Advertisement
ಈ ರಸ್ತೆಯು ಮಳೆಯಿಂದಾಗಿ ಡಾಮರು ಎದ್ದುಹೋಗಿದೆ. ಈ ರಸ್ತೆಯ ಮೂಲಕ ನಿತ್ಯ ಹಲವು ವಾಹನಗಳು ಸಂಚರಿಸುತ್ತಿದ್ದು, ರಸ್ತೆ ಹಾಳಾಗಿರುವುದ ರಿಂದ ಎಲ್ಲರಿಗೂ ಸಂಕಷ್ಟ ಎದುರಾಗಿದೆ. ದ್ವಿಚಕ್ರ ವಾಹನ ಸವಾರರಂತೂ ಎದ್ದು ಬಿದ್ದು ಹೋಗಬೇಕಾದ ಪರಿಸ್ಥಿತಿ. ಪಾಲ್ತಾಡಿ ಭಾಗದ ಜನರಿಗೆ ಕಡಬ ಸಂಪರ್ಕಿಸಲು ಈ ರಸ್ತೆಯ ಮೂಲಕ ಸಾಗಿ ಸವಣೂರು ಮೂಲಕ ಹೋಗಬೇಕಿದೆ. ಅಲ್ಲದೆ ಪ್ರಮುಖ ಪೇಟೆಯಾಗಿರುವ ಸವಣೂರು, ಬೆಳ್ಳಾರೆ, ಪುತ್ತೂರಿಗೆ ಹೋಗಲು ಇದೇ ರಸ್ತೆಯ ಮೂಲಕವೇ ಹೋಗಬೇಕಿದೆ.
ಈ ರಸ್ತೆಯ ಎರಡೂ ಬದಿಗಳಲ್ಲಿಯೂ ಆವರಿಸಿದ್ದ ಪೊದೆಗಳನ್ನು ಚೆನ್ನಾವರದ ಎಸ್ಸೆಸ್ಸೆಫ್ ಸಂಘಟನೆಯ ಸದಸ್ಯರು 3 ದಿನ ಗಳ ಕಾಲ ಶ್ರಮದಾನದ ನಡೆಸಿ ತೆರವು ಮಾಡಿದ್ದಾರೆ. ಚರಂಡಿ ದುರಸ್ತಿಯನ್ನು ಸವಣೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಬಿ.ಕೆ. ಅವರ ನೇತೃತ್ವದಲ್ಲಿ ಗ್ರಾ.ಪಂ. ವತಿ ಯಿಂದ ಮಾಡಲಾಗಿದೆ. ಆದರೆ ಇನ್ನೂ ರಸ್ತೆ ದುರಸ್ತಿ ನಡೆಸಿಲ್ಲ.
Related Articles
ತಾರಿಪಡ್ಪು-ಚೆನ್ನಾವರ ರಸ್ತೆ ಅವ್ಯವಸ್ಥೆಯ ಕುರಿತು ಸ್ಥಳೀಯ ಸಂಘ-ಸಂಸ್ಥೆಗಳಿಂದ ಮನವಿ ಬಂದಿದ್ದು, ದುರಸ್ತಿಗೆ ಹೆಚ್ಚಿನ ಅನುದಾನದ ಬೇಕಾಗಿರುವುದರಿಂದ ಮೇಲಧಿಕಾರಿ ಗಳಿಗೆ ಪತ್ರ ಬರೆಯಲಾಗಿದೆ. ಗ್ರಾಮ ಪಂಚಾಯತ್‌ವತಿಯಿಂದ ಚರಂಡಿ ದುರಸ್ತಿ ಮಾಡಲಾಗಿದೆ.
– ನಾರಾಯಣ ಬಿ.
ಪಿಡಿಒ, ಸವಣೂರು ಗ್ರಾ.ಪಂ.
Advertisement