Advertisement
ಇಲ್ಲಿನ ಕಿಂಗ್ಸ್ ಮೇಡ್ ಅಂಗಳದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ವೇಳೆ ಸ್ಟೈನ್ ಈ ದಾಖಲೆ ಬರೆದಿದ್ದಾರೆ. ಮೊದಲ ದಿನದ ಪಂದ್ಯದಲ್ಲಿ ಲಹಿರು ತಿರಮನ್ನೆ ವಿಕೆಟ್ ಪಡೆದ ವೇಳೆ ಕಪಿಲ್ ರ 434 ವಿಕೆಟ್ ದಾಖಲೆ ಸರಿಗಟ್ಟಿದ್ದರು. ಗುರುವಾರ ಒಶಾಡ ಫರ್ನಾಂಡೋ ವಿಕೆಟ್ ಪಡೆದ ಸ್ಟೈನ್ 435ನೇ ವಿಕೆಟ್ ನೊಂದಿಗೆ ದಾಖಲೆ ಬರೆದರು.
ಸ್ಟೈನ್ ಸದ್ಯ ಅತೀ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದ್ದಾರೆ. ಭರ್ತಿ 800 ವಿಕೆಟ್ ಗಳಿಂದ ಮುತ್ತಯ್ಯ ಮುರಳೀಧರನ್ ಮೊದಲ ಸ್ಥಾನದಲ್ಲಿದ್ದರೆ, ಆಸೀಸ್ ಸ್ಪಿನ್ ದಂತಕಥೆ ಶೇನ್ ವಾರ್ನ್ (708) ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿರುವುದು ಭಾರತದ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ( 619). ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ (575), ಕಾಂಗರೂ ನಾಡಿನ ಗ್ಲೆನ್ ಮೆಕ್ ಗ್ರಾಥ್ (563) ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ. ಕೊಟ್ನಿ ವಾಲ್ಶ್ 519 ವಿಕೆಟ್ ನೊಂದಿಗೆ ಆರನೇ ಸ್ಥಾನದಲ್ಲಿದ್ದಾರೆ.
92 ಟೆಸ್ಟ್ ಪಂದ್ಯಗಳನ್ನಾಡಿರುವ ಡೇಲ್ ಸ್ಟೈನ್ 168 ಇನ್ನಿಂಗ್ಸ್ ಗಳಿಂದ 435 ವಿಕೆಟ್ ಪಡೆದಿದ್ದಾರೆ. ಭಾರತದ ಮಾಜಿ ನಾಯಕ ಕಪಿಲ್ ದೇವ್ 434 ವಿಕೆಟ್ ಗಳನ್ನು ಪಡೆಯಲು 121 ಪಂದ್ಯಗಳನ್ನಾಡಿದ್ದರು.