Advertisement
2022-23ರಲ್ಲಿ ರಾಮಕೃಷ್ಣ ಮಿಷನ್‌ನವರ ಸ್ವತ್ಛ ಮಂಗಳೂರು ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು. ಅಲ್ಲದೆ ಎಂಆರ್‌ಪಿಎಲ್ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಅವರು ಭಾಗವಹಿಸಿದ್ದಾರೆ. ಇದರ ಜತೆಗೆ ವನಚೇತನ ಸಂಸ್ಥೆಯ ಮೂಲಕ ಮಂಗಳೂರಿನ ವಿವಿಧ ಕಾಲೇಜು ವಿದ್ಯಾರ್ಥಿಗಳು ಅಂಕೋಲಾದ ಹೊನ್ನಳ್ಳಿಯ ಅವರ ಮನೆಗೆ ತೆರಳಿ ಪರಿಸರಕ್ಕೆ ಸಂಬಂಧಿಸಿದ ಜ್ಞಾನವನ್ನು ಸಂಪಾದಿಸುವ ಕೆಲಸಗಳಾಗಿದೆ.
ಲಕ್ಷ ಗಿಡಗಳನ್ನು ನೆಡುವ ಬದಲು ನೆಟ್ಟ ಗಿಡಗಳಿಗೆ ಎಷ್ಟು ಲಕ್ಷ್ಯ ವಹಿಸುವುದು ಮುಖ್ಯ ಎಂಬುವುದನ್ನು ತುಳಸಿ ಅಜ್ಜಿ ಹೇಳಿದ್ದರು. ತಾಯಿಯೊಂದಿಗೆ ಕಾಡಿಗೆ ತೆರಳುತ್ತಿದ್ದ ಅವರಿಗೆ ಪರಿಸರ ಆಸಕ್ತಿ ಬೆಳೆದು ಗಿಡಗಳನ್ನು ಮಕ್ಕಳಂತೆ ಪ್ರೀತಿಸಿ ಪೋಷಿಸುವುದನ್ನು ಕಲಿತುಕೊಂಡರು ಎಂದು ಕಳೆದ ಏಳು ವರ್ಷಗಳಿಂದ ಅವರೊಂದಿಗೆ ಒಡನಾಟ ಹೊಂದಿದ್ದ ಪರಿಸರವಾದಿ ದಿನೇಶ್ ಹೊಳ್ಳ ಹೇಳಿದ್ದಾರೆ.