ಪರಿಚಯಿಸಿದರು. ಜನಜಾಗೃತಿವೇದಿಕೆ ಅಧ್ಯಕ್ಷ ನಾಗರಾಜ್ ಕಾಕನೂರುಸ್ವಾಗತಿಸಿದರು. ಸಾಹಿತಿ ಕೆ.ಎಸ್. ವೀರಭದ್ರಪ್ಪತೆಲಗಿ ನಿರೂಪಿಸಿದರು.