Advertisement
ಕಳೆದ 2022ರ ಡಿಸೆಂಬರ್‌ವರೆಗೂ ಇಡೀ ಕ್ಷೇತ್ರದಲ್ಲಿ ಜೆಡಿ ಎಸ್‌ಗೆ ಪ್ರಬಲ ಎದು ರಾಳಿಯೇ ಇರಲಿಲ್ಲ. ಈಗ, ದರ್ಶನ್ ಪುಟ್ಟಣ್ಣಯ್ಯ ಅಮೇರಿಕಾದಿಂದ ಕ್ಷೇತ್ರಕ್ಕೆ ಮರಳಿದ್ದು, ಪ್ರಬಲ ಪೈಪೋಟಿ ನೀಡುವ ಮುನ್ಸೂಚನೆ ನೀಡುತ್ತಿದ್ದಾರೆ.
Related Articles
Advertisement
ಜನರಿಂದ ಅದ್ದೂರಿ ಸ್ವಾಗತ: ಮಂಡ್ಯ ತಾಲೂಕಿನ ಮೇಲುಕೋಟೆ ಕ್ಷೇತ್ರದ ಎಚ್.ಮಲ್ಲಿಗೆರೆ ಗ್ರಾಮದಿಂದ ಪಾದಯಾತ್ರೆ ಆರಂಭಿಸಿರುವ ದರ್ಶನ್ ರಿಗೆ ಕ್ಷೇತ್ರದ ಗ್ರಾಮಸ್ಥರು ಅಭೂತಪೂರ್ವ ಬೆಂಬಲ ವ್ಯಕ್ತಪಡಿಸುತ್ತಿ ದ್ದಾರೆ. ಹೋದ ಕಡೆಯಲೆಲ್ಲಾ, ವಿವಿಧ ರೀತಿಯ ಬೃಹತ್ ಹಾರ ಹಾಕುತ್ತಾ ಬೆಂಬಲ ಸೂಚಿಸುತ್ತಿದ್ದಾರೆ.
ಪ್ರಬಲವಾಗಿರುವ ರೈತಸಂಘ: ಮೇಲುಕೋಟೆ ಕ್ಷೇತ್ರ ದಲ್ಲಿ ರೈತ ನಾಯಕ ಕೆ.ಎಸ್. ಪುಟ್ಟಣ್ಣಯ್ಯ ಅವರ ಸಂಘ ಟನೆಯಿಂದ ಇಂದಿಗೂ ರೈತಸಂಘ ಪ್ರಬಲವಾಗಿ ಬೇರೂ ರಿದೆ. 1989ರ ಚುನಾವಣೆಯಲ್ಲಿ ರೈತಸಂಘ ದಿಂದ ಕೆ. ಎಸ್.ಪುಟ್ಟಣ್ಣಯ್ಯ ಕಣಕ್ಕಿಳಿ ದಿದ್ದರು. ಇಂದಿಗೂ ಕ್ಷೇತ್ರದಲ್ಲಿ ರೈತಸಂಘ ತನ್ನದೇ ಆದ ಮತ ಬ್ಯಾಂಕ್ ಹೊಂದಿದೆ.
ಕಾಂಗ್ರೆಸ್ ಬೆಂಬಲ: ಮೇಲುಕೋಟೆ ಕ್ಷೇತ್ರದಲ್ಲಿ ರೈತ ಸಂಘಕ್ಕೆ ಕಾಂಗ್ರೆಸ್ ಬೆಂಬಲವಾಗಿ ನಿಂತಿದೆ. ಕಳೆದ 2018ರ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಹಾಕದೆ ರೈತಸಂಘದ ಅಭ್ಯರ್ಥಿ ದರ್ಶನ್‌ಪುಟ್ಟಣ್ಣಯ್ಯಗೆ ಬೆಂಬಲ ವ್ಯಕ್ತಪಡಿಸಿತ್ತು. ಈ ಬಾರಿಯೂ ಕಾಂಗ್ರೆಸ್ ಬೆಂಬಲ ನೀಡುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಕಾಂಗ್ರೆಸ್‌ನ ಟಿಕೆಟ್ ಆಕಾಂಕ್ಷಿಗಳು ರೈತಸಂಘದೊಂದಿಗೆ ಹೊಂದಾಣಿಕೆ ಬೇಡ. ಅಭ್ಯರ್ಥಿ ಕಣಕ್ಕಿಳಿಸುವಂತೆ ಒತ್ತಾಯಿಸುತ್ತಿದ್ದಾರೆ. ಆದರೂ, ಈ ಬಾರಿ ಹೊಂದಾಣಿಕೆ ಯಾಗುವ ಸಾಧ್ಯತೆಗಳೇ ಹೆಚ್ಚಿವೆ.
ನಟ ದರ್ಶನ್ ಸ್ಟಾರ್ ಕ್ಯಾಂಪೇನರ್ : ದರ್ಶನ್‌ಪುಟ್ಟಣ್ಣಯ್ಯ ಪರ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಬಾರಿ ಸ್ಟಾರ್ ಕ್ಯಾಂಪೇನರ್ ಆಗಲಿದ್ದಾರೆ. ಕಳೆದ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ರೈತಸಂಘ ಸಂಪೂರ್ಣ ಸುಮಲತಾ ಪರ ನಿಂತಿತ್ತು. ನಗರದ ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ನಡೆದ ಸಮಾವೇಶದಲ್ಲಿ ಸ್ವತಃ ನಟ ದರ್ಶನ್ ಮುಂದಿನ ಚುನಾವಣೆಯಲ್ಲಿ ದರ್ಶನ್‌ಪುಟ್ಟಣ್ಣಯ್ಯ ಪರ ಪ್ರಚಾರ ಮಾಡಲಿದ್ದೇನೆ. ಆತ ನನ್ನ ಸಹೋದರ ಇದ್ದಂತೆ ಎಂದು ಹೇಳಿಕೆ ನೀಡಿದ್ದರು. ಅಲ್ಲದೆ, ಇತ್ತೀಚೆಗೆ ನಟ ದರ್ಶನ್ ಹುಟ್ಟುಹಬ್ಬದ ಸಂದರ್ಭದಲ್ಲಿ ದರ್ಶನ್‌ಪುಟ್ಟಣ್ಣಯ್ಯ ಖುದ್ದು ಭೇಟಿ ಮಾಡಿ ಶುಭಾಷಯ ಕೋರಿದ್ದಲ್ಲದೆ, ಕಾಟೇರ ಸಿನಿಮಾ ಪೋಸ್ಟರ್ ಬಿಡುಗಡೆ ಮಾಡಿ ಬಂದಿದ್ದರು. ಇದರಿಂದ ದರ್ಶನ್ ಪುಟ್ಟಣ್ಣಯ್ಯ ಪರ ಚುನಾವಣೆಯಲ್ಲಿ ನಟ ದರ್ಶನ್ ಪ್ರಚಾರ ಮಾಡಲಿದ್ದಾರೆ.
-ಎಚ್.ಶಿವರಾಜು