Advertisement
ಕಳೆದೊಂದು ವಾರದಿಂದ ಈ ಗುಂಡಿಗಳಿದ್ದು ದಿನದಿಂದ ದಿನಕ್ಕೆ ದೊಡ್ಡ ದಾಗುತ್ತಿವೆ. ಕಾಂಕ್ರೀಟ್ ರಸ್ತೆ ಮತ್ತು ಡಾಮರು ರಸ್ತೆಯ ನಡುವೆ ಉಂಟಾಗಿರುವ ಈ ಗುಂಡಿಗಳಿಗೆ ವಾಹನಗಳ ಚಕ್ರಗಳು ಸಿಲುಕಿಕೊಳ್ಳುತ್ತಿವೆ. ಇದೇ ಕಾರಣಕ್ಕೆ ಇಲ್ಲಿ ವಾಹನಗಳು ಆಮೆಗತಿಯಲ್ಲಿ ಸಾಗುತ್ತಿವೆ. ದ್ವಿಚಕ್ರ ವಾಹನ ಸವಾರರು ಗುಂಡಿ ತಪ್ಪಿಸುವ ಭರದಲ್ಲಿ ನಿಯಂತ್ರಣ ಕಳೆದುಕೊಳ್ಳುತ್ತಿದ್ದಾರೆ.
Related Articles
Advertisement
ಸಾಮಾನ್ಯವಾಗಿ ಇಲ್ಲಿ ವಾಹನ ದಟ್ಟಣೆಯಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇದೀಗ ಹೊಂಡ ಗಳಿಂದಾಗಿ ಟ್ರಾಫಿಕ್ ಜಾಮ್ ಮತ್ತಷ್ಟು ಹೆಚ್ಚಾಗಿದೆ. ಸಮಸ್ಯೆ ಉಲ್ಬಣವಾಗುವ ಮೊದಲು, ಅಪಘಾತ ಗಳು ಸಂಭವಿಸುವ ಪೂರ್ವದಲ್ಲೇ ಪಾಲಿಕೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾದ ಆವಶ್ಯಕತೆ ಇದೆ.