Advertisement
ಬಜಪೆ- ಕರಂಬಾರು ರಾಜ್ಯ ಹೆದ್ದಾರಿ ತಿರುವಿನಿಂದ ಕೂಡಿದೆ. ಮಾತ್ರವಲ್ಲದೇ ಅತ್ಯಂತ ಕಿರಿದಾಗಿದ್ದು ವಾಹನ ಸಂಚಾರವೇ ಇಲ್ಲಿ ಕಷ್ಟ ಕರ. ಹೆದ್ದಾರಿಯ ಬದಿಯಲ್ಲಿಯೇ ಹಲವು ಮರಗಳಿವೆ. ಹಲವೆಡೆ ಇದರ ಗೆಲ್ಲುಗಳು ಹೆದ್ದಾರಿಯನ್ನು ಅವರಿಸಿವೆ. ಇವು ಭಾರವಾಗಿ ಹೆದ್ದಾರಿಗೆ ಬೀಳುವ ಪರಿಸ್ಥಿತಿಯಲ್ಲಿವೆ.
Related Articles
ಬಜಪೆ -ಮರವೂರು ಹೆದ್ದಾರಿ 67 ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಅತೀ ಮುಖ್ಯ ಹೆದ್ದಾರಿ. ಹೆಚ್ಚಾಗಿ ರಾತ್ರಿ ಪ್ರಯಾಣಿಕರು ಇದನ್ನೇ ಬಳಸುತ್ತಾರೆ. ಮಂಗಳೂರಿನಿಂದ ವಿಮಾನ ನಿಲ್ದಾಣ ಹಾಗೂ ಬಜಪೆಗೆ ಬರುವ ಹಾಗೂ ಹೋಗುವ ವಾಹನ ಸವಾರರು ಇದೇ ಮಾರ್ಗವನ್ನು ಬಳ ಸು ತ್ತಾರೆ. ಮೇ 20ರಂದು ಮುಂಜಾನೆ ಮರವೂರು ಜಂಕ್ಷನ್‌ನಲ್ಲಿ ಹೆದ್ದಾರಿಗೆ ಮರ ಬಿದ್ದ ಪರಿಣಾಮ ವಿಮಾನ ನಿಲ್ದಾಣಕ್ಕೆ ಬರುವ, ಹೋಗುವ ಪ್ರಯಾಣಿಕರು ತುಂಬಾ ತೊಂದರೆ ಅನುಭವಿಸಬೇಕಾಯಿತು.
Advertisement
ಅರಣ್ಯ ಇಲಾಖೆಗೆ ಮನವಿಕರಂಬಾರು ಹೆದ್ದಾರಿ ಬದಿಯಲ್ಲಿರುವ ಅಪಾಯಕಾರಿ ಮರ ಹಾಗೂ ಗೆಲ್ಲುಗಳನ್ನು ತೆರವುಗೊಳಿಸುವಂತೆ ಈಗಾಗಲೇಮಳವೂರು ಗ್ರಾಮ ಪಂಚಾಯತ್ ನಿಂದ ಅರಣ್ಯ ಇಲಾಖೆಗೆ ಮನವಿ ಮಾಡಲಾಗಿದೆ. ಬೃಹತ್ ಗಾತ್ರದ ಮರಗಳು ಇಲ್ಲಿದ್ದು, ತೆಗೆಯದೇ ಇದ್ದರೆ ತಗ್ಗು ಪ್ರದೇಶದಲ್ಲಿರುವ ಮನೆ, ವಿದ್ಯುತ್ ಕಂಬಗಳಿಗೂ ಅಪಾಯವಿದೆ ಎಂದು ಮಳವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಅರ್ಬಿ ತಿಳಿಸಿದ್ದಾರೆ.