ಸೋಲಿಸಿತ್ತು. ಆ ಪಂದ್ಯದಲ್ಲಿ 5 ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಏಕ್ತಾ ಬಿಷ್ಟ್ ಎಂಬ
ಸ್ಪಿನ್ನರ್. ಈ ಸಾಧನೆಯ ಮೂಲಕ ದೇಶಾದ್ಯಂತ ಮನೆ ಮಾತಾಗಿರುವ ಬಿಷ್ಟ್ ತಂದೆ ಒಬ್ಬ ಟೀ ವ್ಯಾಪಾರಿ, ಅಷ್ಟು
ಮಾತ್ರವಲ್ಲ ಭಾರತೀಯ ಸೇನೆಯಲ್ಲಿ ಮಾಜಿ ಹವಲ್ದಾರ್. ಅವರು ಟೀ ಮಾರಿ ಮಗಳನ್ನು ವಿಶ್ವದರ್ಜೆಯ ಕ್ರಿಕೆಟ್
ಆಟಗಾರ್ತಿಯನ್ನಾಗಿಸಿದ್ದಾರೆನ್ನುವ ಸತ್ಯ ಗೊತ್ತಿರುವುದು ಕೆಲವರಿಗೆ ಮಾತ್ರ!
Advertisement
ಭಾರತೀಯ ಸೇನೆಯಲ್ಲಿ ಹವಲ್ದಾರ್ ಹುದ್ದೆಯಲ್ಲಿದ್ದ ಏಕ್ತಾ ಬಿಷ್ಟ್ ತಂದೆ ಕುಂದನ್ ಸಿಂಗ್ ಬಿಷ್ಟ್ 1988ರಲ್ಲಿನಿವೃತ್ತರಾಗಿದ್ದಾರೆ. ಆದರೆ ಇವರ ನಿವೃತ್ತಿ ನಂತರ ಬರುತ್ತಿದ್ದ ಮಾಸಾಶನ ಕೇವಲ 1500 ರೂ. ಇದರಿಂದ ಜೀವನ
ನಡೆಸುವುದು ಕಷ್ಟ ಎನ್ನುವುದನ್ನು ಅರಿತ ಕುಂದನ್ ಸಿಂಗ್ ಉತ್ತರಾಖಂಡದಲ್ಲಿ ಟೀ ವ್ಯಾಪಾರ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಮಾಸಾಶನದಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಟೀ ವ್ಯಾಪಾರವನ್ನು ತ್ಯಜಿಸಿದ್ದಾರೆ.
2006ರಲ್ಲಿಯೇ ಉತ್ತರಾಖಂಡ ತಂಡವನ್ನು ಪ್ರತಿನಿಧಿಸಿದ ಏಕ್ತಾ ನಂತರ 2007ರಿಂದ 2010ರವರೆಗೆ ಉತ್ತರ ಪ್ರದೇಶ ತಂಡದಲ್ಲಿ ಆಡಿದ್ದಾರೆ. ಅಲ್ಲಿ ನೀಡಿದ ಉತ್ತಮ ಪ್ರದರ್ಶನದ ಹಿನ್ನೆಲೆಯಲ್ಲಿ 2011ರಲ್ಲಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ದೊರೆತಿದೆ. ಏಕ್ತಾ ರಾಷ್ಟ್ರೀಯ ತಂಡಕ್ಕೆ ಪ್ರವೇಶಿಸಿದ ಮೇಲೆ ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ ಎಂದು ಏಕ್ತಾ ತಂದೆ ಕುಂದನ್ ಸಿಂಗ್ ತಿಳಿಸಿದ್ದಾರೆ. ಮಗಳಿಗೆ ಕ್ರೀಡೆಯ ಬಗ್ಗೆ ವಿಪರೀತ ಆಸಕ್ತಿ ಇತ್ತು. ಚಿಕ್ಕವಳಿರುವಾಗಲೇ ಕುಟುಂಬದ ಹುಡುಗರ ಜತೆ ಕ್ರಿಕೆಟ್ ಆಡುತ್ತಿದ್ದಳು. ಇಂದು ಮಗಳ ಸಾಧನೆ ನೋಡಿ ಬಹಳ ಸಂತಸವಾಗಿದೆ.
ಕುಂದನ್ ಸಿಂಗ್ ಬಿಷ್ಟ್, ಏಕ್ತಾ ಬಿಷ್ಟ್ ತಂದೆ