Advertisement

“ಕುವೆಂಪು ಪ್ರಕೃತಿಯಯನ್ನೇ ದೈವತ್ವ ಎಂದಿದ್ದರು”

07:46 PM Jan 16, 2021 | Team Udayavani |

ನಾಗಮಂಗಲ: ಕುವೆಂಪು ಅವರು ಬರೆದ ಸಾಹಿತ್ಯಗಳು ಸಾಹಿತ್ಯದ 32 ಆಯಾಮಗಳಿಗೆ ಸಂಬಂಧಿಸಿದ್ದು, ಅವರ ಕೃತಿಗಳನ್ನು ವಿಮರ್ಶಕರೇ ಒಪ್ಪಿರುವಂಥ ಶ್ರೇಷ್ಠ ಸಾಹಿತ್ಯಗಳಾಗಿವೆ ಎಂದು ಕುವೆಂಪು ವಿವಿಯ ವಿಶ್ರಾಂತ ಉಪಕುಪಲತಿ ಡಾ. ಚಿದಾನಂದಗೌಡ ತಿಳಿಸಿದರು.

Advertisement

ನಾಗಮಂಗಲದ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶುಕ್ರವಾರ ಭೈರವೈಕ್ಯ ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 76ನೇ ಜಯಂತ್ಯುತ್ಸವ ಹಾಗೂ 8ನೇ ವರ್ಷದ ಸಂಸ್ಮರಣಾ ಮಹೋತ್ಸವದ ಪ್ರಯುಕ್ತ ನಡೆದ “ರಾಷ್ಟ್ರಕವಿ ಕುವೆಂಪು ಸಂಕಥನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಾಲೋಸ್ಮಿ ಮಹಾಕಾವ್ಯ ರಚಿಸಲಾಗಲಿಲ್ಲ: ಕುವೆಂಪು ಕಾಲೋಸ್ಮಿ ಮಹಾಕಾವ್ಯ ರಚಿಸಲು ಚಿಂತನೆ ಮಾಡಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಅವರು ಚಿಂತನೆ ಮಾಡಿದ್ದ ಮಹಾಕಾವ್ಯ ರಚನೆಯಾಗಿದ್ದರೆ ನಮ್ಮ ಕನ್ನಡ ಸಾಹಿತ್ಯಕ್ಕೆ ಮೂರು ಸಾವಿರ ಪುಟಗಳ ಮತ್ತೂಂದು ಶ್ರೇಷ್ಠ ಕೃತಿ ಲಭ್ಯವಾಗುತ್ತಿತ್ತು ಎಂದರು.

ಪ್ರಕೃತಿಯಲ್ಲೇ ಸಾಹಿತ್ಯ ರಚನೆ: ಅಲ್ಲದೇ ಅವರು ಪ್ರಕೃತಿಯ ಆಯಾಮದಲ್ಲಿ ಸಾಹಿತ್ಯ ರಚನೆ ಮಾಡಿದ್ದರು. ಪ್ರಕೃತಿಯನ್ನು ದೈವತ್ವವೆಂದು ಕರೆಯುತ್ತಿದ್ದರು. ಕಾಡನ್ನು ಕಂಡರೆ ಕುವೆಂಪು ಅವರಿಗೆ ಅಪಾರ ಪ್ರೀತಿಯಿತ್ತು. ಜತೆಗೆ ಅವರ ಮತ್ತೊಂದು ಆಯಾಮವೆಂದರೆ ಕನ್ನಡ ಭಾಷಾ ಪ್ರೇಮವಾಗಿತ್ತು. ಕನ್ನಡವು ಶಿಕ್ಷಣದ ಮಾಧ್ಯಮವಾಗಬೇಕು ಎಂಬುದು ಅವರ ಚಿಂತನೆಯಾಗಿತ್ತು. ವಿಶ್ವ ಪ್ರೇಮ ಮತ್ತು ಸಾಮಾಜಿಕ ಕಳಕಳಿಎಲ್ಲ ರಚನೆಗಳಲ್ಲೂ ಇತ್ತು ಎಂದು ಹೇಳಿದರು.

ಜ್ಞಾನ ಸಾಧಕನ ಸತ್ತು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಕುವೆಂಪು ಅವರನ್ನು ಅರ್ಥ ಮಾಡಿಕೊಳ್ಳುವುದು ಹಾಗೂ ಅವರ ಕುರಿತು ಮಾತನಾಡುವುದು ಅತ್ಯಂತ ಕಷ್ಟದ ವಿಷಯ. ಎಂದಿಗೂ ಜ್ಞಾನವು ಸಾಧಕನ ಸ್ವತ್ತು ಎಂದು ಸಾಧಿಸಿ ತೋರಿಸಿದವರು. ಅವರು ಮನುಷ್ಯತ್ವಕ್ಕೆ ನಿಜವಾದ ವಿಶ್ವಮಾನವತೆ ದರ್ಶನ ಮಾಡಿಸಿದವರು ಎಂದರು. ಕಾರ್ಯಕ್ರಮದಲ್ಲಿ ಕುವೆಂಪು ಅವರು ಬರೆದ ಹಲವು ಭಾವಗೀತೆಗಳನ್ನು ವೇದಿಕೆಯಲ್ಲಿ ಕಲಾವಿದರು ಹಾಡಿದರು. ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

Advertisement

ಇದನ್ನೂ ಓದಿ:ಜಿಲ್ಲೆಯ 6 ಲಸಿಕಾ ಕೇಂದ್ರಗಳಲ್ಲಿ ಕೋವಿಡ್ ಲಸಿಕಾ ಅಭಿಯಾನ ಯಶಸ್ವಿ

ಕಾರ್ಯಕ್ರಮದಲ್ಲಿ ಕುವೆಂಪು ಕೃತಿಗಳ ಪ್ರದರ್ಶನ ನಡೆಯಿತು. ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಬಿಇಒ ಜಗದೀಶ್‌, ಗಾಂಧಿಭವನದ ಕಾರ್ಯದರ್ಶಿ ಶಿವರಾಜು, ಮಂಜು  ನಾಥ್‌, ಸುಬ್ಬರಾಯ, ಡಾ.ಪ್ರೊ. ಚಂದ್ರಶೇಖರಯ್ಯ, ಆದಿಚುಂಚನಗಿರಿ ಶಾಖಾ ಮಠಗಳ ಸ್ವಾಮೀಜಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next