Advertisement

ನಮ್ಮನೆಯ ದಸರಾ ಬೊಂಬೆ ಸೊಬಗು

11:46 AM Sep 23, 2017 | |

ಅತ್ತ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಉತ್ಸವಕ್ಕೆ ಚಾಲನೆ ಸಿಕ್ಕ ಬೆನ್ನಲ್ಲೇ ಇತ್ತ ಸಿಲಿಕಾನ್‌ ಸಿಟಿಯ ಮನೆ-ಮನೆಗಳಲ್ಲಿ ಗೊಂಬೆಗಳ ದರ್ಬಾರು ಶುರುವಾಗಿದೆ. ಗಾಂಧಿ ಬಜಾರ್‌ನ ವೀಣಾ ರವಿ ಅವರ ಮನೆಗೆ ಭೇಟಿ ನೀಡಿದರೆ, ಗೊಂಬೆಗಳಲ್ಲೇ 18 ದಿನಗಳ ಕುರುಕ್ಷೇತ್ರ ಯುದ್ಧದ ದರ್ಶನ ಆಗುತ್ತದೆ.

Advertisement

ಕೌರವರು-ಪಾಂಡವರ ನಡುವಿನ ಯುದ್ಧದ ಸಮಗ್ರ ಚಿತ್ರಣವನ್ನು ಈ ಗೊಂಬೆಗಳು ಕಟ್ಟಿಕೊಡುತ್ತವೆ. ಇನ್ನು ಪದ್ಮನಾಭನಗರದ ಜ್ಞಾನ ವಿಜ್ಞಾನ ವಿದ್ಯಾಪೀಠ ಶಾಲೆಯ ದಸರಾ ಗೊಂಬೆಗಳೂ ಮಹಾಭಾರತದ ಕಥೆ ಹೇಳುತ್ತವೆ. ಇನ್ನೊಂದೆಡೆ ಬಸವನಗುಡಿಯ ನಿವಾಸಿ ಮಂಜುಳಾ ಮತ್ತು ಬೊಂಬೆಗಳ ನಡುವಿನ ನಂಟಿಗೆ ಸತತ 25 ವರ್ಷಗಳೇ ಸಂದಿವೆ.

ಒಂಬತ್ತು ದಿನಗಳಲ್ಲಿ ಮೊದಲ ಮೂರು ದಿನ ಲಕ್ಷ್ಮೀ ಪೂಜೆ, ನಂತರದ ಮೂರು ದಿನ ಸರಸ್ವತಿ ಹಾಗೂ ಕೊನೆಯ ಮೂರು ದಿನ ಶಕ್ತಿ ದೇವತೆಯ ಪೂಜೆ ಮಾಡಲಾಗುತ್ತದೆ. ಇಡೀ ಸಮಾಜ ಸಕಲ ರೀತಿಯಲ್ಲಿ ಸಂದ್ಭರಿತವಾಗಬೇಕು ಅನ್ನುವ ಅಚಲ ನಂಬಿಕೆಯೊಂದಿಗೆ ಇವರೆಲ್ಲರೂ ದಸರಾ ಗೊಂಬೆಗಳ ಪ್ರದರ್ಶನ ನಡೆಸುತ್ತಿದ್ದಾರೆ. 

ಸೂಚನೆ: ನಿಮ್ಮ ಮನೆಯಲ್ಲೂ ದಸರಾ ಬೊಂಬೆ ಕೂರಿಸಿದ್ದರೆ ಸುಂದರವಾದ ಚಿತ್ರಗಳನ್ನು ತೆಗೆದು 88611 96369 ಸಂಖ್ಯೆಗೆ ವಾಟ್ಸ್‌ಆ್ಯಪ್‌ ಮಾಡಿ.

Advertisement

Udayavani is now on Telegram. Click here to join our channel and stay updated with the latest news.

Next