ಬಳ್ಳಾರಿ: ಇಲ್ಲಿನ ಬಳ್ಳಾರಿ ನಗರಾಭಿವೃದ್ಧಿ ಪ್ರಾ ಧಿಕಾರದ ಅಧ್ಯಕ್ಷರನ್ನಾಗಿ ದಮ್ಮೂರು ಶೇಖರ್ ಅವರನ್ನು ಮರು ಆಯ್ಕೆ ಮಾಡಿ ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ. ಅ ಕಾರ ಕೈತಪ್ಪಿದ 48 ಗಂಟೆ ಕಳೆಯುವಷ್ಟರೊಳಗೆ ಮರು ಪಡೆಯುವಲ್ಲಿ ದಮ್ಮೂರು ಶೇಖರ್ ಯಶಸ್ವಿಯಾಗಿದ್ದು, ಈ ಮೂಲಕ ಪಕ್ಷದ ಮೂಲ ಬಿಜೆಪಿಗರಿಗೆ ಮತ್ತೂಮ್ಮೆ ಹಿನ್ನಡೆಯಾದಂತಾಗಿದೆ.
ಬಳ್ಳಾರಿ ಬುಡಾ ಅಧ್ಯಕ್ಷರಾಗಿದ್ದ ದಮ್ಮೂರು ಶೇಖರ್ ಬದಲಿಗೆ ಜ. 27ರಂದು ಬಿಜೆಪಿ ಹಿರಿಯ ಮುಖಂಡರಾದ ಕೆ.ಎ.ರಾಮಲಿಂಗಪ್ಪರನ್ನು ಬುಡಾ ಅಧ್ಯಕ್ಷರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಜ. 27ರಂದು ಆದೇಶ ಹೊರಡಿಸಿತ್ತು. ಆದೇಶ ಪ್ರತಿಯನ್ನು ಪಡೆದ ರಾಮಲಿಂಗಪ್ಪನವರು ತರಾತುರಿಯಲ್ಲಿ ಅಂದು ಸಂಜೆಯೇ ಬುಡಾ ಕಚೇರಿಯಲ್ಲಿ ಅ ಧಿಕಾರ ವಹಿಸಿಕೊಂಡಿದ್ದರು. ಇದು ದಮ್ಮೂರು ಶೇಖರ್ ಅಸಮಧಾನಕ್ಕೆ ಕಾರಣವಾಗಿತ್ತು. ಕೂಡಲೇ ಬೆಂಗಳೂರಿಗೆ ತೆರಳಿದ ದಮ್ಮೂರ್‌ಶೇಖರ್ ಅವರು ತೆರೆಮರೆಯಲ್ಲಿ ತೀವ್ರ ಕಸರತ್ತು ನಡೆಸಿ ಬುಡಾ ಅಧ್ಯಕ್ಷರಾಗಿ ಮರು ನೇಮಕವಾಗಿದ್ದು ಎರಡು ದಿನ ಕಳೆಯುವಷ್ಟರಲ್ಲಿ ಆದೇಶವನ್ನು ಬದಲಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೇವಲ ಎರಡು ದಿನಗಳಲ್ಲೇ ಅಧಿ ಕಾರ ಕಳೆದುಕೊಂಡ ಪಕ್ಷದ ಹಿರಿಯ ಮುಖಂಡ ಕೆ.ಎ.ರಾಮಲಿಂಗಪ್ಪರಿಗೆ ವಾಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಅವರನ್ನು ಸಹ ಸಮಾಧಾನ ಪಡಿಸಲಾಗಿದೆಯಾದರೂ ಪಕ್ಷದೊಳಗಿನ ಆಂತರಿಕ ಒಳಬೇಗುದಿ ವರ್ಷದ ಬಳಿಕ ಮತ್ತೆ ಮುನ್ನೆಲೆಗೆ ಬಂದಂತಾಗಿದೆ. ಬುಡಾ ಅಧ್ಯಕ್ಷ ಸ್ಥಾನದ ವಿವಾದದಲ್ಲಿರೆಡ್ಡಿ ಬಣಕ್ಕೆ ಮೇಲುಗೈ ಸಾ ಧಿಸಿದಂತಾಗಿದೆ.
ರೆಡ್ಡಿ ವರ್ಸಸ್ ಸಿಂಗ್?: ಬಳ್ಳಾರಿ ಬುಡಾ ಅಧ್ಯಕ್ಷ ಸ್ಥಾನದ ವಿವಾದಕ್ಕೆ ಸಂಬಂಧಿ ಸಿದಂತೆ ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರರೆಡ್ಡಿ ಮತ್ತು ಜಿಲ್ಲಾ ಉಸ್ತುವಾರಿಸಚಿವ ಆನಂದ್‌ಸಿಂಗ್ ನಡುವಿನ ಅಸಮಾಧಾನವೇ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಅಧಿ ಕಾರಿಗಳ ವರ್ಗಾವಣೆ, ವಿಮ್ಸ್ ನಿರ್ದೇಶಕರ ದಿಢೀರ್ ಬದಲಾವಣೆ ಸೇರಿ ಹಲವು ವಿಷಯಗಳಲ್ಲಿ ಸ್ಥಳೀಯ ಶಾಸಕರ ಅಭಿಪ್ರಾಯ ಕೇಳದೆ ಮಾಡಲಾಗಿದೆ.
ಅಲ್ಲದೇ ಬಳ್ಳಾರಿ ನಗರಾಭಿವೃದ್ಧಿ ಪ್ರಾ ಧಿಕಾರದಿಂದ ನಗರದ ವಿವಿಧೆಡೆ ನಿರ್ಮಿಸಲಾಗಿರುವ ಬಸ್ ಶೆಲ್ಟರ್‌ಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್ ಫೋಟೋಹಾಕದೆ, ಶಾಸಕ ಜಿ. ಸೋಮಶೇಖರರೆಡ್ಡಿ ಅವರ ಭಾವಚಿತ್ರದೊಂದಿಗೆ ಮಾಜಿ ಸಚಿವ ಜನಾರ್ದನರೆಡ್ಡಿ, ಮೊಳಕಾಲ್ಮುರು ಶಾಸಕ, ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಫೋಟೊಗಳನ್ನು ಹಾಕಿರುವುದು ಸಚಿವ ಆನಂದ್‌ಸಿಂಗ್ ಅವರಿಗೆ ಅಸಮಾಧಾನ ಮೂಡಿಸಿದೆ.ಪರಿಣಾಮ ಸೋಮಶೇಖರರೆಡ್ಡಿ-ಆನಂದ್‌ಸಿಂಗ್ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿದ್ದು, ಬುಡಾಅಧ್ಯಕ್ಷರಾಗಿದ್ದ ದಮ್ಮೂರು ಶೇಖರ್ ಅವರ ದಿಢೀರ್ ಬದಲಾವಣೆಗೆ ಕಾರಣ ಎಂಬ ಮಾತುಗಳು ಸಹ ಪಕ್ಷದ ವಲಯದಲ್ಲಿಕೇಳಿಬರುತ್ತಿವೆ.
ಇದನ್ನೂ ಓದಿ:ಚಿಕ್ಕಬಳ್ಳಾಪುರ: ಉದ್ಯಾನದ ಜಾಗವನ್ನು ಅತಿಕ್ರಮಣ ಮಾಡಿ ಕಟ್ಟಿದ್ದ ಮನೆ, ಕಂಪೌಂಡ್ ನೆಲಸಮ
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿ ಕಾರ ಬಳ್ಳಾರಿ ನಗರ ವ್ಯಾಪ್ತಿಗೆ ಬರಲಿದೆ. ಪ್ರಾ ಧಿಕಾರದ ಅಧ್ಯಕ್ಷ ಸ್ಥಾನದ ನೇಮಕಕ್ಕೆ ಸಂಬಂಧಿ ಸಿದಂತೆ ಸ್ಥಳೀಯ ಶಾಸಕರ ಅಭಿಪ್ರಾಯ ಅಥವಾ ಶಿಫಾರಸ್ಸು ಪತ್ರ ಬೇಕು. ಆದರೆ ಜ. 19ರಂದು ಸಚಿವಆನಂದ್‌ಸಿಂಗ್ ಅವರು ಕೆ.ಎ.ರಾಮಲಿಂಗಪ್ಪರಿಗೆ ಶಿಫಾರಸ್ಸು ಪತ್ರ ನೀಡಿದ್ದಾರೆ.ಸ್ಥಳೀಯ ಶಾಸಕರು ಶಿಫಾರಸ್ಸು ಪತ್ರ ನೀಡಿಲ್ಲ ಎನ್ನಲಾಗುತ್ತಿದ್ದು, ಜ. 27ರಂದು ರಾಮಲಿಂಗಪ್ಪರನ್ನುಬುಡಾ ಅಧ್ಯಕ್ಷರನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಆದೇಶವನ್ನು ಬದಲಾಯಿಸಿ,ಬುಡಾ ಅಧ್ಯಕ್ಷರಾಗಿ ಮರು ನೇಮಕವಾಗುವಲ್ಲಿ ದಮ್ಮೂರ್ ಶೇಖರ್ ಯಶಸ್ವಿಯಾಗಿದ್ದಾರೆ.
ಇದರಿಂದ ರೆಡ್ಡಿ ಬಣ ಮತ್ತೂಮ್ಮೆ ಮೇಲುಗೈ ಸಾಧಿ ಸಿದಂತಾಗಿದೆ. ಆದರೆ, ಈ ಹಿಂದೆ ಸಾಮೂಹಿಕ ರಾಜೀನಾಮೆ ನೀಡಲುಮುಂದಾಗಿದ್ದ ಪಕ್ಷದ ಕಾರ್ಯಕರ್ತರು ಮುಂದೆ ಏನು ಮಾಡಲಿದ್ದಾರೋ ಕಾದು ನೋಡಬೇಕಾಗಿದೆ.
ವೆಂಕೋಬಿ ಸಂಗನಕಲ್ಲು