Advertisement

ಅಯ್ಯೋ ವಿಧಿಯೇ; ತಾಳಿ ಕಟ್ಟೋ ಮೊದಲೇ ಹೃದಯಾಘಾತದಿಂದ ವರನ ಸಾವು

04:17 PM Jun 04, 2017 | Team Udayavani |

ಪಾಟ್ನಾ: ವಿಧಿಯಾಟ ಬಲ್ಲವರು ಯಾರು…ವೈವಾಹಿಕ ಜೀವನದ ಕನಸು ಹೊತ್ತ ವರ ಮಹಾಶಯ ಇನ್ನೇನು ವಧುವಿನ ಕೊರಳಿಗೆ ತಾಳಿ ಕಟ್ಟಬೇಕು ಎಂಬಷ್ಟರಲ್ಲಿಯೇ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬಿಹಾರದ ಕೈಮುರ್ ಜಿಲ್ಲೆಯಲ್ಲಿ ನಡೆದಿದೆ.

Advertisement

ತಾಳಿಯ ಕಟ್ಟುವ ಮುನ್ನ ವರ ಸಾವನ್ನಪ್ಪಿರುವ ಘಟನೆ ನಡೆದಿರುವುದು ಬಿಹಾರದಲ್ಲಿ. ಶಶಿಕಾಂತ್ ಪಾಂಡೆ (25) ಎಂಬ ವರ ಮದುವೆ ಸಮಾರಂಭದಲ್ಲಿ ತಾಳಿ ಕಟ್ಟುವ ಮೊದಲು ಕುಣಿತದಲ್ಲಿ ತೊಡಗಿದ್ದ, ಈ ವೇಳೆ ಪಾಂಡೆ ಕುಸಿದು ಬಿದ್ದಿದ್ದ.

ಕೂಡಲೇ ವರ ಪಾಂಡೆಯನ್ನು ಗೆಳೆಯರು ಮತ್ತು ಸಂಬಂಧಿಕರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅಷ್ಟರಲ್ಲೇ ಆತನ ಪ್ರಾಣಪಕ್ಷಿ ಹಾರಿಹೋಗಿರುವುದಾಗಿ ವೈದ್ಯರು ತಿಳಿಸಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next