Advertisement

ರಾಜ್ಯದಲ್ಲಿ ದಳ ಬಲ ಕುಸಿದಿದೆ: ಕಾಂಗ್ರೆಸ್‌ ನೆಲಕಚ್ಚಿದೆ; ಗುರ್ಜಾಲ್‌

06:18 PM Jul 08, 2022 | Team Udayavani |

ಹಾಸನ: ಹರಿಯಾಣದಲ್ಲಿ ದೇವಿಲಾಲ್‌ ನಂತರ ಅವರ ಕುಟುಂಬದವರು ಜನರ ವಿಶ್ವಾಸ ಕಳೆದುಕೊಂಡರು. ಕರ್ನಾಟಕದಲ್ಲಿಯೂ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಕುಟುಂಬದವರೂ ದೇವಿಲಾಲ್‌ ಕುಟುಂಬದವರ ಹಾದಿಯಲ್ಲಿ ಸಾಗುತ್ತಿದ್ದಾರೆ ಎಂದು ಕೇಂದ್ರದ ಇಂಧನ ಮತ್ತು ಬೃಹತ್‌ ಕೈಗಾರಿಕೆ ಖಾತೆ ರಾಜ್ಯ ಸಚಿವ ಕ್ರಿಶನ್‌ ಪಾಲ್‌ ಗುರ್ಜಾಲ್‌ ಅವರು ಅಭಿಪ್ರಾಯಪಟ್ಟರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ದೇವೇಗೌಡರ ಬಗ್ಗೆ ಮಾತನಾಡುವುದಾದರೆ ಹರಿಯಾಣದ ದೇವಿಲಾಲ್‌ ಪರಿವಾರವನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ದೇವಿಲಾಲ್‌ ಅವರು ಅಧಿಕಾರದಲ್ಲಿದ್ದಾಗ ಅವರ ಬಗ್ಗೆ ಜನರಲ್ಲಿ ವಿಶ್ವಾಸವಿತ್ತು. ಅವರ ಮುಂದಿನ ಪೀಳಿಗೆ ಜನರ ವಿಶ್ವಾಸವನ್ನು ಕಳೆದುಕೊಂಡರು. ದೇವೇಗೌಡರ ವಿಷಯ  ದಲ್ಲಿಯೂ ಅದೇ ಆಗುತ್ತಿದೆ. ದೇವೇಗೌಡರ ಬಗ್ಗೆ ಜನರಿಗೆ ವಿಶ್ವಾಸವಿದೆ. ಆದರೆ ಅವರಿಗೆ ವಯಸ್ಸಾಗಿದ್ದು, ಸಕ್ರಿಯ ರಾಜಕಾರಣಕ್ಕೆ ಅವರ ಆರೋಗ್ಯ ಸಹಕರಿಸುತ್ತಿಲ್ಲ. ಹರಿಯಾಣದಲ್ಲಿ ದೇವಿಲಾಲ್‌ ನಂತರದ ಪೀಳಿಗೆ ಹೇಗೆ ದೇವಿಲಾಲ್‌ ಹೆಸರು ಹಾಳುಮಾಡಿದರೋ ಹಾಗೇ ದೇವೇಗೌಡರ ಮುಂದಿನ ಪೀಳಿಗೆಯೂ ಸಾಗುತ್ತಿದೆ ಎಂದರು.

ಜೆಡಿಎಸ್‌ ಬಲ ಕುಸಿದಿದೆ: ರಾಜ್ಯದಲ್ಲಿ ಜೆಡಿಎಸ್‌ ಬಲ ಕುಸಿದಿದೆ. ಕಾಂಗ್ರೆಸ್‌ ಸ್ಥಿತಿಯಂತೂ ಶೋಚನೀಯವಾಗಿದೆ. ಆ ಪಕ್ಷ ದ ದೇಶದಲ್ಲಿ ಕೇವಲ ಎರಡೇ ರಾಜ್ಯದಲ್ಲಿ ಅಧಿಕಾರ ದಲ್ಲಿದೆ. ಮುಂದಿನ ಚುನಾವಣೆ ನಂತರ ಆ ರಾಜ್ಯ ಗಳಲ್ಲೂ ಅಧಿಕಾರ ಕಳೆದುಕೊಳ್ಳಲಿದೆ. ಕರ್ನಾಟಕದಲ್ಲಿ ಜನರ ಒಲವು ಬಿಜೆಪಿಯತ್ತ ಇದೆ. ಕಾಂಗ್ರೆಸ್‌ ಮತ್ತು ಜೆಡಿಸ್‌ನಲ್ಲಿ ಮೋದಿ ಅವರಂಥ ನಾಯಕತ್ವವೇ ಇಲ್ಲ. ಬಿಜೆಪಿ ಮತ್ತೂಮ್ಮೆ ಅಧಿಕಾರಕ್ಕೆ ಬರಬೇ ಕೆಂಬ ಬಯಕೆ ಕರ್ನಾಟಕದ ಜನರು ಬಯಸುತ್ತಿದ್ದಾರೆ ಎಂದು ಹೇಳಿದರು.

ಮೋದಿ ಜಾಗತಿಕ ನಾಯಕರಾಗಿದ್ದಾರೆ: ಮೋದಿ  ಯವರು ಪ್ರಧಾನಿಯಾದ ನಂತರ ದೇಶದ ಗಡಿ ಮತ್ತು ದೇಶದ ಖಜಾನೆ ಸುರಕ್ಷಿತವಾಗಿದೆ. ಮೋದಿಯವರು ಪ್ರಧಾನಿಯಾಗುವ ಮೊದಲು ಸೇನೆಯಲ್ಲಿ ಯುದ್ದೋಪಕರಣಗಳು ಒಂದು ವಾರಕ್ಕೆ ಸಾಕಾಗುವಷ್ಟಿದ್ದವರು. ಮೋದಿಯವರ ಆಗಮನದ ನಂತರ ತಿಂಗಳುಗಟ್ಟಲೆ ಯುದ್ದೋಪಕರಣ ಗಳನ್ನು ಸೇನೆಯು ಹೊಂದಿದೆ.ಯುದ್ಧ ಸಾಮಗ್ರಿಗಳನ್ನು ದೇಶದಲ್ಲಿಯೇ ಉತ್ಪಾದನೆಗೆ ಮೋದಿ ಅವರು ಆದ್ಯತೆ ನೀಡಿದ್ದಾರೆ. ರಷ್ಯಾ-ಉಕ್ರೇನ್‌ ಯುದ್ಧದ ಸಂದರ್ಭದಲ್ಲಿ ಭಯ ದೇಶಗಳ ನಾಯಕರೊಂದಿಗೂ ಮೋದಿ ಅವರು ಸಂಪರ್ಕ ಸಾಧಿಸಿ ಉಕ್ರೇನ್‌ ನಲ್ಲಿದ್ದ ಸಾವಿರಾರು ಭಾರತೀಯರನ್ನು ಭಾರ ತಕ್ಕೆ ಸುರಕ್ಷಿ ತವಾಗಿ ಕರೆಸಿಕೊಂಡರು. ಪಾಕಿಸ್ತಾನದವೂ ಭಾರದ ಧ್ವಜ ಹಿಡಿದು ಯುದ್ಧಪೀಡಿತ ದೇಶದಿಂದ ಹೊರ ಬಂದರು.ಮೋದಿಯವರಿಂದ ದೇಶದ ಗೌರವ ಹೆಚ್ಚಿದ್ದು, ಅವರು ಈಗ ಜಾಗತಿಕ ನಾಯಕರಾಗಿದ್ದಾರೆ ಎಂದರು.

ಸುಂಕ ಇಳಿಸಿ ತೈಲ ದರ ಇಳಿಸಿದೆ: ಅಡುಗೆ ಅನಿಲದ ದರ ಸೇರಿದಂತೆ ಅಗತ್ಯ ವಸ್ತುಗಳ ದರ ಏರಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು ಕೊರೊನಾ ಮತ್ತು ಉಕ್ರೇನ್‌-ರಷ್ಯಾ ಯುದ್ಧದ ಕಾರಣ ಎಲ್ಲ ರಾಷ್ಟ್ರಗಳಲ್ಲೂ ಹಣದುಬ್ಬರದ ಸಮಸ್ಯೆಯಿದೆ. ಹಾಗಾಗಿ ಅಗತ್ಯ ವಸ್ತು ಗಳ ಬೆಲೆಗಳು ಏರುತ್ತಿವೆ. ಎಲ್‌ಪಿಜಿ, ಪೆಟ್ರೋಲ್‌ ದರ ಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ದರವನ್ನು ಅವಲಂ ಬಿಸಿವೆ. ಆದಾಗ್ಯೂ ಕೇಂದ್ರ ಸರ್ಕಾರ ಸುಂಕವನ್ನು ಇಳಿಕೆ ಮಾಡುವ ಮೂಲಕ
ಪೆಟ್ರೋಲ್‌, ಡೀಸೆಲ್‌ ದರವನ್ನು ನಿಯಂತ್ರಿಸಿದೆ ಎಂದು ತಿಳಿಸಿದರು. ವಿದೇಶಿ ಬ್ಯಾಂಕು ಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣದ ಬಗ್ಗೆ ತನಿಖೆ ನಡೆಯುತ್ತಿದೆ. ಈ ವಿಷಯದಲ್ಲಿ ವಿಪಕ್ಷಗಳು ಗೊಂದಲ ಸೃಷ್ಟಿಸಿದರೂ ದೇಶದ ಜನರು ಮೋದಿಯವರ ನಾಯಕತ್ವವನ್ನು ಬೆಂಬಲಿಸುತ್ತಲೇ ಬಂದಿರುವುದನ್ನು ಗಮನಿಸಬೇಕು ಎಂದರು.

Advertisement

ಕುಟುಂಬ ರಾಜಕಾರಣದ ಬಗ್ಗೆ ಅಸಹನೆಯಿದೆ
ದೇಶದಲ್ಲಿ ನರೇಂದ್ರಮೋದಿ ಅವರು ಪ್ರಧಾನಿಯಾಗುವವರೆಗೂ ಜನರಲ್ಲಿ ದೇಶದ ಭವಿಷ್ಯದ ಬಗ್ಗೆ ನಿರಾಶವಾದವಿತ್ತು. ಮೋದಿ ಅವರು 2014ರಲ್ಲಿ ಪ್ರಧಾನಿಯಾದ ನಂತರ ಜನರ ನಿರಾಶೆ ಭರವಸೆಯಾಗಿ ಬದಲಾಯಿತು. ಮೋದಿಯವರಿಂದ ದೇಶದ ಬದಲಾವಣೆ ಸಾಧ್ಯ ಎಂಬ ವಿಶ್ವಾಸದಲ್ಲಿ ಬಿಜೆಪಿಗೆ 2019ರ ಚುನಾವಣೆಯಲ್ಲಿ ಸಂಪೂರ್ಣ ಬಹುಮತಕೊಟ್ಟರು. ಮೋದಿಯವರ ಆಗಮನದಿಂದ ದೇಶದಲ್ಲಿ ಜಾತಿ, ಕುಟುಂಬ ಆಧಾರಿತ ಸರ್ಕಾರ ರಚನೆಯಾಗುವುದಿಲ್ಲ ಎನ್ನುವುದು ಎಲ್ಲ ರಾಜ್ಯಗಳಲ್ಲೂ ಸಾಬೀತಾಗುತ್ತಾ ಬಂದಿದೆ. ಜನರಿಗೆ ಕುಟುಂಬ ರಾಜಕಾರಣ ಬಗ್ಗೆ ಅಸಹನೆ ಮೂಡಿದೆ. ಅವರಿಗೆ ಕೆಲಸ ಮಾಡುವ ಸರ್ಕಾರ ಬೇಕಾಗಿದೆ. ಹಾಗಾಗಿ ಬಿಜೆಪಿಯನ್ನು ಜನರು ಬೆಂಬಲಿಸುತ್ತಾರೆ. ಹಾಸನದಲ್ಲಿಯೂ ಬಿಜೆಪಿ ಪರವಾದ ವಾತಾವರಣವಿದೆ ಎಂದು ಹೇಳಿದರು.

ಹಾಸನ ಜಿಲ್ಲೆಯ 3 ದಿನಗಳ ಪ್ರವಾಸ ಯಶಸ್ವಿ
ಬಿಜೆಪಿ ರಾಷ್ಟ್ರೀಯ ಸಮಿತಿ ಕೈಗೊಂಡ ತೀರ್ಮಾನದಂತೆ ಕೇಂದ್ರ ಸಚಿವರು ಜಿಲ್ಲೆಗಳಲ್ಲಿ ಪ್ರವಾಸ ಹಮ್ಮಿಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರವಾಸ ನಿಗದಿಯಾಗಿದೆ. ಹಾಸನ ಜಿಲ್ಲೆಯಲ್ಲಿ ಕಳೆದ ಮೂರು ದಿನ ನಾನು ನಡೆಸಿದ ಪ್ರವಾಸ ಯಶಸ್ವಿಯಾಗಿದ್ದು, ಪ್ರವಾಸದ ಬಗ್ಗೆ ನನಗೆ ತೃಪ್ತಿಯಿದೆ. ಬುಧವಾರ ಹಾಸನ-ಸಕಲೇಶಪುರ ನಡುವಿನ ರಾಷ್ಟ್ರೀಯ ಹೆದ್ದಾರಿ – 75ರ ಕಾಮಗಾರಿಯನ್ನು ವೀಕ್ಷಿಸಿ ಅಲ್ಲಿನ ಸಮಸ್ಯೆ ಮನವರಿಕೆ ಮಾಡಿಕೊಂಡಿದ್ದೇನೆ. 2014ರಲ್ಲಿ ರಸ್ತೆ ನಿರ್ಮಾಣದ ಗುತ್ತಿಗೆ ಪಡೆದ ಗುತ್ತಿಗೆದಾರ ದಿವಾಳಿಯಾಗಿದ್ದರಿಂದ ಕಾಮಗಾರಿಯನ್ನು ಬೇರೆ ಗುತ್ತಿಗೆದಾರಗೆ ವಹಿಸಲಾಗಿದೆ. ಮುಂದಿ ನ ಮಾರ್ಚ್‌ನೊಳಗೆ ಹಾಸನ-ಸಕಲೇಶಪುರ ರಸ್ತೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸಚಿವರು ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next