Advertisement

Madamakki ಗ್ರಾಮದ ಹಂಜಾ- ಕಾರಿಮನೆ – ಎಡ್ಮಲೆ ಹದಗೆಟ್ಟ ರಸ್ತೆ: ತುರ್ತು ದುರಸ್ತಿ ಕಾರ್ಯ

02:58 PM Aug 02, 2024 | Team Udayavani |

ಕುಂದಾಪುರ: ಕೆಸರುಮಯಗೊಂಡು ವಾಹನಗಳು ಸಂಚರಿಸಲು ಸಾಧ್ಯವಿಲ್ಲದಷ್ಟು ಹದಗೆಟ್ಟಿದ್ದ ಮಡಾಮಕ್ಕಿ ಗ್ರಾಮದ ಹಂಜಾ – ಕಾರಿಮನೆ – ಎಡ್ಮಲೆ ಸಂಪರ್ಕಿಸುವ ಮಣ್ಣಿನ ರಸ್ತೆ ಸಹಿತ ಪಂಚಾಯತ್‌ ವ್ಯಾಪ್ತಿಯ ವಿವಿಧ ರಸ್ತೆಗಳ ಸಮಸ್ಯೆಗೆ ಜಿಲ್ಲಾಡಳಿತ ತ್ವರಿತಗತಿಯಲ್ಲಿ ಸ್ಪಂದಿಸಿದ್ದು, ಪ್ರಾಕೃತಿಕ ವಿಕೋಪದಡಿ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ.

Advertisement

ಈ ಮಡಾಮಕ್ಕಿಯ ಹಂಜಾ- ಕಾರಿಮನೆ- ಎಡ್ಮಲೆ ಸಂಪರ್ಕಿಸುವ ರಸ್ತೆಯ ದುರಸ್ತಿಗಾಗಿ ವಿಧಾನ ಪರಿಷತ್‌ ಸದಸ್ಯ ಡಾ| ಮಂಜುನಾಥ್‌ ಭಂಡಾರಿ ಅವರ ಗಮನಕ್ಕೆ ಕುಂದಾಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹರಿಪ್ರಸಾದ್‌ ಶೆಟ್ಟಿ ಕಾನ್ಮಕ್ಕಿ ಹಾಗೂ ಮಡಾಮಕ್ಕಿ ಗ್ರಾ.ಪಂ. ಅಧ್ಯಕ್ಷ ಉದಯ ಶೆಟ್ಟಿ ಅವರು ಜು. 31ಕ್ಕೆ ಮನವಿ ಮಾಡಿಕೊಂಡಿದ್ದರು. ಮನವಿಗೆ ತ್ವರಿತಗತಿಯಲ್ಲಿ ಸ್ಪಂದಿಸಿದ ಪರಿಷತ್‌ ಸದಸ್ಯರು, ಕೂಡಲೇ ಜಿಲ್ಲಾಧಿಕಾರಿ ಡಾ| ವಿದ್ಯಾಕುಮಾರಿ ಹಾಗೂ ಜಿ.ಪಂ. ಸಿಇಒ ಪ್ರತೀಕ್‌ ಬಾಯಲ್‌ ಅವರಿಗೆ ಸೂಚಿಸಿದ್ದು, ಪ್ರಾಕೃತಿಕ ವಿಕೋಪದ ಅನುದಾನದಡಿ ದುರಸ್ತಿ ಕೈಗೊಳ್ಳಲು ಸೂಚಿಸಿದರು.

ಮಡಾಮಕ್ಕಿ ಗ್ರಾಮದ ಹಂಜಾ ರಸ್ತೆ -2.5 ಕಿ.ಮೀ., ಮೇಲ್ಛಾವಡಿ ರಸ್ತೆ 500 ಮೀ., ಬೆಪ್ಡೆ ಗರಡಿ ಮನೆ ರಸ್ತೆ 500 ಮೀ., ಶೇಡಿಮನೆ ಗ್ರಾಮದ ಚಕ್ಕಾರ್‌ಮಕ್ಕಿ ಮುಖ್ಯ ರಸ್ತೆ 700 ಮೀ., ಸಂಸೆ ಬೂರದಜೆಡ್ಡು ರಸ್ತೆ 500 ಮೀ., ಗೋಳಿಗದ್ದೆ ರಸ್ತೆ 500 ಮೀ.ವರೆಗೆ ಮಳೆಯಿಂದಾಗಿ ಹಾಳಾಗಿದ್ದು, ನೂರಾರು ಕುಟುಂಬಗಳಿಗೆ
ತೊಂದರೆಯಾಗುತ್ತಿರುವ ಬಗ್ಗೆ ಮನವಿ ಸಲ್ಲಿಸಲಾಗಿತ್ತು. ಅದರಂತೆ ಮಾರ್ಗದರ್ಶನದಲ್ಲಿ ರಸ್ತೆಗೆ ಜಲ್ಲಿಕಲ್ಲುಗಳನ್ನು ಹಾಕಿ, ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವ ಕಾರ್ಯವನ್ನು ಮಾಡಲಾಗಿದೆ.

ಸುದಿನ ವರದಿ
ಹಂಜಾ- ಕಾರಿಮನೆ- ಎಡ್ಮಲೆ ಸಂಪರ್ಕಿಸುವ ಈ ರಸ್ತೆ ಅವ್ಯವಸ್ಥೆ ಕುರಿತು, ಜನ ಸಂಕಷ್ಟಪಡುತ್ತಿರುವ ಬಗ್ಗೆ “ಉದಯವಾಣಿ ಸುದಿನ’ವು ಕಳೆದ ಜೂ. 16 ರಂದು ವಿಶೇಷ ವರದಿ ಪ್ರಕಟಿಸಿತ್ತು. ಇದಲ್ಲದೆ ಬಸ್ಸಿನ ಅಭಿಯಾನದಲ್ಲೂ ಇಲ್ಲಿನ ಮಕ್ಕಳು ಹದಗೆಟ್ಟ ರಸ್ತೆಯಿಂದ ಪಡುತ್ತಿರುವ ಸಂಕಷ್ಟದ ಕುರಿತು ಗಮನಸೆಳೆಯಲಾಗಿತ್ತು.

ಕಾಮಗಾರಿಗೆ ಸೂಚನೆ
ಮಡಾಮಕ್ಕಿ ಗ್ರಾ.ಪಂ.ನ ಹಂಜ ರಸ್ತೆ ತುರ್ತು ದುರಸ್ತಿಗೆ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿಯವರಿಗೆ ಮನವಿ ಸಲ್ಲಿಸಿದ್ದು, ಅವರು ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಸಿಇಒ ಅವರಲ್ಲಿ ಮಾತನಾಡಿ, ತುರ್ತು ಕಾಮಗಾರಿಗೆ ಸೂಚಿಸಿದ್ದಾರೆ. ಅದರಂತೆ ಕಾಮಗಾರಿ ಆರಂಭಿಸಲಾಗಿದೆ.

Advertisement

– ಕಾನ್ಮಕ್ಕಿ ಹರಿಪ್ರಸಾದ್‌ ಶೆಟ್ಟಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next