Advertisement
ತಾಲೂಕಿನ ಬೆಳ್ಳೂಡಿ ಸಮೀಪದ ಕನಕ ಗುರುಪೀಠದ ಶಾಖಾ ಮಠದಲ್ಲಿ ಹಮ್ಮಿಕೊಂಡಿದ್ದ ಮಠಾ ಧೀಶರ ಹಾಗೂ ವೈದ್ಯಕೀಯ ಕಾಲೇಜು ಹೋರಾಟ ಸಮಿತಿಯ ಪದಾ ಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ವೈದ್ಯ ಪದವೀಧರರ ಗುಣಮಟ್ಟದ ದೃಷ್ಟಿಯಿಂದ ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ವಿ ಧಿಸಿರುವ ನಿಯಮ- ನಿಬಂಧನೆ ಪೂರೈಸಿದರಷ್ಟೇ ವೈದ್ಯಕೀಯ ಕಾಲೇಜಿಗೆ ಅನುಮತಿ ಸಿಗುತ್ತದೆ ಎಂದರು. ವೈದ್ಯಕೀಯ ಕಾಲೇಜಿನ ಪ್ರಾಯೋಗಿಕ ತರಗತಿಗಳಿಗೆ ಕನಿಷ್ಠ 2 ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ 1000-1200 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಕಡ್ಡಾಯವಾಗಿ ಇರಲೇಬೇಕು. ಅಲ್ಲಿ ಎಲ್ಲಾ ವಿಧವಾದ ಚಿಕಿತ್ಸಾ ಸೌಲಭ್ಯ ಹಾಗೂ ಸುಸಜ್ಜಿತ ಶಸ್ತ್ರಚಿಕಿತ್ಸಾ ವಿಭಾಗಗಳಿರಬೇಕು.
Related Articles
Advertisement
ಜಿಲ್ಲೆಯ ಸಿಜಿ ಆಸ್ಪತ್ರೆಗೆ ಜಯದೇವ ಹೃದಯಾಲಯದ 50 ಹಾಸಿಗೆ ಸಾಮರ್ಥ್ಯದ ಘಟಕ ಆಸ್ಪತ್ರೆ ಮಂಜೂರಾತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರ ಜೊತೆಗೆ ಇನ್ನೂ 50 ಹಾಸಿಗೆಯ ಘಟಕವನ್ನು ಹರಿಹರಕ್ಕೆ ಮಂಜೂರು ಮಾಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಮಾತನಾಡಿ, ಹರಿಹರ ತಾಲೂಕಿನ ಅಭಿವೃದ್ಧಿಗೆ ವಿವಿಧ ಮಠಾಧಿಧೀಶರು ಸದಾ ಸಿದ್ಧರಿದ್ದೇವೆ. ಆದರೆ ಸರಕಾರಿ ವೈದ್ಯಕೀಯ ಕಾಲೇಜಿನ ವಿಚಾರದಲ್ಲಿ ಎನ್‌ಎಂಸಿ ನಿಯಮಾವಳಿಗಳ ಪಾಲನೆ ಕಷ್ಟಕರವಾಗಿದೆ. ಇದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ ಎಂದರು.
ಹೋರಾಟ ಸಮಿತಿ ಪರವಾಗಿ ಶಿವಪ್ರಕಾಶ ಶಾಸ್ತ್ರಿ ಮಾತನಾಡಿ, ಕಿರ್ಲೋಸ್ಕರ್ ಕಾರ್ಖಾನೆ ಮುಚ್ಚಿದ ನಂತರ ಹರಿಹರ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಬೆಳೆಯುವ ಸಾಮರ್ಥ್ಯ ಇರುವ ಹರಿಹರಕ್ಕೆ ಒಂದು ಆರ್ಥಿಕ ಚೈತನ್ಯ ನೀಡುವ ಅಂಶ ಬೇಕಾಗಿದೆ. ಸರಕಾರಿ ವೈದ್ಯಕೀಯ ಕಾಲೇಜು ಹರಿಹರದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಪ್ರತಿಪಾದಿಸಿದರು.
ಸಭೆಯಲ್ಲಿ ರಾಜನಹಳ್ಳಿ ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ, ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ, ಹೊಸಳ್ಳಿ ವೇಮನ ಮಠದ ಶ್ರೀ ವೇಮನಾನಂದ ಸ್ವಾಮೀಜಿ, ನಂದಿಗುಡಿ ಮಠದ ವೃಷಭಪುರಿ ಶ್ರೀಗಳು, ಮೌಲಾನಾ ಷಂಶುದ್ದೀನ್ ಬರ್ಕಾತಿ, ಫಾದರ್ ಅಂತೋನಿ ಪೀಟರ್, ಸಂಸದ ಡಾ| ಜಿ.ಎಂ. ಸಿದ್ದೇಶ್ವರ, ಮಾಜಿ ಶಾಸಕ ಬಿ.ಪಿ. ಹರೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ ಬಿಳಗಿ, ಎಸ್‌ಪಿ ರಿಷ್ಯಂತ್, ಹೋರಾಟ ಸಮಿತಿಯ ಎಚ್.ಕೆ. ಕೊಟ್ರಪ್ಪ, ಎಚ್. ನಿಜಗುಣ, ಶ್ರೀನಿವಾಸ್ ನಂದಿಗಾವಿ, ಬಿ. ರಾಮಚಂದ್ರಪ್ಪ, ತಾಪಂ ಮಾಜಿ ಸದಸ್ಯ ಬೆಳ್ಳೂಡಿ ಬಸವರಾಜ್, ಬಿ.ಕೆ. ಸೈಯದ್ ರೆಹಮಾನ್, ಪಿ.ಜೆ. ಮಹಾಂತೇಶ್, ನಾಗರಾಜ್ ಮೆಹರವಾಡೆ, ಕಿರಣ್ ಭೂತೆ ಇತರರು ಭಾಗವಹಿಸಿದ್ದರು.