ಬೆಂಗಳೂರು: ಯಾವ್ಯಾವ ಮಂತ್ರಿಗಳು, ಅಧಿಕಾರಿಗಳು ನೇಮಕ ಹಗರಣದಲ್ಲಿದ್ದಾರೆ ಎಂದು ತಿಳಿಯುವ ಮುನ್ನ, ಮರು ಪರೀಕ್ಷೆಗೆ ಸರಕಾರ ಆದೇಶ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ದಲಿತ ಅಧಿಕಾರಿಯನ್ನು ವರ್ಗಾವಣೆ ಮಾಡಿ ಬೇರೆಯವರನ್ನು ಆ ಜಾಗಕ್ಕೆ ಹಾಕಿದ್ದಾರೆ. ಈ ಸರಕಾರಕ್ಕೆ ದಲಿತರ ಮೇಲೆ ತಮಗೆ ನಂಬಿಕೆ ಇಲ್ಲ. ಅಂತರಿಕ ಭಧ್ರತೆ ತಮಗೆ ಬಿಟ್ಟ ವಿಚಾರ .ತನಿಖಾ ವರದಿ ಬರದೆ ತಿಪ್ಪೇಸಾರಿಸುವ ದೊಡ್ಡ ಹಗರಣ ಇದು ಎಂದು ಆರೋಪಿಸಿದ್ದಾರೆ.
52 ಸಾವಿರ ಜನ ಪರೀಕ್ಷೆ ಬರೆದಿದ್ದಾರೆ. ಕೆಲವರು ಪಾಸ್ ಆಗಿದ್ದಾರೆ. ಯಾರು ಕಾರಣ ಎಂಬುದು ಬಯಲಾಗಿಲ್ಲ. ಯಾವನೋ ಕಾಂಗ್ರೆಸ್ ಶಾಸಕನ ಗನ್ ಮ್ಯಾನ್ ಅಂದಿರಿ, ಆದರೆ ನಿಮ್ಮ ಮುತ್ತು ರತ್ನಗಳು ಆಚೆ ಬರಬೇಕಲ್ವ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ:ಯಾವ ನೈತಿಕತೆ ಆಧಾರದಲ್ಲಿ ಆರಗ ಜ್ಞಾನೇಂದ್ರ ಗೃಹ ಸಚಿವರಾಗಿ ಮುಂದುವರಿದಿದ್ದಾರೆ?:ಸಿದ್ದರಾಮಯ್ಯ
8-10 ಜನ ಬಂದು ಮನವಿ ಪತ್ರ ಕೊಟ್ಟಾಗ, ಕಟ್ ಮಾಡಿ ನನ್ನ ಪೋಟೋ ಹಾಕಿದ್ದಾರೆ. ನಾ ಏನು ದ್ರಾಕ್ಷಿ ಗೊಂಡಬಿ ತಿನ್ನಲು ಹೋಗಿರಲಿಲ್ಲ. ಈ ಘಟನೆಯಿಂದ ಇಡೀ ದೇಶದಲ್ಲಿ ಕರ್ನಾಟಕದ ಬಗ್ಗೆ ಯಾವ ಸಂದೇಶ ಹೋಗಿದೆ ಗೊತ್ತಾ ಎಂದು ಪ್ರಶ್ನಿಸಿದರು.
ನಿಮ್ಮ ಸರ್ಕಾರ ಅಕ್ರಮಗಳನ್ನು ಹೊತ್ತುಕೊಂಡಿದೆ. ನಾವು ಹೇಳುವ ಮೊದಲೇ ನೀವೇ ಬಹಿರಂಗ ಮಾಡಬೇಕು. ಭ್ರಷ್ಟಾಚಾರದ ಸಾಗರದಲ್ಲಿ ಮುಳುಗಿ, ನಿಮ್ಮ ಪಕ್ಷ ಪಿಳಿ ಪಿಳಿ ಅಂತ ಒಡ್ಡಾಡ್ತಿದೆ ಎಂದು ಆರೋಪಿಸಿದರು.