Advertisement

18 ಗ್ರಾ.ಪಂ. 1 ವಾರ ಸೀಲ್‌ಡೌನ್‌ : ದ.ಕ. ಗ್ರಾಮೀಣ ಭಾಗದ ಸೋಂಕು ಇಳಿಕೆಗೆ ಜಿಲ್ಲಾಡಳಿತ ಕ್ರಮ

01:57 AM Jun 14, 2021 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಂತರದಲ್ಲಿ ಕೊರೊನಾ ಹೆಚ್ಚಿದ್ದು, ಸೋಂಕು ಸರಪಳಿ ತುಂಡರಿಸುವುದಕ್ಕಾಗಿ 50ಕ್ಕಿಂತ ಹೆಚ್ಚು ಪ್ರಕರಣಗಳಿರುವ 18 ಗ್ರಾ.ಪಂ.ಗಳನ್ನು ಜೂ. 14ರಿಂದ 21ರ ತನಕ ಒಂದು ವಾರ ಸಂಪೂರ್ಣ ಸೀಲ್‌ಡೌನ್‌ ಮಾಡಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

Advertisement

ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಡಳಿತ ಇದೇ ರೀತಿ ಗ್ರಾ.ಪಂ. ಲಾಕ್‌ಡೌನ್‌ ನಿಯಮ ಜಾರಿಗೆ ತಂದಿದ್ದು, ಸೋಂಕು ಪ್ರಕರಣ ಇಳಿಸುವಲ್ಲಿ ಯಶಸ್ವಿಯಾಗಿದೆ. ಮಂಗಳೂರು ಮತ್ತು ಕಡಬ ತಾಲೂಕುಗಳ ತಲಾ 2, ಬೆಳ್ತಂಗಡಿ ತಾಲೂಕಿನ 8, ಸುಳ್ಯ ತಾಲೂಕಿನ 5 ಮತ್ತು ಬಂಟ್ವಾಳ ತಾಲೂಕಿನ 1 ಗ್ರಾ.ಪಂ. ಸೀಲ್‌ಡೌನ್‌ ಆಗಲಿವೆ.

ಎಲ್ಲೆಲ್ಲಿ ಸೀಲ್‌ಡೌನ್‌?
ಮಂಗಳೂರು ತಾಲೂಕಿನ ನೀರುಮಾರ್ಗ ಮತ್ತು ಕೊಣಾಜೆ, ಬೆಳ್ತಂಗಡಿ ತಾಲೂಕಿನ ನಾರಾವಿ, ಕೊಯ್ಯೂರು, ಮಿತ್ತಬಾಗಿಲು, ಮಾಲಾಡಿ, ನೆರಿಯ, ಲಾೖಲ, ಉಜಿರೆ, ಚಾರ್ಮಾಡಿ, ಸುಳ್ಯ ತಾಲೂಕಿನ ಐವರ್ನಾಡು, ಅಮರ ಮುಟ್ನೂರು, ಕೊಲ್ಲ ಮೊಗರು, ಗುತ್ತಿಗಾರು, ಅರಂತೋಡು ಮತ್ತು ಕಡಬ ತಾಲೂಕಿನ ಸುಬ್ರಹ್ಮಣ್ಯ ಮತ್ತು ಸವಣೂರು, ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ.

Advertisement

Udayavani is now on Telegram. Click here to join our channel and stay updated with the latest news.

Next