Advertisement

ಚಿಂತೆ ಬಿಡಿ ಡೇಟಾ ಸೇಫ್…ಡೋಂಟ್‌ ವರಿ!

03:45 AM Mar 06, 2017 | Team Udayavani |

ಹೊಸದಿಲ್ಲಿ: ಆಧಾರ್‌ ಕಾರ್ಡ್‌ಗೆ ನೀಡಲಾದ ಮಾಹಿತಿಗಳು ಸೋರಿಕೆ ಯಾಗುತ್ತಿವೆ ಎನ್ನುವ ವರದಿಯನ್ನು ಸರಕಾರ ಅಲ್ಲಗಳೆದಿದೆ. ಎಲ್ಲಾ ಮಾಹಿತಿಗಳು ಸುರಕ್ಷಿತ ಮತ್ತು ಭದ್ರತೆಯಿಂದ ಕೂಡಿದೆ. ಕಾರ್ಡ್‌ ದಾರರು ಈ ಬಗ್ಗೆ ಆತಂಕ ಪಡಬೇಕಾಗಿಲ್ಲ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಐಎ)ತಿಳಿಸಿದೆ.
ಕಳೆದ ಎರಡುವರೆ ವರ್ಷಗಳಿಂದ 49,000 ರೂ. ಸಬ್ಸಿಡಿ ಹಣವನ್ನು ಆಧಾರ ಕಾರ್ಡುದಾರರ ಲಿಂಕ್‌ ಆಧರಿಸಿಯೇ ವರ್ಗಾವಣೆ ಮಾಡಲಾಗುತ್ತಿದೆ.

Advertisement

ಯುಐಡಿಐಎ ಮಾಹಿತಿಯ ಪ್ರಕಾರ, ಈ ತನಕ ಆಧಾರ್‌ ನಂಬರ್‌ ಬಳಸಿ ಮಾಹಿತಿ ಸೋರಿಕೆ ಮಾಡಿರುವ ಬಗ್ಗೆ, ಖಾಸಗಿ ಮಾಹಿತಿಗಳನ್ನೆಲ್ಲ ಕಳವು ಮಾಡಿರುವ ಬಗ್ಗೆ ಅಥವಾ ಹಣ ಕಳೆದುಕೊಂಡಿರುವ ಪ್ರಕರಣಗಳು ನಡೆದಿಲ್ಲ. ಕಳೆದ ಐದು ವರ್ಷಗಳಲ್ಲಿ ಆಧಾರ್‌ ನಂಬರ್‌ ಬಳಸಿ ಕೊಂಡು 400 ಕೋಟಿಗೂ ಹೆಚ್ಚು ವಹಿವಾಟುಗಳು ನಡೆದಿವೆ. ಡೇಟಾ ಭದ್ರತೆ ಮತ್ತು ಸುರಕ್ಷತೆಗೆ ಸಂಬಂಧಿ ಬೇರೆ ಯಾವುದೇ ವ್ಯವಸ್ಥೆಗೆ ಹೋಲಿಸಿದರೂ ಆಧಾರ್‌ ವ್ಯವಸ್ಥೆ ಉತ್ತಮವಾಗಿದೆ ಎಂದಿದೆ.

ಮಾಧ್ಯಮಗಳಲ್ಲಿ ವರದಿ ಯಾಗಿರುವ ಪ್ರಕಾರ ಯಾುವುದೇ ಖಾಸಗಿ ಮಾಹಿತಿ ಗಳು ಆಧಾರ್‌ ವ್ಯವಸ್ಥೆಯಿಂದ ಸೋರಿಕೆ ಆಗಿರಲು ಸಾಧ್ಯವಿಲ್ಲ. ಬ್ಯಾಂಕ್‌ಗಳೊಂದಿಗೆ ಕೈಜೋಡಿಸಿ ಕೊಂಡು ವಾಣಿಜ್ಯ ವ್ಯವಹಾರ ನಡೆಸುವ ಕಂಪನಿಗಳಿಗೆ ಮಾಹಿತಿ ನೀಡುವಾಗ ಗ್ರಾಹಕರು ಎಚ್ಚರಿಕೆಯಿಂದ ಇರಬೇಕು ಎಂದು  ಅದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next