Advertisement

13 ರಂದು ಡ್ಯಾನ್ಸ್‌ ಸೀಜನ್‌-6, ಕಾಮಿಡಿ ಕಿಲಾಡಿಗಳು ಆಡಿಷನ್‌

04:03 PM Mar 11, 2022 | Team Udayavani |

ದಾವಣಗೆರೆ: ಜೀ ಕನ್ನಡ ವಾಹಿನಿಯ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಸೀಸನ್‌- 6 ಮತ್ತು ಕಾಮಿಡಿ ಕಿಲಾಡಿಗಳು ಸೀಸನ್‌ -4ರ ಮಹಾ ಆಡಿಷನ್ಸ್‌ ಮಾ. 13ರಂದು ದಾವಣಗೆರೆಯ ಎಸ್‌.ಎಸ್‌ ಲೇಔಟ್‌ನಲ್ಲಿರುವ ಬಿ.ಎಸ್‌ ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ.

Advertisement

ಭಾನುವಾರ ಬೆಳಗ್ಗೆ 9ರಿಂದ ಆಡಿಷನ್ಸ್‌ ಆರಂಭವಾಗಲಿದೆ. ಆಸಕ್ತರು ಪಾಸ್‌ಪೋರ್ಟ್‌ ಸೈಜ್‌ ಭಾವಚಿತ್ರಹಾಗೂ ವಿಳಾಸ ದೃಢೀಕರಣದ ನಕಲು ಪ್ರತಿಯೊಂದಿಗೆ ಪಾಲ್ಗೊಳ್ಳಬಹುದು. ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಕಾರ್ಯಕ್ರಮಕ್ಕೆ ಆಡಿಷನ್‌ ನೀಡುವವರ ವಯಸ್ಸು 6 ರಿಂದ 60 ವರ್ಷ, ಕಾಮಿಡಿ ಕಿಲಾಡಿಗಳು ಆಡಿಷನ್‌ನಲ್ಲಿ ಭಾಗವಹಿಸುವವರ ವಯಸ್ಸು 16 ರಿಂದ 60 ವರ್ಷದೊಳಗಿರಬೇಕು. ಯಾವುದೇ ರೀತಿಯ ಶುಲ್ಕ ಕಟ್ಟುವಂತಿಲ್ಲ. ವಾಹಿನಿಯ ಹೆಸರಿನಲ್ಲಿ ಹಣ ಪಡೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜೀ ಕನ್ನಡ ವಾಹಿನಿ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next