ಹೊನ್ನಾಳಿ: ಕನ್ನಡ ಭಾಷೆ ಬೆಳಯಲುಕನ್ನಡಿಗರ ಬೆಂಬಲ, ಸಹಕಾರ ಅಗತ್ಯಎಂದು ಕನ್ನಡ ಸಾಹಿತ್ಯ ಪರಿಷತ್ ನೂತನತಾಲೂಕು ಅಧ್ಯಕ್ಷ ಜಿ. ಮುರುಗೇಶಪ್ಪ ಗೌಡಹೇಳಿದರು.
ಪಟ್ಟಣದ ಹಿರೇಕಲ್ಮಠದ ಡಾ|ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯವರನ್ನುಶನಿವಾರ ಭೇಟಿ ಮಾಡಿ ಆಶೀರ್ವಾದಪಡೆದು ಅವರು ಮಾತನಾಡಿದರು.ಕನ್ನಡ ಭಾಷೆ ರಾಜ್ಯದ ಗಡಿ ಭಾಗದಲ್ಲಿಗಟ್ಟಿಯಾಗಿ ಬೆಳೆಯಬೇಕಿದೆ. ಗಡಿ ಭಾಗದಕನ್ನಡಿಗರು ಕನ್ನಡವನ್ನು ಇತರ ಭಾಷಿಕರಿಗೆಕಲಿಸಬೇಕೇ ಹೊರತು ಅವರ ಭಾಷೆಯನ್ನುಕನ್ನಡಿಗರು ಕಲಿತು ಮಾತನಾಡಿದರೆಕನ್ನಡಕ್ಕೆ ಹೆಚ್ಚು ನಷ್ಟವಾಗುತ್ತದೆ.
ಸಾವಿರಾರು ವರ್ಷಗಳ ಇತಿಹಾಸಇರುವ ಕನ್ನಡ ಭಾಷೆಗೆ ಧಕ್ಕೆಯಾಗದಂತೆನೋಡಿಕೊಂಡು ಭಾಷೆಯನ್ನು ಉಳಿಸಿಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯಕರ್ತವ್ಯವಾಗಬೇಕು ಎಂದರು.
ಕರ್ನಾಟಕದ ಹೃದಯ ಭಾಗ ದಾವಣಗೆರೆ,ಉತ್ತರ ಕರ್ನಾಟಕ ಸೇರಿದಂತೆ ಇತರಪ್ರಮುಖ ಭಾಗಗಳಲ್ಲಿ ಹಾಗೂ ರಾಜ್ಯದಹಳ್ಳಿಗಳಲ್ಲಿ ಕನ್ನಡ ಭಾಷೆಗೆ ಯಾವುದೇಧಕ್ಕೆಯಾಗುವುದಿಲ್ಲ ಗಡಿ ಭಾಗ ಹಾಗೂಕೆಲ ಕನ್ನಡಿಗರು ಭಾಷಾಭಿಮಾನ ಮರೆತುಇಂಗ್ಲಿಷ್‌ನತ್ತ ಕಣ್ಣು ಹಾಕುತ್ತಿರುವುದರಿಂದ ಕನ್ನಡಕ್ಕೆ ನಷ್ಟ ಉಂಟು ಮಾಡುತ್ತಿದೆ.
ಹಿರೇಕಲ್ಮಠ ಶ್ರೀಗಳು ತಾಲೂಕು ಕನ್ನಡಸಾಹಿತ್ಯ ಪರಿಷತ್‌ಗೆ ನಿವೇಶನ ನೀಡಿದ್ದಾರೆ.ಹಿಂದಿನ ಅಧ್ಯಕ್ಷ ದಿ| ಕತ್ತಿಗೆ ಗಂಗಾಧರಪ್ಪಅವರ ಅಧಿ ಕಾರದ ಅವ ಧಿಯಲ್ಲಿ ಕನ್ನಡಭವನದ ತಳಪಾಯದ ನಿಮಾಣವಾಗಿದೆ.ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರಪಡೆದು ಕನ್ನಡ ಭವನ ನಿರ್ಮಾಣಮಾಡಲಾಗುವುದು ಎಂದು ತಿಳಿಸಿದರು.
ಡಾ| ಒಡೆಯರ್ ಚನ್ನಮಲ್ಲಿಕಾರ್ಜುನಶಿವಾಚಾರ್ಯಸ್ವಾಮೀಜಿ ಮಾತನಾಡಿ,ಕನ್ನಡಮ್ಮನ ಕೆಲಸವನ್ನು ಉತ್ತಮವಾಗಿ ಮಾಡಿಕನ್ನಡ ಭಾಷೆ ಉತ್ತರೋತ್ತರವಾಗಿ ಬೆಳೆಯಲುನೂತನ ಅಧ್ಯಕ್ಷರು ಹಾಗೂ ಪದಾ ಧಿಕಾರಿಗಳುಶ್ರಮಿಸಬೇಕೆಂದರು. ಕಸಾಪ ಮಾಜಿ ಅಧ್ಯಕ್ಷರುದ್ರಪ್ಪ, ಕಾರ್ಯದರ್ಶಿ ಶೇಖರಪ್ಪ ಇತರರುಇದ್ದರು.