Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಬಳಿಕ ಗ್ಯಾರಂಟಿ ಸ್ಥಗಿತ ಎಂದು ಯಡಿಯೂರಪ್ಪ, ಆರ್.ಅಶೋಕ್ ಹಾಗೂ ವಿಜಯೇಂದ್ರ ಹೇಳಿದ್ದಾರೆ. ಸರಕಾರದ ಗ್ಯಾರಂಟಿ ಗಳಿಂದ ಜನರು ಸಂತೋಷವಾಗಿದ್ದು, ಆದರೆ ಇದನ್ನು ನಿಲ್ಲಿಸಲು ಬಿಜೆಪಿ ನಾಯಕರು ಬಯಸುತ್ತಿದ್ದಾರೆ. ಯೋಜನೆಗಳಿಗೆ ಬಜೆಟ್‌ನಲ್ಲಿ 58 ಸಾವಿರ ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ರಾಜ್ಯದ 7 ಕೋಟಿ ಜನರ ಪೈಕಿ 5.60 ಕೋಟಿ ಜನರಿಗೆ ನಮ್ಮ ಯೋಜನೆ ತಲುಪುತ್ತಿವೆ ಎಂದರು.
ಕೋವಿಡ್ ವೇಳೆ ಸುರೇಶ ಅಂಗಡಿ ಪಾರ್ಥಿವ ಶರೀರವನ್ನು ಇಲ್ಲಿಗೆ ತಂದು ಅಂತ್ಯಸಂಸ್ಕಾರ ಮಾಡಲಿಲ್ಲ. ಜೆಸಿಬಿಯಲ್ಲಿ ಅವರ ಮೃತದೇಹ ತಳ್ಳಿ ಅಪಮಾನ ಮಾಡಿದರು. ಶೆಟ್ಟರ್ ಮನಸ್ಸು ಮಾಡಿದ್ದರೆ ಇಲ್ಲಿಯೇ ಅಂತ್ಯಸಂಸ್ಕಾರ ಮಾಡಬಹುದಿತ್ತು. ಅಂಗಡಿ ಅವರಿಗೆ ಅಗೌರವ ತೋರಿಸಿದ್ದಾರೆ. ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕದಲ್ಲಿ ಕಾಂಗ್ರೆಸ್ 10 ಕ್ಷೇತ್ರ ಗೆಲ್ಲಲಿದ್ದು, 12 ಸ್ಥಾನ ಗೆದ್ದರೂ ಅಚ್ಚರಿ ಇಲ್ಲ. ರಾಜ್ಯದಲ್ಲಿ ನಾವು 20ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
Related Articles
ಎ ದರ್ಜೆ ದೇವಾಲಯಗಳ ಆದಾಯದಲ್ಲಿ ಶೇ.10ರಷ್ಟನ್ನು ಸಿ ದರ್ಜೆಯ ದೇವಾಲಯಗಳ ಅಭಿವೃದ್ಧಿಗೆ ಬಳಸುವ ಐತಿಹಾಸಿಕ ಕಾನೂನು ಸರಕಾರ ತಂದಿತ್ತು. ಇದರಿಂದ ಹಳ್ಳಿಗಳಲ್ಲಿರುವ ಮಾರಮ್ಮ, ಕೆಂಕೇರಮ್ಮ, ಕಬ್ಟಾಳಮ್ಮ ಸಹಿತ ಸ್ಥಳೀಯ ದೇವಾಲಯಗಳ ಅಭಿವೃದ್ಧಿಗೆ ಸಹಕಾರಿಯಾಗುತ್ತಿತ್ತು. ಅಲ್ಲದೆ ಅರ್ಚಕರ ಮಕ್ಕಳ ಶಿಕ್ಷಣ, ವಿಮೆ, ಪಿಂಚಣಿ ಭದ್ರತೆಗೆ ನೀಡಲು ಮುಂದಾದರೆ ಬಿಜೆಪಿಯವರು ರಾಜ್ಯಪಾಲರಿಗೆ ಹೇಳಿ ಕಾನೂನಿಗೆ ತಡೆ ಹಿಡಿದಿದ್ದಾರೆ. ಈ ಕಾಯ್ದೆಯನ್ನು ವಿರೋಧಿಸುವ ಬಿಜೆಪಿ ಇನ್ನು ಯಾವ ರೀತಿಯಲ್ಲಿ ಧರ್ಮ ರಕ್ಷಣೆ ಮಾಡುತ್ತದೆ? ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು. ಅರ್ಚಕರಿಗೆ ನೆರವಾಗಲು ಬಿಜೆಪಿ ಅಡ್ಡಿ ಮಾಡಿದೆ ಎಂದು ಡಿಕೆಶಿ ಕಿಡಿಕಾರಿದರು.
Advertisement