Advertisement
ತನ್ನ ಮತ್ತು ತನ್ನವರ ಬದುಕಿನ ನಿರ್ವಹಣೆಗಾಗಿ ಸೌದಿ ಅರೇಬಿಯಾಕ್ಕೆ ತೆರಳಿರುವ ತುಳು, ಕನ್ನಡಿಗರನ್ನು 2006ರಲ್ಲಿ ಕಲೆ ಹಾಕಿ ‘ಮಾಸಾ’ ಎನ್ನುವ ಚಾರಿಟಿ ಸಂಸ್ಥೆಯನ್ನು ಹುಟ್ಟು ಹಾಕಲಾಗಿದೆ. ಅಲ್ಲಿ ನೆಲೆಸಿರುವ ತುಳು, ಕನ್ನಡಿಗರು, ಸಾಂಸ್ಕೃತಿಕ, ಆಟೋ, ವ್ಯಕ್ತಿ ವಿಕಸನ, ಸಂವಹನ ಮತ್ತು ನಾಯಕತ್ವ ಗುಣ ರೂಪಿಸುವುದರ ಜತೆಗೆ ಸಾವಿರಾರು ಬಡ ತುಳು, ಕನ್ನಡಿಗರ ಬದುಕಿನ ಆಸರೆಯಾಗಿ ಇಂದು ಬಡವರಿಗೆ ಮಾಸಾ ಕಾಮಧೇನುವೆನಿಸಿದೆ.
ಅವಿಭಜಿತ ದ.ಕ. ಜಿಲ್ಲೆಯ ಸಂಕಷ್ಟದಲ್ಲಿದ್ದ ತುಳು ಕನ್ನಡಿಗರಿಗೆ ಕಳೆದ 11 ವರ್ಷಗಳಲ್ಲಿ ರೂ. 1 ಕೋಟಿ 20 ಲಕ್ಷಕ್ಕೂ ಮೀರಿ ವೈದ್ಯಕೀಯ ಮತ್ತು ಶೈಕ್ಷಣಿಕ ಸಹಾಯ ನೀಡಿದೆ. ಇಂದು 600 ಕುಟುಂಬ ಸದಸ್ಯರನ್ನು ಹೊಂದಿರುವ ‘ಮಾಸಾ’ ಸಂಸ್ಥೆ ದೀಪಾವಳಿ, ಕ್ರಿಸ್ಮಸ್, ರಮ್ಜಾನ್ ಹಬ್ಬಹರಿದಿನಗಳನ್ನು ಒಟ್ಟಾಗಿ ಆಚರಿಸುತ್ತ ತಾಯ್ನಾಡಿನ ಋಣವನ್ನು ತೀರಿಸುತ್ತ ಬಂದಿದೆ.