Advertisement

ಡಾಟಾ ಎಂಟ್ರಿ ಆಪರೇಟರ್ಗೆ ಬಡ್ತಿನೀಡಿ: ಪಾಟೀಲ

08:09 PM Jan 23, 2022 | Team Udayavani |

ದಾವಣಗೆರೆ: ಗ್ರಾಮ ಪಂಚಾಯಿತಿಗಳಲ್ಲಿಕಾರ್ಯನಿರ್ವಹಿಸುವ ಕ್ಲರ್ಕ್‌ ಕಂ ಡಿಇಒ (ಡಾಟಾಎಂಟ್ರಿ ಆಪರೇಟರ್‌)ಗಳಿಗೆ ಬಡ್ತಿ ನೀಡುವಪ್ರಕ್ರಿಯೆಯನ್ನು ಎಲ್ಲ ಜಿಲ್ಲಾ ಪಂಚಾಯಿತಿಗಳುಶೀಘ್ರ ಪೂರ್ಣಗೊಳಿಸಬೇಕು ಎಂದು ರಾಜ್ಯಗ್ರಾಮ ಪಂಚಾಯಿತಿ ಕ್ಲರ್ಕ್‌ ಕಂ ಡಿಇಒ ನೌಕರರಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಭೀಮರೆಡ್ಡಿ ಪಾಟೀಲಕೋರಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, 1993ರಿಂದಲೂ ಗ್ರಾಪಂಗಳಲ್ಲಿ ಕರವಸೂಲಿಮಾಡುವವರಿಗೆ ಮಾತ್ರ ಗ್ರೇಡ್‌-2 ಕಾರ್ಯದರ್ಶಿಹಾಗೂ ದ್ವಿತೀಯದರ್ಜೆ ಲೆಕ್ಕ ಸಹಾಯಕ ಹುದ್ದೆಗಳಿಗೆಬಡ್ತಿ ನೀಡಲಾಗುತ್ತಿತ್ತು. 15ವರ್ಷಗಳ ಅವಿರತಹೋರಾಟದ ಫಲವಾಗಿ ಸರ್ಕಾರ 7-9-2021ರಿಂದಅನ್ವಯಿಸುವಂತೆ ಕ್ಲರ್ಕ್‌ ಕಂ ಡಿಇಒಗಳಿಗೂ ಬಡ್ತಿಗೆಅವಕಾಶ ಮಾಡಿಕೊಟ್ಟಿದೆ. ಇದರಿಂದ ರಾಜ್ಯದ ಆರುಸಾವಿರ ಕ್ಲರ್ಕ್‌ ಕಂ ಡಿಇಒಗಳಿಗೆ ಅನುಕೂಲವಾಗಿದೆ.

ಆದರೆ, ಈ ಆದೇಶ ಅನುಷ್ಠಾನಕ್ಕಾಗಿ ಜಿಲ್ಲಾಪಂಚಾಯಿತಿಗಳಿಗೆ ಜೇಷ್ಠತಾ ಪಟ್ಟಿ ತಯಾರಿಸಲುಸೂಚಿಸಲಾಗಿದ್ದು ಜೇಷ್ಠತಾ ಪಟ್ಟಿ ಸಿದ್ಧಪಡಿಸುವಪ್ರಕ್ರಿಯೆ ತೀರಾ ವಿಳಂಬವಾಗುತ್ತಿದೆ. ರಾಜ್ಯದ8-10ಜಿಲ್ಲೆಗಳಲ್ಲಿ ಮಾತ್ರ ಈ ಕಾರ್ಯ ನಡೆದಿದ್ದುಉಳಿದ ಜಿಪಂಗಳಲ್ಲಿ ವಿಳಂಬ ಮಾಡಲಾಗುತ್ತಿದೆ.ಈ ವಿಳಂಬ ನೀತಿಯಿಂದ ನಿವೃತ್ತಿ ಅಂಚಿನಲ್ಲಿರುವನೌಕರರಿಗೆ ತೊಂದರೆಯಾಗುತ್ತಿದ್ದು ಬಡ್ತಿ ನೀಡುವಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಬೇಕು ಎಂದುಅವರು ವಿನಂತಿಸಿದರು

Advertisement

Udayavani is now on Telegram. Click here to join our channel and stay updated with the latest news.

Next