ಹೊನ್ನಾಳಿ: ಯುವಕರು ಕ್ರೀಡೆಯಲ್ಲಿಪಾಲ್ಗೊಳ್ಳುವುದರಿಂದ ದುಶ್ಚಟಗಳಿಂದದೂರವಿರಬಹುದು ಎಂದು ಸಿಎಂರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ನ್ಯಾಮತಿ ಪಟ್ಟಣದ ಸರ್ಕಾರಿಬಾಲಕಿಯರ ಪ್ರೌಢಶಾಲೆ ಮೈದಾನದಲ್ಲಿಶನಿವಾರ ಅಪ್ಪು ಅಭಿಮಾನಿಗಳುಆಯೋಜಿಸಿದ್ದ ಪುನೀತ್ ರಾಜ್‌ಕುಮಾರ್ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಹಾಗೂ ಪುನೀತ್ ರಾಜ್‌ಕುಮಾರ್ ಭಾವಚಿತ್ರಕ್ಕೆ ಪುಷ್ಪನಮನಸಲ್ಲಿಸಿ ಅವರು ಮಾತನಾಡಿದರು.ಕ್ರೀಡೆಯಲ್ಲಿ ಸೋಲು-ಗೆಲುವುಎರಡನ್ನೂ ಸಮಾನ ಮನಸ್ಸಿನಿಂದಸ್ವೀಕರಿಸಿದಾಗ ಮಾತ್ರ ನಿಜವಾದಕ್ರೀಡಾಪಟುವಾಗಲು ಸಾಧ್ಯ. ಇತ್ತೀಚಿನದಿನಗಳಲ್ಲಿ ಯುವಕರು ದುಶ್ಚಟಗಳ ದಾಸರಾಗುತ್ತಿದ್ದಾರೆ.
ಯುವಕರು ದಿನನಿತ್ಯ ಕ್ರೀಡಾಂಗಣದಲ್ಲಿ ಆಟವಾಡಿಕ್ರೀಡಾ ಮನೋಭಾವ ಬೆಳೆಸಿಕೊಳ್ಳುವಮೂಲಕ ದುಶ್ಚಟಗಳಿಂದ ದೂರಇರಬೇಕು ಎಂದು ಕರೆ ನೀಡಿದರು. ಕ್ರೀಡಾ ಚಟುವಟಿಕೆಯಲ್ಲಿ ಭಾಗಹಿಸುವುದರಿಂದ ಮಾನಸಿಕಹಾಗೂ ದೈಹಿಕ ಆರೋಗ್ಯಸುಸ್ಥಿತಿಯಲ್ಲಿರುತ್ತದೆ. ಅಲ್ಲದೆ ಮನೋಲ್ಲಾಸದಿಂದ ಕೆಲಸಕಾರ್ಯಗಳನ್ನು ಮಾಡಲು ಸಹಕಾರಿ.ಆದ್ದರಿಂದ ಕ್ರೀಡೆ ನಮ್ಮ ಜೀವನದಅವಿಭಾಜ್ಯ ಅಂಗವಾಗಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಯುವಕರುಮೊಬೈಲ್ ದಾಸರಾಗುತ್ತಿದ್ದಾರೆ ಇದುಶುದ್ಧ ತಪ್ಪು. ಮೊಬೈಲ್ ಅನ್ನು ನಮಗೆಎಷ್ಟು ಬೇಕೋ ಅಷ್ಟನ್ನು ಮಾತ್ರಬಳಸುವುದನ್ನು ಕಲಿಯಬೇಕು ಎಂದುಕಿವಿಮಾತು ಹೇಳಿದರು. ಪುನೀತ್ ರಾಜ್‌ಕುಮಾರ್ ಅವರುನೇತ್ರದಾನ ಮಾಡುವ ಮೂಲಕ ಅಂಧರಬಾಳಿಗೆ ಬೆಳಕಾಗಿದ್ದಾರೆ. ಪ್ರತಿಯೊಬ್ಬರೂಸ್ವಯಂಪ್ರೇರಣೆಯಿಂದ ನೇತ್ರದಾನಮಾಡುವ ಮೂಲಕ ಅಂಧತ್ವನಿವಾರಣೆಗೆ ಶ್ರಮಿಸಬೇಕೆಂದರು.
ಈ ಸಂದರ್ಭದಲ್ಲಿ ಬಿಜೆಪಿ ಹೊನ್ನಾಳಿಮಂಡಲ ಪ್ರಧಾನ ಕಾರ್ಯದರ್ಶಿಸಿ.ಕೆ. ರವಿ, ಮುಖಂಡರಾದ ಅಜಯ್‌ರೆಡ್ಡಿ, ಗಿರೀಶ್, ಜಯರಾಮ್ ಇದ್ದರು