ದಾವಣಗೆರೆ: ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ (2021-22 ನೇ ಸಾಲಿನ) ಜಿಲ್ಲೆಗೆಘೋಷಣೆಯಾಗಿರುವ ಶ್ರೀ ಜಯದೇವಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಉಪಕೇಂದ್ರ ಸ್ಥಾಪನೆ ಪ್ರಕ್ರಿಯೆಗೆ ಚಾಲನೆ ದೊರಕಿದ್ದುಸ್ಥಳ ಹಸ್ತಾಂತರ ಕಾರ್ಯ ನಡೆದಿದೆ.
ಆದಷ್ಟು ಬೇಗಈ ಉಪಕೇಂದ್ರ ಕಾರ್ಯಾರಂಭ ಮಾಡಿ ಸಾವಿರಾರುಬಡ ಹೃದಯಗಳಿಗೆ ಜೀವಬಲ ತುಂಬುವ ನಿರೀಕ್ಷೆಗರಿಗೆದರಿದೆ.ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು2021-22ನೇ ಸಾಲಿನ ತಮ್ಮ ಬಜೆಟ್‌ನಲ್ಲಿ ನಗರಕ್ಕೆ 20ಕೋಟಿ ರೂ. ವೆಚ್ಚದ 50 ಹಾಸಿಗೆಯ ಶ್ರೀಜಯದೇವಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಉಪಕೇಂದ್ರ ಘೋಷಿಸಿದ್ದರು.
ಬಜೆಟ್ ಘೋಷಣೆಹಿನ್ನೆಲೆಯಲ್ಲಿ ಈಗ ಜಯದೇವ ಆಸ್ಪತ್ರೆಯತಂಡವೊಂದು ಶೀಘ್ರದಲ್ಲಿ ಜಿಲ್ಲೆಗೆ ಭೇಟಿ ನೀಡುತ್ತಿದ್ದುನಗರದ ಚಿಗಟೇರಿ ಆಸ್ಪತ್ರೆ ಆವರಣದಲ್ಲಿ ಉಪಕೇಂದ್ರಸ್ಥಾಪನೆಗಾಗಿ ನೀಡಲಾಗಿರುವ 1.28 ಎಕರೆಜಮೀನು ಹಸ್ತಾಂತರ ಸಹಿತ ವಿವಿಧ ಪ್ರಕ್ರಿಯೆಗಳನ್ನುಆಸ್ಪತ್ರೆಯ ತಂಡ ಕೈಗೊಳ್ಳಲಿದೆ. ಇದಕ್ಕಾಗಿದಿನಾಂಕ ಸೂಚಿಸುವಂತೆ ಜಯದೇವ ಆಸ್ಪತ್ರೆಯನಿರ್ದೇಶಕ ಸಿ.ಎನ್. ಮಂಜುನಾಥ್ ಅವರು ಜಿಲ್ಲಾಆರೋಗ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತುಸಂಶೋಧನಾ ಸಂಸ್ಥೆಯ ಉಪಕೇಂದ್ರ ಶೀಘ್ರಕಾರ್ಯ ನಿರ್ವಹಿಸಿದರೆ, ಸರ್ಕಾರಿ ವ್ಯವಸ್ಥೆಯಲ್ಲಿಹೃದ್ರೋಗಗಳಿಗೆ ಉತ್ತಮ ವೈದ್ಯಕೀಯ ಸೇವೆ ಸಿಗುವಜತೆಗೆ ಬಡವರು ಹೃದಯ ಸಂಬಂಧಿ ಕಾಯಿಲೆಚಿಕಿತ್ಸೆಗಾಗಿ ದೂರದ ಊರುಗಳಿಗೆ ಅಲೆದಾಡುವುದುತಪ್ಪಲಿದೆ. ಜಿಲ್ಲೆ ಸೇರಿದಂತೆ ಸುತ್ತಲಿನ ಚಿತ್ರದುರ್ಗ,ಶಿವಮೊಗ್ಗ, ಹಾವೇರಿ, ಗದಗ, ಬಳ್ಳಾರಿ ಭಾಗದಬಡವರ ಹೃದಯಕ್ಕೂ ಇದು ಆರೈಕೆ ನೀಡಲುಅನುಕೂಲವಾಗಲಿದೆ.
ಎಚ್.ಕೆ. ನಟರಾಜ