Advertisement

ಡಿ. 17: ಬನ್ನಂಜೆ ಬಾಬು ಅಮೀನ್‌ರಿಗೆ ಅಭಿನಂದನೆ

11:45 PM Dec 15, 2023 | Team Udayavani |

ಉಡುಪಿ: ಹಿರಿಯ ಜಾನಪದ ವಿದ್ವಾಂಸ, ಸಮಾಜ ಸೇವಕ ಬನ್ನಂಜೆ ಬಾಬು ಅಮೀನ್‌ ಅವರು 80ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಹಿನ್ನೆಲೆಯಲ್ಲಿ ಬನ್ನಂಜೆ ಬಾಬು ಅಮೀನ್‌-80 ಅಭಿನಂದನ ಸಮಿತಿ ವತಿಯಿಂದ ಸಿರಿತುಪ್ಪೆ ಕಾರ್ಯಕ್ರಮ ಬನ್ನಂಜೆಯ ನಾರಾಯಣಗುರು ಆಡಿಟೋರಿಯಂನಲ್ಲಿ ಡಿ.17ರಂದು ಬೆಳಗ್ಗೆ 8.45ರಿಂದ ನಡೆಯಲಿದೆ.

Advertisement

ಬೆಳಗ್ಗೆ 8.45ರಿಂದ ಗುರುಪೂಜೆ, ನಾಗಸ್ವರ ವಾದನ, ಡೋಲುವಾದನ, ಪಾಡ್ಡನ ನಡೆಯಲಿದೆ. 10ಕ್ಕೆ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಡಾ| ಜಿ. ಶಂಕರ್‌ ಉದ್ಘಾಟಿಸಲಿದ್ದಾರೆ. ಬನ್ನಂಜೆ ಬಾಬು ಅಮೀನ್‌ ಅವರ ತುಳುನಾಡ ಸುತ್ತಮುತ್ತ ಹಾಗೂ ಗರೋಡಿ ಒಂದು ಚಿಂತನೆ ಪುಸ್ತಕ ಬಿಡುಗಡೆ ನಡೆಯಲಿದೆ. 10.30ಕ್ಕೆ ಬನ್ನಂಜೆ ಬಾಬು ಅಮೀನ್‌ ಅವರ ತುಳುನಾಡ ಜಾನಪದ ಸಾಹಿತ್ಯ ಸಂಕಲನ ವಿಚಾರಗೋಷ್ಠಿ, 11.45ಕ್ಕೆ ಪಟ್ಲ ಸತೀಶ್‌ ಶೆಟ್ಟಿ ಮತ್ತು ಬಳಗದ ಸುದರ್ಶನ ವಿಜಯ ಯಕ್ಷಗಾನ, ಮಧ್ಯಾಹ್ನ 1.30ಕ್ಕೆ ಆರಾಧನಾ ಗೋಷ್ಠಿ, 2.30ಕ್ಕೆ ವೀನಸ್‌ ಇಂಟರ್‌ನ್ಯಾಶನಲ್‌ ಸಾರಥ್ಯದಲ್ಲಿ ಬನ್ನಂಜೆ ಬಾಬು ಅಮೀನ್‌ ಅವರ ಸಾಕ್ಷ್ಯಚಿತ್ರ ಪ್ರದರ್ಶನ, 3ಕ್ಕೆ ಅಭಿಮಾನದ ಅಭಿವಂದನೆ ಅರ್ಪಣೆ ನಡೆಯಲಿದೆ. ವಿಶ್ರಾಂತ ಕುಲಪತಿ ಪ್ರೊ| ಕೆ.ಚಿನ್ನಪ್ಪ ಗೌಡ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ಪತ್ರಕರ್ತ ದಿನೇಶ್‌ ಅಮೀನ್‌ ಮಟ್ಟು ಅಭಿನಂದನ ಭಾಷಣ ಮಾಡಲಿದ್ದಾರೆ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್‌ ಆರ್‌. ಅಭಿನಂದನ ಗ್ರಂಥ ಸಿರಿ ಕುರಲ್‌ ಅನಾವರಣ ಮಾಡಲಿದ್ದಾರೆ. ಅಭಿನಂದನ ಸಮಿತಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹಾಗೂ ಕಾರ್ಯಾಧ್ಯಕ್ಷ ರಘುನಾಥ್‌ ಮಾಬಿಯಾನ್‌ ಅಭಿನಂದನೆ ಸಲ್ಲಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮುಂಬಯಿ ಉದ್ಯಮಿ ಮೇನಾಳಗುತ್ತು ಕಿಶನ್‌ ಜೆ. ಶೆಟ್ಟಿ, ಬನ್ನಂಜೆ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಮಾಧವ ಬನ್ನಂಜೆ, ಜಾನಪದ ವಿದ್ವಾಂಸ ಡಾ| ವೈ.ಎನ್‌.ಶೆಟ್ಟಿ ಭಾಗವಹಿಸಲಿದ್ದಾರೆ. 4.30ಕ್ಕೆ ಅಭಿಮಾನಿಗಳು ಹಾಗೂ ಸಂಘ-ಸಂಸ್ಥೆಗಳ ಗೌರವಾರ್ಪಣೆ ನಡೆಯಲಿದೆ.

ಇದೇ ಸಂದರ್ಭ ಅಳಿವಿನಂಚಿನಲ್ಲಿರುವ ತುಳುನಾಡಿನ ಪರಿಕರಗಳ ಪ್ರದರ್ಶನ, ಪುಸ್ತಕ ಪ್ರದರ್ಶನ ಹಾಗೂ ಮಾರಾಟ ನಡೆಯಲಿದ್ದು, ಜನಪದದ ಇತರ ಪ್ರಕಾರಗಳ ಪ್ರಾತಕ್ಷಿಕೆ ನಡೆಯಲಿದೆ. ಜನಪದ ನೃತ್ಯ ಸಂಯೋಜನೆಯನ್ನೂ ಆಯೋಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next