ಸಂಕೇಶ್ವರ : ಹುಕ್ಕೇರಿ ತಾಲೂಕಿನ ಕೇಸ್ತಿ ಗ್ರಾಮದ ಸರಕಾರಿ ಪ್ರೌಢಶಾಲೆಯ 10ನೇ ವಿದ್ಯಾರ್ಥಿನಿಯು ತನ್ನ ತಂದೆ ತೀರಿಕೊಂಡ ಕೆಲವೇ ಗಂಟೆಗಳಲ್ಲಿ ನೋವಿನ ಸನ್ನಿವೇಶದಲ್ಲಿ ಕೂಡಾ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದು, ವಿದ್ಯಾರ್ಥಿನಿ ವರ್ಷವೀಡಿ ಕಲಿತ ಶಿಕ್ಷಣ ವ್ಯರ್ಥ ವಾಗಬಾರದು ಎನ್ನುವ ಕಾರಣದ ಹಿನ್ನೆಲೆಯಲ್ಲಿ ತಾಲೂಕು ಶಿಕ್ಷಣ ಅಧಿಕಾರಿ ಹಾಗೂ ಶಾಲೆಯ ಮುಖ್ಯೋಪಾಧ್ಯಾಯ, ಶಿಕ್ಷಕ ವೃಂದದವರು ಪರೀಕ್ಷೆ ಬರೆಯಲು ಧೈರ್ಯ ತುಂಬಿದ್ದಾರೆ.
ಹುಕ್ಕೇರಿ ತಾಲೂಕಿನ ಕೇಸ್ತಿ ಗ್ರಾಮದ ಕು. ಮಿದ್ದತ್ ಅಬ್ದುಲ್ ರಜಾಕ್ ಸನದಿ ಇವಳ ತಂದೆ ಅಬ್ದುಲರಜಾಕ್ ಸನದಿ ಇವರು ಗುರುವಾರ ರಾತ್ರಿ 2.30ಕ್ಕೆ ಹೃದಯಾಘಾತದಿಂದ ನಿಧನ ಹೊಂದಿದ್ದರು.
ತಂದೆಯನ್ನು ಕಳೆದುಕೊಂಡ ದುಃಖದಲ್ಲಿದ್ದ ವಿದ್ಯಾರ್ಥಿನಿಯನ್ನು ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಮನವೊಲಿಸಿ, ಶುಕ್ರವಾರ ಬೆಳಿಗ್ಗೆ ಪರೀಕ್ಷಗೆ ಹಾಜರಾಗುವಂತೆ ಮಾಡಿದರು.
ವಿಷಯ ತಿಳಿದ ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ಅವರು ಎಸ್.ಜೆ.ಡಿ. ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಆ ವಿದ್ಯಾರ್ಥಿನಿಗೆ ಧೈರ್ಯ ಹೇಳಿ ಪರೀಕ್ಷೆ ಬರೆಯಲು ಪ್ರೋತ್ಸಾಹಿಸಿದರು.
ಬಿಸಿಯೂಟ ಅಧಿಕಾರಿಗಳಾದ ಶ್ರೀಮತಿ ಎಸ್.ಪಿ.ಹಲಕಿ, ಪಿ.ಡಿ.ಪಾಟೀಲ, ಶಿವಾನಂದ ಗುಂಡಾಳಿ, ಕೇಂದ್ರದ ಮುಖ್ಯ ಆಧೀಕ್ಷಕ ಪಿ.ಪಿ.ಖೋತ ಉಪಸ್ಥಿತರಿದ್ದರು.