Advertisement

ಮುಂಗಾರು ಬೆಳೆ ಸಮೀಕ್ಷೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 100 ಸಾಧನೆ

10:07 PM Oct 27, 2020 | mahesh |

ಮಹಾನಗರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಬೆಳೆ ಸಮೀಕ್ಷೆಯಲ್ಲಿ ಒಟ್ಟು 9,09,656 ಕೃಷಿ ಜಮೀನುಗಳ ಸಮೀಕ್ಷೆ ಮಾಡಲಾಗಿದ್ದು, ಆ ಮೂಲಕ ಶೇ.100ರಷ್ಟು ಗುರಿ ದಾಖಲಿಸಲಾಗಿದೆ.

Advertisement

ಕೃಷಿ ಇಲಾಖೆಯ ಅಂಕಿ-ಅಂಶದಂತೆ ಜಿಲ್ಲೆಯಲ್ಲಿ ಒಟ್ಟು 10,72,869 ಕೃಷಿ ಜಮೀನುಗಳಿದ್ದು, ಅವು ಗಳ‌ಲ್ಲಿ ಸುಮಾರು 1,69,285 ಕೃಷಿ ಮಾಡದ ಜಮೀನು (ಎನ್‌ಎ ಮಾರ್ಕ್‌ಡ್‌ ಫ್ಲೋಟ್‌ಗಳು) ಎಂದು ವಿಂಗಡಿಸಿ ಉಳಿದಂತೆ ಒಟ್ಟು 9,03,574 ಜಮೀನು ಗಳಲ್ಲಿ ಕೃಷಿ ಸಮೀಕ್ಷೆ ನಡೆಸಲಾಗಿತ್ತು. ಆದರೆ ಅನಂತರ ಕೃಷಿ ಮಾಡದ ಜಮೀನು ಪಟ್ಟಿಯಲ್ಲಿದ್ದ ಕೆಲವು ಜಮೀನುಗಳಲ್ಲೂ ಕೃಷಿ ಚಟುವಟಿಕೆ ಮಾಡಿ ರುವ ಹಿನ್ನಲೆಯಲ್ಲಿ ಸಮೀಕ್ಷೆ ಸಂದರ್ಭದಲ್ಲಿ ಇವು ಗಳನ್ನು ಕೂಡ ಪರಿಗಣಿಸಲಾಗಿದ್ದು, ಒಟ್ಟು ಜಮೀನು ಸಂಖ್ಯೆಯಲ್ಲಿ ಹೆಚ್ಚಳವಾಗಿ 9,09,656ಕ್ಕೆ ಏರಿದೆ.

2020-21ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಆಗಸ್ಟ್‌ 10ರಂದು ಆರಂಭಗೊಂಡಿದ್ದು, ಬೆಳೆಗಳ ವಿವರವನ್ನು ಅಪ್‌ಲೋಡ್‌ ಮಾಡಲು ಅಕ್ಟೋಬರ್‌ 15ರ ವರೆಗೆ ಅವಧಿ ನೀಡಲಾಗಿತ್ತು.

ರೈತರ ಜಮೀನಿನಲ್ಲಿರುವ ಬೆಳೆ ಮಾಹಿತಿಯನ್ನು ಛಾಯಾಚಿತ್ರ ಸಹಿತ ದಾಖಲಿಸಿ ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಬೇಕಾಗಿತ್ತು. ಇದರಂತೆ 2,32,768 ಜಮೀನುಗಳ ಬೆಳೆ ವಿವರಗಳನ್ನು ಸ್ವತಃ ರೈತರೇ ಅಪ್‌ಲೋಡ್‌ ಮಾಡಿದ್ದರು. ಉಳಿದಂತೆ ಬೆಳೆ ಸಮೀಕ್ಷೆಗೆ ನಿಯೋಜಿಸಲ್ಪಟ್ಟ 876 ಮಂದಿಯ ಮೂಲಕ 6,76,889 ಜಮೀನುಗಳ ಬೆಳೆ ವಿವರವನ್ನು ಅಪ್‌ಲೋಡ್‌ ಮಾಡಲಾಗಿದೆ. ಈ ಬೆಳೆ ಮಾಹಿತಿ ಆಧಾರದ ಮೇಲೆ ಕನಿಷ್ಠ ಬೆಂಬಲ ನಿಗದಿ, ಬೆಳೆ ಪರಿಹಾರ, ಬೆಳೆ ವಿಮಾ ಯೋಜನೆ, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಅಡಿಯಲ್ಲಿ ಸಹಾಯಧನ, ಪ್ರಾಕೃತಿಕ ಫಲಾನುಭವಿಗಳನ್ನು ಗುರುತಿಸುವುದು, ಆರ್‌ಟಿಸಿಯಲ್ಲಿ ಬೆಳೆ ವಿವರ ಇತ್ಯಾದಿ ದಾಖಲಾತಿಗಳನ್ನು ಈ ಸಮೀಕ್ಷಾ ವರದಿ ಆಧರಿಸಿ ನಡೆಸಲಾಗುತ್ತದೆ.

ಬೆಳೆ ದರ್ಶಕ ಆ್ಯಪ್‌ನಲ್ಲಿ ವೀಕ್ಷಿಸಬಹುದು
ರೈತರು ತಮ್ಮ ಜಮೀನಿನಲ್ಲಿ ಬೆಳೆ ಸಮೀಕ್ಷೆ ಪ್ರಕಾರ, ದಾಖಲಾಗಿರುವ ಬೆಳೆ ವಿವರಗಳು,ವಿಸ್ತೀರ್ಣದ ಮಾಹಿತಿಯನ್ನು ಬೆಳೆ ದರ್ಶಕ ಮೊಬೈಲ್‌ ಆ್ಯಪ್‌ ಮೂಲಕ ಪಡೆಯಬಹುದು. ತಮ್ಮ ಜಮೀನಿನ ಜಿಪಿಎಸ್‌ ಆಧಾರಿತ ಛಾಯಾಚಿತ್ರವನ್ನು ವೀಕ್ಷಿಸ ಬಹುದು. ಪ್ಲೇ ಸ್ಟೋರ್‌ಗೆ ಹೋಗಿ ಆ್ಯಪ್‌ನ್ನು ಡೌನ್‌ಲೋಡ್‌ ಮಾಡಿ ಲಾಗಿನ್‌ ಆಗಬೇಕು. ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿ ತಮ್ಮ ಜಮೀನಿನ ಸರ್ವೇ ನಂಬರ್‌ ಹಾಕಬೇಕು. ಆಗ ಜಮೀನಿನ ವಿವರ ಬರುತ್ತದೆ. ಅಲ್ಲಿ ಜಮೀನಿನ ಸರ್ವೇ ಮಾಡಿದವರ ಹೆಸರು ಮತ್ತು ಮೊಬೈಲ್‌ ನಂಬರ್‌ ಇರುತ್ತದೆ. ಅದನ್ನು ಕ್ಲಿಕ್‌ ಮಾಡಿದಾಗ ಸಮೀಕ್ಷೆಯಲ್ಲಿ ನಮೂದಿಸಲ್ಪಟ್ಟಿರುವ ಬೆಳೆ ವಿವರ ಲಭಿಸ್ತುತದೆ. ಒಂದೊಮ್ಮೆ ಬೆಳೆ ವಿವರ ತಪ್ಪಾಗಿ ನಮೂದಿಸಿದ್ದರೆ ಅದಕ್ಕೆ ಆಕ್ಷೇಪಣೆ ಸಲ್ಲಿಸಲು ಆ್ಯಪ್‌ನಲ್ಲಿ ಅವಕಾಶವಿದೆ.

Advertisement

ಯಶಸ್ವಿ ಸಮೀಕ್ಷೆ
ದ.ಕ.ಜಿಲ್ಲೆಯಲ್ಲಿ 2020-21ನೇ ಸಾಲಿನ ಬೆಳೆ ಸಮೀಕ್ಷೆ ಯನ್ನು ಬೆಳೆ ಸಮೀಕ್ಷೆ ಮೊಬೈಲ್‌ ಆ್ಯಪ್‌ ಮೂಲಕ ಯಶಸ್ವಿಯಾಗಿ ಮಾಡಲಾಗಿದ್ದು, ಶೇ.100ರಷ್ಟು ಸಾಧನೆ ಮಾಡಲಾಗಿದೆ. ರೈತರು ಬೆಳೆ ದರ್ಶಕ ಆ್ಯಪ್‌ ಮೂಲಕ ಸಮೀಕ್ಷೆಯಲ್ಲಿ ದಾಖಲಾಗಿರುವ ಬೆಳೆ ವಿವರಗಳ ಮಾಹಿತಿ ಪಡೆಯಬಹುದಾಗಿದೆ. ಒಂದೊಮ್ಮೆ ತಪ್ಪಾಗಿ ನಮೂದಾಗಿದ್ದರೆ ಆ್ಯಪ್‌ ಮೂಲಕ ಮಾಹಿತಿ ನೀಡಿ ಸರಿಪಡಿಸಿಕೊಳ್ಳಲು ಅವಕಾಶವಿದೆ.
-ಡಾ| ಸೀತಾ,  ಕೃಷಿ ಜಂಟಿ ನಿರ್ದೇಶಕರು, ದ.ಕ. ಜಿಲ್ಲೆ

10,72,869ಜಿಲ್ಲೆಯಲ್ಲಿರುವ ಒಟ್ಟು ಕೃಷಿ ಜಮೀನು
1,69,285 ಕೃಷಿ ಮಾಡದ ಜಮೀನು

Advertisement

Udayavani is now on Telegram. Click here to join our channel and stay updated with the latest news.

Next