Advertisement

D.K. ಸುರೇಶ್‌ ನಿವಾಸಕ್ಕೆ ಮುತ್ತಿಗೆಗೆ BJP ಯತ್ನ

11:29 PM Feb 04, 2024 | Team Udayavani |

ಬೆಂಗಳೂರು: ದಕ್ಷಿಣ ಭಾರತವನ್ನು ಪ್ರತ್ಯೇಕ ರಾಷ್ಟ್ರ ಮಾಡಬೇಕೆಂಬ ಹೇಳಿಕೆ ನೀಡಿ ಇಕ್ಕಟ್ಟಿಗೆ ಸಿಲುಕಿದ್ದ ಕಾಂಗ್ರೆಸ್‌ ಸಂಸದ ಡಿ.ಕೆ. ಸುರೇಶ್‌ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ರವಿವಾರ ಬೆಂಗಳೂರಿನಲ್ಲಿರುವ ಸುರೇಶ್‌ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಇದರ ಬೆನ್ನಲ್ಲೇ ದೇಶ ವಿಭಜನೆ ಆಗಬೇಕೆಂದು ನಾನೆಲ್ಲೂ ಹೇಳಿಯೇ ಇಲ್ಲ. ನನ್ನ ಹೇಳಿಕೆಯನ್ನು ತಿರುಚುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಸಂಸದ ಸುರೇಶ್‌ ಆರೋಪಿಸಿದ್ದಾರೆ.

Advertisement

ಸದಾಶಿವನಗರದಲ್ಲಿರುವ ಸಂಸದ ಸುರೇಶ್‌ ಅವರ ಮನೆಗೆ ಮುತ್ತಿಗೆ ಹಾಕಲು ಅರಮನೆ ಮೈದಾನದಲ್ಲಿನ ಗಾಯತ್ರಿ ವಿಹಾರದಲ್ಲಿ ಒಟ್ಟು ಸೇರಿದ್ದ ಪ್ರತಿಭಟನಕಾರರು”ಭಾರತ್‌ ಮಾತಾ ಕೀ ಜೈ, ವಂದೇ ಮಾತರಂ’ ಘೋಷಣೆಗಳನ್ನು ಕೂಗಲಾರಂಭಿಸಿದರು. ತತ್‌ಕ್ಷಣವೇ ಗಾಯತ್ರಿ ವಿಹಾರದ ಒಳಪ್ರವೇಶಿಸಿದ ಪೊಲೀಸರು, ಇಲ್ಲಿ ಗುಂಪು ಸೇರುವಂತಿಲ್ಲ, ಘೋಷಣೆ ಕೂಗುವಂತಿಲ್ಲ ಎಂದು ತಡೆದರು. ಭಾರತ್‌ ಮಾತಾ ಕೀ ಜೈ ಎನ್ನಲು ಅಡ್ಡಿಯೇಕೆ ಎಂದು ಪ್ರತಿಭಟನಕಾರರು ಪ್ರಶ್ನಿಸಿದರು. ಇದರಿಂದ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ತಳ್ಳಾಟ-ನೂಕಾಟ ನಡೆಯಿತು.

ಅಷ್ಟರಲ್ಲಿ ಗಾಯತ್ರಿ ವಿಹಾರದ ದ್ವಾರವನ್ನು ಮುಚ್ಚಲು ಪೊಲೀಸರು ಮುಂದಾದಾಗ ಘೋಷಣೆಗಳನ್ನು ಕೂಗುತ್ತಾ ರಸ್ತೆಗೆ ಬಂದ ಪ್ರತಿಭಟನಕಾರರು, ಪೊಲೀಸರಿಂದ ತಪ್ಪಿಸಿಕೊಂಡು ಸಂಸದರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ತಡೆದಾಗ ಅಲ್ಲಲ್ಲೇ ಕುಳಿತು ಧರಣಿ ಆರಂಭಿಸಿದರು. ಕೊನೆಗೆ ಲಘು ಲಾಠಿ ಪ್ರಹಾರ ಮಾಡಿ, ಪ್ರತಿಭಟನನಿರತರನ್ನು ವಶಕ್ಕೆ ಪಡೆಯಲಾಯಿತು.

ದೇಶ ವಿಭಜಿಸಬೇಕೆಂದು ನಾನು ಹೇಳಿಲ್ಲ. ಅವರು ರಾಜಕಾ ರಣ ಮಾಡಲು ಹೀಗೆ ಮಾಡುತ್ತಿದ್ದಾರೆ. ನನ್ನ ಹೇಳಿಕೆಯನ್ನು ತಿರುಚುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. -ಡಿ.ಕೆ. ಸುರೇಶ್‌, ಸಂಸದ

ಪ್ರತ್ಯೇಕ ರಾಷ್ಟ್ರದ ಕೂಗು ಎಬಿಸಿದ್ದ ಸಂಸದ ಸುರೇಶ್‌ ಅವರ ಬೆಂಗಳೂರು ನಿವಾಸದ ಎದುರು ಶಾಂತವಾಗಿ ಪ್ರತಿಭಟಿಸುತ್ತಿದ್ದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿ ದ್ದಾರೆ. ಎಷ್ಟೇ ಬಲಶಾಲಿಯಾದರೂ ಅವರು ಪಶ್ಚಾತ್ತಾಪ ಪಡುವವರೆಗೆ ಹೋರಾಟ ನಿಲ್ಲಿಸುವುದಿಲ್ಲ.
– ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

Advertisement

ದೇಶವಿಭಜನೆಯ ಕಾಂಗ್ರೆಸಿನ ಹಳೆ ಚಾಳಿಯನ್ನು ವಿರೋಧಿಸಿ ಪ್ರತಿಭಟಿಸಿದ ಯುವ ಮೋರ್ಚಾ ಕಾರ್ಯಕರ್ತರ ವಿರುದ್ಧ ಪೊಲೀಸ್‌ ಬಲಪ್ರಯೋಗ ಮಾಡಿದ್ದನ್ನು ಬಲವಾಗಿ ಖಂಡಿ ಸುತ್ತೇನೆ. – ಹರೀಶ್‌ ಪೂಂಜ, ಶಾಸಕ

ಡಿ.ಕೆ. ಸುರೇಶ್‌ ದೇಶದ ಮುಂದೆ ಕ್ಷಮೆ ಯಾಚಿಸಿ, ಹೇಳಿಕೆ ಹಿಂಪಡೆಯಬೇಕು. ಕಾಂಗ್ರೆಸ್‌ ಪಕ್ಷ ಸಂಸದರಿಗೆ ಬುದ್ಧಿ ಹೇಳುವ ಕೆಲಸ ಮಾಡಬೇಕು. ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರನ್ನು ಬಂಧಿಸಿರುವವರ ವಿರುದ್ಧ ಶಿಸ್ತು ಕ್ರಮ ಜರಗಿಸಬೇಕು. ಕೂಡಲೇ ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ, ರಾಜ್ಯಾದ್ಯಂತ ಈ ಬೆಂಕಿ ಹೊತ್ತಿ ಸರಕಾರ ಸುಟ್ಟು ಹೋಗುತ್ತದೆ.
– ಪಿ.ರಾಜೀವ್‌, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ಮಾಡುವ ಮೂಲಕ ಕಾಂಗ್ರೆಸ್‌ ಸರಕಾರ ತನ್ನ ರಾಜ್ಯದಲ್ಲಿರುವ ಗೂಂಡಾ ರಾಜ್ಯ ಎಂದು ಮತ್ತೂಮ್ಮೆ ಸಾಬೀತುಪಡಿಸಿದೆ. ನಾವು ಗಾಂಧಿ ರಾಮನ ಭಕ್ತರು ಎನ್ನುವ ಸಿಎಂ ಇದೇನಾ ನಿಮ್ಮ ಗಾಂಧಿ ರಾಮನ ತತ್ವ? ಇದೇನಾ ಸರ್ವಜನಾಂಗದ ಶಾಂತಿಯ ತೋಟ?
– ಆರ್‌.ಅಶೋಕ, ವಿಪ‌ಕ್ಷ ನಾಯಕ

ದುಷ್ಟತನದ ಹೇಳಿಕೆ ನೀಡಿದ ಸುರೇಶ್‌ ನಿವಾಸದ ಎದುರು ಶಾಂತ ರೀತಿಯಲ್ಲಿ ಪ್ರತಿಭಟಿಸುತ್ತಿದ್ದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರ ಮೇಲೆ ನಡೆದ ಪೊಲೀಸ್‌ ದಾದಾಗಿರಿ ಖಂಡನೀಯ. ಇದರಿಂದ ನಮ್ಮ ಬಾಯಿ ಮುಚ್ಚಿಸಬಹುದು ಎಂದುಕೊಂಡಿದ್ದರೆ ಅದು ನಿಮ್ಮ ಮೂರ್ಖತನ. –ಸಿ.ಟಿ.ರವಿ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next