ಮುಂಬಯಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ (ಫೆ.02)2022-23ನೇ ಸಾಲಿನ ಬಜೆಟ್ ಮಂಡಿಸಿದ್ದು, ಮುಂಬಯಿ ಷೇರುಪೇಟೆಯ ಸೆನ್ಸೆಕ್ಸ್ 800ಕ್ಕೂ ಅಧಿಕ ಅಂಕಗಳ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ.
ಇದನ್ನೂ ಓದಿ:ನಿಷ್ಠೆ ಸಾಬೀತುಪಡಿಸಲು ಪತಿ ಸವಾಲು…10 ವರ್ಷದ ಮಗಳನ್ನು ಬೆಂಕಿ ಹಚ್ಚಿಕೊಂದ ಪತ್ನಿ!
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಮಕ 848.40 ಅಂಕ ಏರಿಕೆಯಾಗಿದ್ದು, 58,852.57 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 237.00 ಅಂಕಗಳಷ್ಟು ಏರಿಕೆಯಾಗಿದ್ದು, 17,567.80 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಂಡಿದೆ.
ಟಾಟಾ ಸ್ಟೀಲ್, ಸನ್ ಫಾರ್ಮಾ, ಇಂಡಸ್ ಇಂಡ್ ಬ್ಯಾಂಕ್, ಶ್ರೀ ಸಿಮೆಂಟ್ಸ್, ಹಿಂಡಲ್ಕೋ ಇಂಡಸ್ಟ್ರೀಸ್, ಐಟಿಸಿ ಲಿಮಿಟೆಡ್, ಅದಾನಿ ಪೋರ್ಟ್ಸ್, ಐಸಿಐಸಿಐ ಬ್ಯಾಂಕ್, ಕೋಲ್ ಇಂಡಿಯಾ ಲಿಮಿಟೆಡ್, ಇನ್ಫೋಸಿಸ್ ಲಿಮಿಟೆಡ್, ಕೋಟಕ್ ಮಹೀಂದ್ರ, ಎಚ್ ಯುಎಲ್, ಏಷ್ಯನ್ ಪೇಂಟ್ಸ್, ವಿಪ್ರೋ ಲಿಮಿಟೆಡ್, ಸಿಪ್ಲಾ ಲಿಮಿಟೆಡ್, ಲೂಪಿನ್ ಲಿಮಿಟೆಡ್ ಷೇರುಗಳು ಲಾಭಗಳಿಸಿದೆ.
ಮತ್ತೊಂದೆಡೆ ಬಿಪಿಸಿಎಲ್, ಐಒಸಿ, ಟಾಟಾ ಮೋಟಾರ್ಸ್, ಮಹೀಂದ್ರ ಆ್ಯಂಡ್ ಮಹೀಂದ್ರ ಮತ್ತು ಎಸ್ ಬಿಐ ಲೈಫ್ ಇನ್ಸೂರೆನ್ಸ್ ಷೇರುಗಳು ನಷ್ಟ ಕಂಡಿದೆ.
ಲಾಭಗಳಿಸಿದ ನಿಫ್ಟಿ 50 ಷೇರುಗಳು: ಟಾಟಾ ಸ್ಟೀಲ್ ಲಿಮಿಟೆಡ್, ಸನ್ ಫಾರ್ಮಾಸ್ಯುಟಿಕಲ್, ಇಂಡಸ್ ಇಂಡ್ ಬ್ಯಾಂಕ್, ವೇದಾಂತ್ ಲಿಮಿಟೆಡ್, ಹಿಂಡಲ್ಕೋ ಇಂಡಸ್ಟ್ರೀಸ್, ಎಲ್ ಆ್ಯಂಡ್ ಟಿ, ಆಲ್ಟ್ರಾಟೆಕ್ ಸಿಮೆಂಟ್, ಐಟಿಸಿ ಲಿಮಿಟೆಡ್, ಅದಾನಿ ಪೋರ್ಟ್ಸ್, ಎಚ್ ಸಿಎಲ್ ಟೆಕ್ನಾಲಜೀಸ್ ಲಿಮಿಟೆಡ್ ಲಾಭಗಳಿಸಿದೆ.