Advertisement

Davanagere; ಸಿಲಿಂಡರ್ ಸ್ಫೋ*ಟ: ಆವರಿಸಿದ ದಟ್ಟ ಹೊಗೆ

10:43 PM Jan 06, 2025 | Team Udayavani |

ದಾವಣಗೆರೆ: ಅಡುಗೆ ಅನಿಲ ಸಿಲಿಂಡರ್ ಸ್ಫೋಟದ ಪರಿಣಾಮ ಇಡೀ ಗ್ರಾಮ ದಟ್ಟ ಹೊಗೆಯಿಂದ ಸಮಸ್ಯೆ ಎದುರಿಸಿದ ಘಟನೆ ಸೋಮವಾರ ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದಲ್ಲಿ ನಡೆದಿದೆ.

Advertisement

ಚನ್ನೇಶಪುರದ ಕಾಶಪ್ಪ ಎಂಬುವರ ಮನೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸೋರಿಕೆಯಿಂದ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ.‌ ಕೂಡಲೇ ಎಚ್ಚೆತ್ತ ಕಾಶಪ್ಪ ಮತ್ತು ಅವರ ತಾಯಿ ಮನೆಯಿಂದ ಹೊರಗೆ ಬಂದ ಕ್ಷಣಾರ್ಧದಲ್ಲಿ ಸಿಲಿಂಡರ್ ಸ್ಫೋಟ ಗೊಂಡಿದೆ. ಇಡೀ ಮನೆ ಬೆಂಕಿಗೆ ಸಂಪೂರ್ಣ ಆಹುತಿಯಾಗಿದೆ. ಸಿಲಿಂಡರ್ ಸ್ಫೋಟದ ಪರಿಣಾಮ ಇಡೀ ಗ್ರಾಮದಲ್ಲಿ ದಟ್ಟವಾದ ಹೊಗೆ ಆವರಿಸಿತ್ತು. ಇದರಿಂದ ಗ್ರಾಮಸ್ಥರು ಅಕ್ಷರಶಃ ಗಾಬರಿಗೊಂಡಿದ್ದರು. ಅಗ್ನಿಶಾಮಕ ದಳದವರು ಹೊಗೆ ನಿಯಂತ್ರಣ ಮಾಡಿ, ಇತರೆ ಮನೆಗಳಿಗೆ ಬೆಂಕಿ ಹರಡದಂತೆ ತಡೆಯಲು ಹರಸಾಹಸ ಪಡಬೇಕಾಯಿತು.ಕೊನೆಗೂ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next