Advertisement

Dasara: ಇದೇ ಮೊದಲ ಬಾರಿಗೆ ತುಮಕೂರು ಜಿಲ್ಲಾಡಳಿತದ ವತಿಯಿಂದ ಅದ್ಧೂರಿ ದಸರಾ ಆಚರಣೆ

12:03 PM Oct 11, 2024 | |

ತುಮಕೂರು: ಇದೇ ಮೊದಲ ಬಾರಿಗೆ ತುಮಕೂರು ಜಿಲ್ಲಾಡಳಿತದ ವತಿಯಿಂದ ಅದ್ಧೂರಿ ದಸರಾ ಆಚರಣೆ ನಡೆಯುತ್ತಿದ್ದು ಈ ಹಿನ್ನೆಲೆ ಪೊಲೀಸ್ ಬಿಗಿಭದ್ರತೆ ಕೈಗೊಳ್ಳಲಾಗಿದೆ.

Advertisement

ತುಮಕೂರು ನಗರದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಎರಡು ದಿನ ನಡೆಯುವ ಬೃಹತ್ ವೇದಿಕೆ ಕಾರ್ಯಕ್ರಮ ನಡೆಯಲಿದೆ.

ಮೈಸೂರು ಮಾದರಿಯಲ್ಲಿ ತುಮಕೂರಿನಲ್ಲೂ ದಸರಾ ಆಚರಣೆ ನಡೆಯುತ್ತಿದ್ದು, ಇಂದಿನಿಂದ (ಅ.11, ಶುಕ್ರವಾರ) ಎರಡು ದಿನಗಳ ಕಾಲ ನಡೆಯುವ ಅದ್ಧೂರಿ ದಸರಾ ಕಾರ್ಯಕ್ರಮಕ್ಕೆ ಪೊಲೀಸ್ ಬಿಗಿಭದ್ರತೆ ಕೈಗೊಳ್ಳಲಾಗಿದೆ.

ದಸರಾ ಮೆರವಣಿಗೆ ಹಿನ್ನೆಲೆ ಖ್ಯಾತ ಗಾಯಕರಿಂದ ಸಂಗೀತ ರಸಸಂಜೆ ಕಾರ್ಯಕ್ರಮ, ವಸ್ತುಪ್ರದರ್ಶನ, ಕಾರ್ ಶೋ, ಮ್ಯಾರಥಾನ್ ನಡೆಯಲಿದ್ದು, ತುಮಕೂರಿನಲ್ಲಿ ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿದೆ.

ಸಾರ್ವಜನಿಕರು ಎಲ್ಲೆಂದರಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡದಂತೆ ಎಚ್ಚರಿಕೆ ವಹಿಸಿದ್ದು, ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ತುಮಕೂರು ಎಸ್.ಪಿ. ಅಶೋಕ್ ವೆಂಕಟ್ ಹೇಳಿದ್ದಾರೆ.

Advertisement

ಕಾರ್ಯಕ್ರಮಕ್ಕೆ ಭಾಗಿಯಾಗುವ ಸಾರ್ವಜನಿಕರಿಗೆ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಪಾರ್ಕಿಂಗ್ ವ್ಯವಸ್ಥೆ ಕೈಗೊಳ್ಳಲಾಗಿದ್ದು, ನಗರದಲ್ಲಿ ಒಟ್ಟು 10 ಕಡೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಕಾರ್ಯಕ್ರಮ ನಡೆಯುವ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿರುವ ಗಾಂಧಿ ಸ್ಮಾರಕದ ಬಳಿ ವಿವಿಐಪಿ ಹಾಗೂ ವಿಐಪಿ ಗಳ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಡಿಡಿಪಿಐ ಕಚೇರಿ ಆವರಣ, ರೈಲ್ವೆ ನಿಲ್ದಾಣ ಬ್ರಿಡ್ಜ್ ಬಳಿ, ಉಪ್ಪಾರಹಳ್ಳಿ ಬ್ರಿಡ್ಜ್ ನಿಂದ ರೈಲ್ವೆ ಸ್ಟೇಷನ್ ರಸ್ತೆ, ಭಾರತ್ ಮಾತಾ ಸ್ಕೂಲ್ ಮೈದಾನ, ಎಂಪ್ರೆಸ್ ಕಾಲೇಜು ಮೈದಾನ, ಬಿಷಪ್ ಸರ್ಜೆಂಟ್ ಸ್ಕೂಲ್ ಮೈದಾನ, ಎನ್ಇಪಿಎಸ್ ಸ್ಟೇಷನ್ ಎದುರಿನ ಖಾಲಿ ಆವರಣ, ಚಾಮುಂಡೇಶ್ವರಿ ದೇವಸ್ಥಾದ ರಸ್ತೆ, ಸರ್ವೋದಯ ಶಾಲಾ ಮೈದಾನ, ಹೆಲ್ತ್ ಕ್ಯಾಂಟೀನ್ ರೋಡ್ ಹಾಗೂ ಹಳೆ ಕೆಎಸ್ಆರ್ ಟಿಸಿ ನಿಲ್ದಾಣದಲ್ಲಿ ಸಾರ್ವಜನಿಕರ ವಾಹನಗಳ ಪಾರ್ಕಿಂಗ್ ಗೆ ವ್ಯವಸ್ಥೆ ಮಾಡಲಾಗಿದೆ ಎಂದು ತುಮಕೂರು ಎಸ್ ಪಿ ಅಶೋಕ್ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next