ಬೆಂಗಳೂರು: ಬಿಎಸ್ ಯಡಿಯೂರಪ್ಪ ಅವರ ಆಪ್ತ ಮೇಲಿನ ಐಟಿ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಯಾರನ್ನು ಕಂಟ್ರೋಲ್ ಮಾಡಬೇಕು ಎಂದು ದೆಹಲಿಯವರು ಮಾಡುತ್ತಿದ್ದಾರೆ. ಹೀಗಾಗಿ ಆಂತರಿಕ ರಾಜಕೀಯ ಬೇಕಾದಷ್ಟು ಇದ್ದೇ ಇರುತ್ತದೆ. ಕೆಲ ಮಂತ್ರಿಗಳು ದೆಹಲಿಗೆ ಹೋಗಿ ನಮ್ಮ ಮನೆಗೆ ಬರಬೇಡಿ ಎಂದು ಹೇಳಿದ್ದಾರೆ. ಕೆಲವರ ರಕ್ಷಣೆ ಮಾಡಲಾಗುತ್ತಿದೆ ಎಂದರು.
ನೀರಾವರಿ ಇಲಾಖೆಯಲ್ಲಿ ಒಂದು ವರ್ಷದಿಂದ ಏನಿಲ್ಲಾ ನಡಿಯುತ್ತಿದೆ. ಯಾವ ಹೊಟೆಲ್ ನಲ್ಲಿ ಏನು ನಡಿಯುತ್ತಿತ್ತು ಎಂಬುದು ಗೊತ್ತು, ಬೆಂಕಿ ಇಲ್ಲದ ಹೊಗೆ ಆಡುವುದಿಲ್ಲ ಎಂದು ಡಿ ಕೆ ಶಿವಕುಮಾರ್ ಹೇಳಿದರು.
ನಾನು ಕೂಡ ನೀರಾವರಿ ಸಚಿವನಾಗಿದ್ದವನು. ಐಟಿ ದಾಳಿ ನಡೆದಿದೆ. ಅದರೆ ಅಧಿಕಾರಿಗಳು, ಸಂಬಂಧ ಪಟ್ಟವರು ಅಧಿಕೃತವಾಗಿ ಹೇಳಿಕೆ ನೀಡುವವರೆಗೂ ನಾನು ಏನು ಮಾತನಾಡೋದಿಲ್ಲ. ಆದರೆ ಉಮೇಶ್ ಬಿಎಸ್ ವೈ ಆಪ್ತ ಸಹಾಯಕನಂತೂ ಹೌದಲ್ವಾ? ಅದನ್ನ ಅಲ್ಲಗೆಳಯಲು ಅಗುವುದಿಲ್ವಲ್ಲ ಎಂದರು.
ಇದನ್ನೂ ಓದಿ:ಬಿಎಸ್ ವೈ ಆಪ್ತರ ಮೇಲಿನ ಐಟಿ ದಾಳಿಯಲ್ಲಿ ರಾಜಕೀಯ ವಾಸನೆ ಬರುತ್ತಿದೆ: ಸಿದ್ದರಾಮಯ್ಯ
ನೀರಾವರಿ ಇಲಾಖೆಯಲ್ಲಿ ಯಾರು ಯಾರು ಹೋಟೆಲ್ ನಲ್ಲಿ ಕೂತು ಮೀಟಿಂಗ್ ಮಾಡಿದರು, ಟೆಂಡರ್ ಬಗ್ಗೆ ಮಾತನಾಡಿದರು. ಎಲ್ಲಾ ಗೊತ್ತಿದೆ. ಅವರ ಮೇಲೂ ದಾಳಿ ಆಗಬೇಕಲ್ವಾ. ಅವರನ್ನೂ ವಿಚಾರಿಸಬೇಕಲ್ವಾ ಎಂದು ಡಿ ಕೆ ಶಿವಕುಮಾರ್ ಅವರು ಪರೋಕ್ಷವಾಗಿ ರಮೇಶ್ ಜಾರಕೊಹೊಳಿ ವಿರುದ್ದ ಮಾತನಾಡಿದರು.